ಟೀಸರ್ ಗೆದ್ದ ಖುಷಿಯಲ್ಲಿ “ಡೆಕ್ಕನ್ ಕಿಂಗ್ ಪ್ರೊಡಕ್ಷನ್ಸ್” ಸಂಸ್ಥೆಯಿಂದ ಮತ್ತೆರಡು ಹೊಸ ಚಿತ್ರಗಳನ್ನು ಪ್ರಾರಂಭಿಸುತ್ತಿರುವ ನಿರ್ಮಾಪಕ ಬಿಜು.ಶಿವಾನಂದ್
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ “ಸೈರನ್” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

ಟೀಸರ್ ಗೆ ದೊರಕಿರುವ ಮೆಚ್ಚುಗೆ ಕಂಡು ಸಂತಸಗೊಂಡಿರುವ ನಿರ್ಮಾಪಕ ಬಿಜು ಶಿವಾನಂದ್, ತಮ್ಮ ಡೆಕ್ಕನ್ ಕಿಂಗ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಮತ್ತೆರಡು ನೂತನ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸದ್ಯದಲ್ಲೇ ಆ ಚಿತ್ರಗಳು ಆರಂಭವಾಗಲಿದೆ. ನೂತನ ಚಿತ್ರಗಳ ಬಗ್ಗೆ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು.

ಪ್ಯಾನ್ ಇಂಡಿಯಾ “ಸೈರನ್” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ,.ಕಳೆದ ಇಪ್ಪತ್ತೈದು ವರ್ಷಗಳಿಂದ ಛಾಯಾಗ್ರಾಹಕ ಹಾಗೂ ಸಂಕಲನಕಾರರಾಗಿ ಗುರುತಿಸಿಕೊಂಡಿರುವ ರಾಜ ವೆಂಕಯ್ಯ ಅವರು ಪ್ರಥಮ ಬಾರಿಗೆ “ಸೈರನ್” ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಗೇಶ್ ಆಚಾರ್ಯ ಛಾಯಾಗ್ರಹಣ, ಭಾರದ್ವಾಜ್ ಸಂಗೀತ ನಿರ್ದೇಶನ ಹಾಗೂ ದೀಪಕ್ ಬಾಲಾಜಿ ಸಂಕಲನ ಈ ಚಿತ್ರಕ್ಕಿದೆ. “ಸೈರನ್ ” ಪ್ರವೀರ್ ಶೆಟ್ಟಿ ಅಭಿನಯದ ಮೊದಲ ಚಿತ್ರವಾಗಿದ್ದು, ಅಭಿನಯಕ್ಕೆ ಬೇಕಾದ ತರಭೇತಿಯನ್ನು ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ಪಡೆದಿದ್ದಾರೆ. ಲಾಸ್ಯ ಈ ಚಿತ್ರದ ನಾಯಕಿ. ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖಾ, ಸುಕನ್ಯ, ಸಾಯಿಲೀನ, ಮುರಳಿ, ರಾಮನಾಥನ್, ಮಂಜಯ್ಯ ಮುಂತಾದವರಿದ್ದಾರೆ.


