ಕನಿಂಗ್ಹ್ಯಾಮ್ ರಸ್ತೆ ಚಾಮುಂಡೇಶ್ವರಿ ಸ್ಟುಡಿಯೋ ಒಳ ಹೊಕ್ಕಾಗ ವಿಜಯ ರಾಘವೇಂದ್ರ ದಿಕ್ಕಾರ ದಿಕ್ಕಾರ ಎಂದು ಕೂಗುತಿದ್ದ ಧ್ವನಿ ಕೇಳಿ ಬರುತ್ತಿತು. ಕೂತೂಹಲದಿಂದ ಹೋಗಿ ನೋಡಿದಲ್ಲಿ ಅವರ ಕೂಗು ಒಂದು ರೈತ ವಿರೋಧಿ ಕಂಪನಿ ಒಂದರ ವಿರುದ್ಧ ಎಂದು ಕೇಳಿಬಂತು. ಇನ್ನು ಪೂರ್ಣ ಸತ್ಯಂಷಾ ತಿಳಿಯಲು ಅದು,’ಕಾಸಿನ ಸರ ‘ಚಿತ್ರದ ಡಬ್ಬಿಂಗ್ ಎಂದು ತಿಳಿಯಿತು.
ನೇಟಿವ್ ಕ್ರಿಯೇಷನ್ಸ್ ಲಾಂಚನದಲ್ಲಿ ಈ. ದೊಡ್ಡನಾಗಯ್ಯ ನಿರ್ಮಿಸಿ, ಎನ್. ಆರ್. ನಂಜುಂಡೇಗೌಡ ನಿರ್ದೇಶಕರಾಗಿರುವ ಕಾಸಿನ ಸರ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ನ ಕೆಲಸ ಪ್ರಾರಂಭ ಆಗಿದೆ. ಚಿತ್ರದ ತಾರಾಗಣದಲ್ಲಿ ವಿಜಯ ರಾಘವೇಂದ್ರ ಜೊತೆಗೆ ನಾಯಕಿಯಾಗಿ ಹರ್ಷಿಕಾ ಪೂಣಚ ಹಾಗೂ ಉಮಾಶ್ರೀ,ನೀನಾಸಂ ಅಶ್ವಥ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೆಗೌಡ, ಮಂಡ್ಯ ರಮೇಶ್, ಮೀನಪ್ರಕಾಶ್ ಇದ್ದಾರೆ.
ರೈತರ ಸಾಧನೆಗೇ ಪ್ರಶಸ್ತಿ ನೀಡುವ ಅತಿಥಿಯಾಗಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಚಿತ್ರಕ್ಕೆ ಪಾತ್ರ ಮಾಡುವ ಮೂಲಕ ಚಿತ್ರಕ್ಕೆ ಶುಭಾಶಯಗಳು ಕೋರಿದ್ದಾರೆ.ಹೆಚ್. ಸಿ ವೇಣು ಛಾಯಾಗ್ರಹಣ, ಶ್ರೀಧರ್ ಸಂಭ್ರಮ್ ಸಂಗೀತ, ಸುರೇಶ್ ಅರಸ್ ಸಂಕಲನ,ಸಂಭಾಷಣೆ ಎಸ್. ಜಿ. ಸಿದ್ದರಾಮಯ್ಯ,ವಸಂತ್ ರಾವ್ ಕುಲಕರ್ಣಿ ಕಲೆ, ನಾಗೇಂದ್ರ, ಬಿ. ರಾಮಮೂರ್ತಿ ಕೋಲಾರ ನಾಗೇಶ್ ಚಿತ್ರದ ತಾಂತ್ರಿಕ ವರ್ಗ.