Rating 3/5
ಒಬ್ಬ ಸ್ಟಾರ್ ನಟನಿದ್ದರೇ ಅಭಿಮಾನಿಗಳಿಗೆ ಹಬ್ಬ. ಅಂತದ್ರಲ್ಲಿ ಇಬ್ಬರಿಬ್ಬರು ಸ್ಟಾರ್, ಒಬ್ಬ ಸ್ಟಾರ್ ಡೈರೆಕ್ಟರ್ ಇನ್ನೊಬ್ಬರು ಸ್ಟಾರ್ ನಿರ್ಮಾಪಕರು ಈ ನಾಲ್ವರೂ ಸೇರಿದರೆ ಸಿನಿಮಾಕ್ಕಾಗಿ ಒಂದಾದರೆ ಹೇಗಿರಬಹುದು ? ಹೌದು ,ಶಿವರಾಜ್ಕುಮಾರ್, ಪ್ರಭುದೇವ, ಯೋಗರಾಜ್ ಭಟ್, ರಾಕ್ಲೈನ್ ವೆಂಕಟೇಶ್– ಈ ನಾಲ್ವರ ಕಾಂಬಿನೇಷನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಇವರ ಕಾಂಬಿನೇಶನ್ನ ಸಿನಿಮಾ `ಕರಟಕ ದಮನಕ’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹಾಗಿದ್ದರೆ ಭಟ್ರು ಇಂಥದ್ದೊ0ದು ವಿಚಿತ್ರ ಟೈಟಲ್ ಇಟ್ಟುಕೊಂಡು ಮಾಡಿದ್ದಾದರೂ ಏನು? ವಿರೂಪಾಕ್ಷಿ (ಶಿವರಾಜ್ಕುಮಾರ್) ಮತ್ತು ಬಾಲರಾಜು (ಪ್ರಭುದೇವ), ಇವರಿಬ್ಬರಿಗೆ ಜೈಲರ್ ರುದ್ರೇಶ್ (ರಾಕ್ಲೈನ್ ವೆಂಕಟೇಶ್) ಒಂದು ಕೆಲಸ ಒಪ್ಪಿಸುತ್ತಾರೆ. ಎಷ್ಟೋ ವರ್ಷಗಳಿಂದ ಮಳೆಯನ್ನೇ ನೋಡದ ನಂದಿಕೋಲೂರಿಗೆ ಅವರಿಬ್ಬರನ್ನು ಕಳುಹಿಸುತ್ತಾರೆ. ಅಷ್ಟಕ್ಕೂ ವಿರೂಪಾಕ್ಷಿ & ಬಾಲರಾಜು ನಂದಿಕೋಲೂರಿಗೆ ಹೋಗಿದ್ದೇಕೆ? ರುದ್ರೇಶ್ ಒಪ್ಪಿಸಿದ ಕೆಲಸವೇನು ಅನ್ನೋದೇ `ಕರಟಕ ದಮನಕ‘ ಚಿತ್ರದ ಹೈಲೈಟ್
Read More;Ranganayaka Review: ಕಥೆ ತೆಲೆ ಕೆಡುಸ್ತು, ಮಾತು ಸಿನಿಮಾ ಕೆಡುಸ್ತು!
`ಮುಂಗಾರು ಮಳೆ’ ಸುರಿಸಿದ ಮೇಲೆ ನಿರ್ದೇಶಕ ಯೋಗರಾಜ್ ಭಟ್ ಕರಿ ಮಣ್ಣಿಗೆ ಮನಸೋತು ಒಂದಷ್ಟು ಚಿತ್ರಗಳನ್ನು ಮಾಡಿದ್ದರು. `ಕರಟಕ ದಮನಕ‘ ಕೂಡ ಇದೇ ಸಾಲಿಗೆ ಸೇರುವ ಕರಿ ಮಣ್ಣಿನ ಹಸಿ–ಹುಸಿ ಕಥೆ. ಮನರಂಜನೆಯ ಜೊತೆ ಜೊತೆ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಯ ಬಗ್ಗೆ ಹೇಳುವ ಭಟ್ಟರು ನಿಜಕ್ಕೂ ಸಿನಿಮಾ ಮಾಧ್ಯಮದ ಮೂಲಕ `ಗಂಭೀರ’ ಪ್ರಯತ್ನವನ್ನು ಈ ಸಿನಿಮಾ ಮೂಲಕ ಪ್ರಾಮಾಣಿಕವಾಗಿ ಮಾಡಿದ್ದಾರೆ. ಬಹಳ ದಿನಗಳ ನಂತರ ನಟ ಶಿವರಾಜ್ಕುಮಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟ ಪ್ರಭುದೇವ ಎಷ್ಟೋ ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡು ಕಾಮಿಡಿ ಟೈಮಿಂಗ್, ಡ್ಯಾನ್ಸ್ ಮೂಲಕ ಇಷ್ಟವಾಗುತ್ತಾರೆ. ಫಸ್ಟ್ ಹಾಫ್ ತುಂಬಾ ಪ್ರಭುದೇವ ಅವರ ಅಭಿನಯ ಸಿನಿಮಾವನ್ನು ಇಂಟ್ರೆಸ್ಟಿ0ಗ್ ಆಗಿಸುತ್ತದೆ. ಉಳಿದಂತೆ, ನಟಿಯರಾದ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಪಾತ್ರದ ಗ್ರಾಮರ್ ಬಗ್ಗೆ ಕೇಳದ ಅವರ ಗ್ಲಾಮರ್ ಅಷ್ಟೇ ನೋಡಿ ಪ್ರೇಕ್ಷಕರು ಪಾವನರಾಗಬೇಕು. ತೆಲುಗು ನಟ ತನಿಕೆಳ್ಳಾ ಭರಣಿ, ದೊಡ್ಡಣ್ಣ, ರಂಗಾಯಣ ರಘು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜಗ್ಗನ ಪಾತ್ರದಲ್ಲಿ ನಟ ರವಿಶಂಕರ್ ನಟನೆಯಲ್ಲಿ ತಾನೊಬ್ಬ ಜಗತ್ ಕಿಲಾಡಿ ಎಂಬುದನ್ನು ತೋರಿಸಿದ್ದಾರೆ. `ಕಾಮಿಡಿ ಕಿಲಾಡಿಗಳು‘ ಶೋದಲ್ಲಿನ ಬಹುತೇಕ ಕಲಾವಿದರು ಇದರಲ್ಲಿ ಕಾಣಿಸಿಕೊಂಡು ನಗಿಸುವ ಪ್ರಯತ್ನ ಅಲ್ಲಲ್ಲಿ ಮಾಡಿದ್ದಾರೆ. ರುದ್ರೇಶ್ ಪಾತ್ರದಲ್ಲಿ ಬರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ರಾಕಿಂಗ್. ಯೋಗರಾಜ್ ಭಟ್ ಪಾತ್ರವನ್ನು ತೆರೆಯಲ್ಲೇ ನೋಡಬೇಕು.
Read More; ಕಿರುತೆರೆ ನಟಿ ಲಕ್ಷ್ಮೀ ಸಿದ್ಧಯ್ಯ ನಿಜಕ್ಕೂ ಅಪಘಾತ ಮಾಡಿದರಾ..? ಅಂದು ನಡೆದದ್ದು ಏನು..?
`ಕರಟಕ ದಮನಕ‘ ಸಿನಿಮಾದ ಪ್ರತಿಯೊಂದು ಪಾತ್ರಗಳೂ ಫ್ರೆಶ್ ಆಗಿವೆ. ಭಟ್ಟರ ಹಿಂದಿನ ಯಾವ ಚಿತ್ರದಲ್ಲೂ ಕಾಣದ ಪಾತ್ರಗಳು ಈ ಚಿತ್ರದಲ್ಲಿದ್ದು, ಹರಿಕೃಷ್ಣ ಅವರ ಸಂಗೀತದ ಹಾಡುಗಳು, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಭೂಷಣ್ ನೃತ್ಯ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚೆನ್ನಾಗಿದೆ. ಉತ್ತರ ಕರ್ನಾಟಕ ಶೈಲಿಯ ಖಡಕ್ ಸಂಭಾಷಣೆ ಚಿತ್ರದ ಮತ್ತೊಂದು ಹೈಲೈಟ್. climax ಸಂದೇಶ ನಿಜಕ್ಕೂ ಗಂಭಿರವಾಗಿದೆ.`ಕರಟಕ ದಮನಕ‘ ಸಿನಿಮಾದ ಫಸ್ಟ್ ಹಾಫ್ ಪ್ರೇಕ್ಷಕನಿಗೆ ಫುಲ್ ಮೀಲ್ಸ್, ಆದರೆ, ಸೆಕೆಂಡ್ ಹಾಫ್ ಮಿನಿ ಮೀಲ್ಸ್. ಸೆಂಕೆAಡ್ ಆಫ್ ಅನ್ನು ಸಂದೇಶ ಸಾರಲೆಂದೇ ಇಟ್ಟುಕೊಂಡಿದ್ದ ಭಟ್ಟರು, ಸಂದೇಶವನ್ನು ನೇರವಾಗಿ ತಾಕುವಂತೆಯೇ ಹೇಳಿದ್ದಾರೆ. ಗಂಭೀರ ಸಂಭಾಷಣೆಯನ್ನು ಮನರಂಜನೆಯ ಮೂಲಕ ಹೇಳುವ ರಿಸ್ಕ್ ತೆಗೆದುಕೊಳ್ಳದ ಭಟ್ಟರು, ಸ್ವಲ್ಪ ನಿರಾಸೆ ಮಾಡುತ್ತಾರೆ. ಅಲ್ಲದೆ, ಈ ಸಿನಿಮಾದ ನಿರೂಪಣೆ ಕಥೆಯ ಗಂಭೀರಕ್ಕೆ ತಕ್ಕಂತೆ ತುಂಬ ಸರಳ ಮತ್ತು ನೇರವಾಗಿರುವುದರಿಂದ ಪ್ರೇಕ್ಷಕನಿಗೆ ಸುಲಭವಾಗಿ ಅರ್ಥವಾಗುತ್ತದೆ. ಭಟ್ಟರು, ಮನಸ್ಸು ಮಾಡಿದ್ದರೆ ಇದೇ ತಂಡ ಇಟ್ಟುಕೊಂಡು ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾ ಮಾಡಿ ಗೆದ್ದು ಬೀಗಬಹುದಿತ್ತು. ಆದರೆ ಭಟ್ಟರು ಮಾಗಿದ್ದಾರೆ, ಸ್ಟಾರ್ ನಟರ ಮುಖೇನ ಗಂಭೀರ ವಿಚಾರನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಭಟ್ಟರ ಈ `ಗಂಭೀರ’ ಪ್ರಯತ್ನಕ್ಕೆ ಉಘೇ.. ಉಘೇ…