ದರ್ಶನ್ ನಾಯಕರಾಗಿರುವ ಬಹುನಿರೀಕ್ಷಿತ ಕಾಟೇರ ಸಿನಿಮಾದ ಟ್ರೈಲರ್ ಮತ್ತು ಪ್ರಿ ರಿಲೀಸ್ ಈವೆಂಟ್ ಇಂದು ಅದ್ಧೂರಿಯಾಗಿ ನಡೆಯಲಿದೆ.ಇಂದು ಸಂಜೆ ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಕಾಟೇರ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ. ಜೊತೆಗೆ ಟ್ರೈಲರ್ ಕೂಡಾ ಲಾಂಚ್ ಆಗುತ್ತಿದೆ. ಡಿಸೆಂಬರ್ 29 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಡಿಸೆಂಬರ್ ಕೊನೆಯಲ್ಲಿ ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ಅಪ್ಪಟ ಕನ್ನಡ ಸಿನಿಮಾ ಕಾಟೇರ ಸ್ಪರ್ಧೆಗಿಳಿಯಲಿದೆ. ನಟ ದರ್ಶನ್ ಗಿರುವ ಮಾರುಕಟ್ಟೆ ಎಷ್ಟು ಎಂದು ಈ ಸಿನಿಮಾ ತೋರಿಸಿಕೊಡಲಿದೆ.
ಎಂದಿನಂತೆ ದರ್ಶನ್ ಶೈಲಿಯ ಮಾಸ್ ಸಿನಿಮಾ ಇದಾಗಿದೆ. ಈಗಾಗಲೇ ಚಿತ್ರದ ಕೆಲವು ಆಕ್ಷನ್ ದೃಶ್ಯಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಾಗಿ ಟ್ರೈಲರ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ತರುಣ್ ಸುಧೀರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.