ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್. ಇದೇ ತಿಂಗಳಿನಿಂದ ಶೂಟಿಂಗ್ ಶುರು ಮಾಡಲು ಯೋಜನೆ ರೂಪಿಸಿಕೊಂಡಿದೆ. ಇದರ ಬೆನ್ನಲ್ಲೇ ಸುದ್ದಿಯೊಂದು ಹೊರ ಬಿದ್ದಿದೆ. ತಾನೂ ಯಶ್ ಜೊತೆಗೆ ನಟಿಸಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದ ಕರೀನಾ ಕಪೂರ್ ಈ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಕರೀನಾ ಕಪೂರ್ ಜಾಗವನ್ನು ಬಾಲಿವುಡ್ನ ಕಿಯಾರ ಅಡ್ವಾಣಿ ತುಂಬುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.
ಗೀತು ಮೋಹನ್ದಾಸ್ ನಿರ್ದೇಶನದ, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಈಗಾಗಲೇ ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.
ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಹಿಂದಿ ನಟ ನವಾಜುದ್ದೀನ್ ಸಿದ್ದಿಕ್ ಕೂಡ ಚಿತ್ರದ ಭಾಗವಾಗಿದ್ದಾರೆ ಎಂದು ವರದಿಯಾಗಿದೆ.ಇತ್ತೀಚಿನ ಸುದ್ದಿಯೆಂದರೆ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಯಶ್ ಜೊತೆಗೆ ಟಾಕ್ಸಿಕ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ಮಹಾನಟಿ’ ವೇದಿಕೆಯಲ್ಲಿ ಅಮ್ಮನ ನೆನೆದು ಕಣ್ಣೀರು ಹಾಕಿದ ವಿನೋದ್ ರಾಜ್
ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿರುವ ಕಿಯಾರಾಗೆ ಇದು ಚೊಚ್ಚಲ ಕನ್ನಡ ಚಿತ್ರವಾಗಲಿದೆ.
ಹಿಂದಿ ಚಿತ್ರರಂಗದ ಬಹುತೇಕ ನಟ-ನಟಿಯರು ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಕನ್ನಡ ಸಿನಿಮಾಗಳ ಜನಪ್ರಿಯತೆಯಿಂದಾಗಿ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ನಟಿಸಲೂ ಕೂಡ ನಟ-ನಟಿಯರು ಮುಂದಾಗುತ್ತಿದ್ದಾರೆ.