Sandalwood Leading OnlineMedia

ಅನ್ನದಾತನ ಬದುಕಿನ ಅನಾವರಣ

ಒಂದು ಮನುಷ್ಯ ಸದ್ಯ ಕಲುಷಿತ ಆಹಾರವನ್ನೇ ತಿಂದು ಬದುಕು ಸಾಗಿಸುವ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ್ದಾನೆ. ಇನ್ನೊಂದು ಕಡೆ ಶುದ್ಧ ಆಹಾರವನ್ನು ಒದಗಿಸುವ ರೈತನ ಬಾಳು ಮೂರಾಬಟ್ಟೆಯಾಗಿದೆ. ‘ಕಾಸಿನ ಸರ’ ಸಿನಿಮಾದಲ್ಲಿ ನಿರ್ದೇಶಕ ಎನ್.ಆರ್.ನಂಜು0ಡೇಗೌಡ ಇವುಗಳ ಬಗ್ಗೆ ಬೆಳಕು ಚೆಲ್ಲುವ, ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ. ಕೃಷಿಕ ಕುಟುಂಬದಿAದ ಬಂದ ಯುವಕರು, ಕೃಷಿಯನ್ನು ನಂಬಿ ಸೋತು, ನಗರದಲ್ಲಿಯೇ ಕೆಲಸ ಹುಡುಕಿಕೊಂಡು ಅಲ್ಲಿಯೇ ಉಳಿದುಕೊಂಡು, ತನ್ನ ಹುಟ್ಟೂರಿನ ಸವಿ ನೆನೆಪಿನಲ್ಲಿಯೇ ಕಾಲ ತಳ್ಳುತ್ತಿದ್ದಾರೆ. `ಕಾಸಿನ ಸರ’ ಸಿನಿಮಾದಲ್ಲಿ ಇಂತಹದ್ದೊAದು ಮಾನಸಿಕ ಜಂಜಾಟದ ಕಥೆಯನ್ನು ಹೆಣೆಯಲಾಗಿದೆ. ನಾಯಕ ಸುಂದರೇಶ್ (ವಿಜಯ್ ರಾಘವೇಂದ್ರ) ಕೃಷಿಯಲ್ಲಿ ಪದವಿ ಪಡೆದು ತನ್ನ ಹಳ್ಳಿಯಲ್ಲಿ ವ್ಯವಸಾಯ ಮಾಡಿ ಜೀವನ ಮಾಡಬೇಕು ಎಂದು ಮರಳಿ ಹಳ್ಳಿಗೆ ಬರುತ್ತಾನೆ. ಆದರೆ ಸುಂದರೇಶ್‌ನ ಶಿಕ್ಷಣಕ್ಕೆ ದುಡ್ಡು ಸುರಿದ ಸಹೋದರನಿಗೆ ಅವನನ್ನು ದೊಡ್ಡ ಹುದ್ದೆಯಲ್ಲಿ ನೋಡುವ ಆಸೆ.

*ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್*

ಆದರೆ ನಾಯಕನಿಗೆ ಮಾತ್ರ ಕೃಷಿಯೇ ಉಸಿರು. ಇದೇ ವಿಚಾರಕ್ಕೆ ಅಣ್ಣ ತಮ್ಮ ಇಬ್ಬರೂ ಬೇರೆ ಬೇರೆಯಾಗುತ್ತಾರೆ. ಇಬ್ಬರೂ ದೂರಾದಾಗ ಕುಟುಂಬದ ಹೆಗ್ಗುರತಾದ ಕಾಸಿನ ಸರದ ಯಾರಿಗೇ ಸೇರಬೇಕು ಅನ್ನುವ ಗುದ್ದಾಟ ಆರಂಭವಾಗುತ್ತದೆ. ಆ ಕಾಸಿನ ಸರ ಹೇಗೆ ಅವರಿಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ? ಕೃಷಿ ಮೂಲಕವೇ ಸುಂದರ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ಸುಂದರೇಶನ ಬದುಕು ಕೊನೆಗೂ ಸುಂದರವಾಗುತ್ತದಾ? ಸುಂದರೇಶ ಮತ್ತು ಆತನ ಪ್ರೇಯಸಿಯ ನಂಡುವಿನ ಸಂಬAಧ ಏನಾಗುತ್ತದೆ? ಎಲ್ಲದಕ್ಕೂ ನಿರ್ದೇಶಕರು ತೆರೆಯ ಮೇಲೆ ಸಮರ್ಥವಾಘಿ ಉತ್ತರಿಸಿದ್ದಾರೆ.ಕಾರ್ಪೊರೇಟ್ ಸಂಸ್ಥೆಗಳು ಕೃಷಿಕರನ್ನು ಅವರ ಅರವಿಗೇ ಬಾರದಂತೆ ಹೇಗೆ ಮಣ್ಣು ಮುಕ್ಕಿಸುತ್ತಾರೆ ಅನ್ನವುದರ ಜೊತೆಗೆ, ಪ್ರೀತ-ಪ್ರೇಮ-ಪ್ರಣಯ, ಫ್ಯಾಮಿಲೀ ಸೆಂಟಿಮೆAಟ್, ಇಂದಿನ ಡಿಜಿಟಲ್ ಯುಗದಲ್ಲಿ ಕೃಷಿಯ ಮಹತ್ವ.. ಹೀಗೆ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಮನೋರಂಜನಾತ್ಮಕವಾಗಿ ಹೇಳಿದ್ದಾರೆ. ಭಾರತದಲ್ಲಿ ಕೃಷಿಕ ಬದಲಾದರೆ ದೇಶನದ ಭವಿಷ್ಯವೇ ಉಜ್ವಲವಾಗಬಲ್ಲುದು ಎಂಬುದನ್ನು ಸಾಕಷ್ಟು ಪಾತ್ರಗಳ ಮೂಲಕ ನಾಜೂಕಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇನ್ನು, ಸಾವಯುವ ಕೃಷಿ ಎಂಬುದು ಇಂದಿನ `ಮೊಬೈಲ್ ಕೂಸು’ಗಳಿಗೆ ಎಷ್ಟು ಮುಖ್ಯ ಎಂಬುದನ್ನು ಸಹ ಚಿತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ.

 

ಜನಮನ ಗೆದ್ದ’ಕಬ್ಜ’ ಟ್ರೇಲರ್​:  ಆರ್.ಚಂದ್ರು ಮ್ಯಾಜಿಕ್‌ಗೆ ಬಾಲಿವುಡ್ ಫಿದಾ

ನಟ ವಿಜಯ್ ರಾಘವೇಂದ್ರ ಯುವ ರೈತನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದರೆ, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಉಮಾಶ್ರೀ ನೀನಾಸಂ ಅಶ್ವತ್ಥ್, ಮಂಡ್ಯ ರಮೇಶ್ ಸೇರಿದಂತೆ ಎಲ್ಲಾ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾಟೋಗ್ರಫರ್ ವೇಣು ಹಳ್ಳಿಯ ಪರಿಸರವನ್ನು ಅದ್ಭುತವಾಗಿ ಸರೆ ಹಿಡಿದಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಅವರ ಸಂಗೀತ ಥೀಯೇಟರ್‌ನಲ್ಲಿ ಸಂಭ್ರಮದ ವಾತಾವರಣವನ್ನೇ ಸೃಷ್ಟಿ ಮಾಡುತ್ತದೆ. ಒಟ್ಟಿನಲ್ಲಿ, ಅಪ್ಪಟ ಗ್ರಾಮೀಣ ಸೊಗಡಿನ `ಕಾಸಿನ ಸರ’ ಚಿತ್ರ ಪ್ರೇಕ್ಷಕನನ್ನು ತನ್ನ ಬಾಲ್ಯಕ್ಕೆ ಕರೆದುಕೊಂಡು ಹೋಗಿ, ಒಂದು ಅನೂಹ್ಯ ಭಾವವನ್ನು ಉಳಿಸಿಹೋಗುತ್ತದೆ.

Share this post:

Related Posts

To Subscribe to our News Letter.

Translate »