ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನಿಮಾ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಕೆಜಿಎಫ್- 2 ಬಳಿಕ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ.
ಕೆವಿಎನ್ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಟ್ ಮಾಡುತ್ತಿದ್ದಾರೆ. ಸದ್ಯ ಇದೀಗ ಬಿಗ್ ಅಪ್ಡೇಟ್ ಒಂದು ಸಿಕ್ಕಿದ್ದು ಯಶ್ಗೆ ಬಾಲಿವುಡ್ ಬ್ಯೂಟಿ ಜೋಡಿ ಆಗಲ್ವಂತೆ.
ಇದನ್ನೂ ಓದಿ :ನನ್ನ ಶಕ್ತಿ – ಕನ್ನಡ , ನನ್ನ ದೌರ್ಬಲ್ಯ – ಕನ್ನಡಿ ! -ಮಾಸ್ತಿ (ಖ್ಯಾತ ಸಂಭಾಷಣೆಗಾರ) ; Chittara Exclusive
ಟಾಕ್ಸಿಕ್ನಲ್ಲಿ ಯಶ್ ಜೋತೆಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕರೀನಾ ಕಪೂರ್ ಅವರು ಟಾಕ್ಸಿಕ್ ಸಿನಿಮಾ ತಂಡದಿಂದ ಹೊರ ಬಂದಿದ್ದಾರೆ.
ಸಿನಿಮಾಕ್ಕಾಗಿ ಶೂಟಿಂಗ್ ಮಾಡಲು ಡೇಟ್ಸ್ ಸರಿಯಾಗಿ ಹೊಂದಿಕೆ ಆಗದ ಕಾರಣ ಚೆಲುವೆ ಟಾಕ್ಸಿಕ್ನಲ್ಲಿ ಅಭಿನಯ ಮಾಡುತ್ತಿಲ್ಲ. ಈ ಮೂಲಕ ಕರೀನಾ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದ, ಪ್ರಾಜೆಕ್ಟ್ ಅವರ ಕೈ ಬಿಟ್ಟು ಹೋಗಿದೆ ಎನ್ನಲಾಗಿದೆ.
ಇದನ್ನೂ ಓದಿ :ಧೀರೇನ್ ಆರ್ ರಾಜ್ ಕುಮಾರ್ ಆದ ಧೀರೇನ್ ರಾಮ್ ಕುಮಾರ
ಇನ್ನು ಬಾಲಿವುಡ್ ಚೆಲುವೆ ಕರೀನಾ ಕಪೂರ್ ಅವರು ಈ ಹಿಂದೆ ಯಶ್ ತಮ್ಮ ಫೇವರಿಟ್ ನಟ ಎಂದು ಹೇಳಿಕೊಂಡಿದ್ದರು. ಅಂದ ಹಾಗೆಯೇ ಇದು ಗ್ಯಾಂಗ್ಸ್ಟರ್ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಟಾಕ್ಸಿಕ್ ಚಿತ್ರದಲ್ಲಿ ಕರೀನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು.
ಸಿನಿಮಾದಲ್ಲಿ ಯಾವ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವುದು ಚಿತ್ರ ತಂಡ ಬಹಿರಂಗ ಪಡಿಸಿರಲಿಲ್ಲ. ಆದರೆ ಈಗ ಟಾಕ್ಸಿಕ್ನಿಂದಲೇ ಕರೀನಾ ದೂರ ಸರಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.