Sandalwood Leading OnlineMedia

‘ಕರ್ಕಿ’ ರೂಪದಲ್ಲಿ ‘ಪರಿಯೆರುಂ ಪೆರುಮಾಳ್’ ; ಘನಘೋರ ಜಾತಿ ಸಂಘರ್ಷವನ್ನು ಬಿಚ್ಚಿಟ್ಟ ಟ್ರೇಲರ್

ತಮಿಳಿನಲ್ಲಿ 90ರ ದಶಕದಲ್ಲಿ ‘ಸೂರ್ಯನ್’, ‘ಐ ಲವ್ ಇಂಡಿಯಾ’, ‘ಇಂದು’, ‘ಕಲ್ಲೂರಿ ವಾಸಲ್’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು ಪವಿತ್ರನ್. ಅವರು ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಕರ್ಕಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮರಿಸೆಲ್ವರಾಜ್ ನಿರ್ದೇಶನದ ‘ಪರಿಯರುಂ ಪೆರುಮಾಳ್’ ಚಿತ್ರದ ರಿಮೇಕ್ ಇದಾಗಿದೆ.

‘ಪರಿಯೆರುಂ ಪೆರುಮಾಳ್’ ತಮಿಳಿನಲ್ಲಿ ಸಂಚಲನ ಮೂಡಿಸಿದ್ದ ಚಿತ್ರ. ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಹೊಂದಿರುವ ಆ ಚಿತ್ರವನ್ನು ಕನ್ನಡದ ನೆಲಕ್ಕೆ ಅಗತ್ಯವಾದ ಒಂದಷ್ಟು ಬದಲಾವಣೆಯೊಂದಿಗೆ ನಿರ್ಮಿಸಿದ್ದೇವೆ. ನಮ್ಮ ನಡುವೆಯೇ ನಡೆಯುವ ನೈಜ ಕಥೆ. ಇಲ್ಲಿ ಯಾವುದನ್ನೂ ವೈಭವೀಕರಿಸದೆ, ನೈಜವಾಗಿ ಎಲ್ಲವನ್ನೂ ಪ್ರೇಕ್ಷಕರ ಮುಂದಿಡುವ ಕೆಲಸ ಮಾಡಿದ್ದೇವೆ. ಈ ತಿಂಗಳಿನಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ ಪವಿತ್ರನ್.

ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ, ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ‘ವಾಟ್ಸಾಪ್ ಲವ್’, ‘ರಾಜರಾಣಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಜಯಪ್ರಕಾಶ್ (ಜೆ.ಪಿ) ರೆಡ್ಡಿ ‘ಕರ್ಕಿ’ ಚಿತ್ರದ ನಾಯಕ. ಅವರಿಗೆ ಮಲಯಾಳಿ ಬೆಡಗಿ ಮೀನಾಕ್ಷಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ ಮೊದಲಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಹೃಷಿಕೇಶ ಛಾಯಾಚಿತ್ರಗ್ರಹಣ, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಅರ್ಜುನ್ ಜನ್ಯ ಸಂಗೀತವಿದೆ.

 

Share this post:

Related Posts

To Subscribe to our News Letter.

Translate »