RATING /5
ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ `ಕಪ್ಪು ಬಿಳುಪಿನ ನಡುವೆ’ ಚಿತ್ರವನ್ನು ಹೊಸದಾಗಿ ಸೇರಿಸಿಕೊಳ್ಳಬಹುದು. ಹೊಸತನ್ನು ನಿರೀಕ್ಷಿಸುತ್ತಿರುವ ಪ್ರೇಕ್ಷಕ ಬಳಗಕ್ಕೆ ಈ ಸಿನಿಮಾ ಖಂಡಿತ ನಿರಾಸೆಪಡಿಸಲ್ಲ. ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟ್ರೇಲರೇ ಹಿಂಗಿದ್ದರೆ ಇನ್ನು ಸಿನಿಮಾ ಹೆಂಗಿರುತ್ತದೋ ಎಂದುಕೊ0ಡು ಬಂದವರಿಗೆ ಮೋಸವಾಗಲ್ಲ. ನಿಗೂಢ ಜಾಗಗಳಿಗೆ ಹೊರಡುವ ಈ ಯುವಕರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ.ಚಿತ್ರದ ಪ್ರಮುಖ ಅಂಶ ಎಂದರೆ ಈ ರೀತಿಯ ಕೌತುಕ ಕಥೆಯನ್ನು ಅದ್ಭುತವಾಗಿ ನಿರೂಪಿಸಿರುವುದು, ಚಿತ್ರಕ್ಕೆ ಹೊಸದೊಂದು ಆಯಾಮವನ್ನು ತಂದಿದೆ. ಒಂದು ವೇಳೆ ನಿರೂಪಣೆಯಲ್ಲಿ ಸೋತಿದ್ದರೆ ಚಿತ್ರ ಸಪ್ಪೆಯಾಗುತ್ತಿತ್ತು. ಹಾರರ್ ಜೊತೆಗೆ ಮನರಂಜನೆಯನ್ನೂ ನೀಡುವ ಚಿತ್ರ `ಕಪ್ಪು ಬಿಳುಪಿನ ನಡುವೆ’.
Read more : Mr.Natwarlal Movie Review: ರಣ ರೋಚಕ `ನಟ’ವರ್ ಲಾಲ್
ದೇವಗಿರಿ ಎಂಬ ಹಳ್ಳಿಯೊಂದಿರುತ್ತದೆ. ಅಲ್ಲೊಂದು ನಿಗೂಢ ಜಗತ್ತು. ಅಗೋಚರ ಶಕ್ತಿಗಳಿವೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿರುತ್ತದೆ. ದೀಪಗಳಿಲ್ಲ, ಬೆಳಕಿಲ್ಲದ ದಾರಿಯಲ್ಲಿ ಕತ್ತಲು ತುಂಬಿಕೊ0ಡಿರುತ್ತದೆ. ಅಂಥದ್ದೊ0ದು ಊರಿಗೆ ಹೊಸ ಕಾಲದ, ಆಧುನಿಕ ಮನಸ್ಥಿಯ ಯೂಟ್ಯೂಬರ್‌ಗಳು ಘೋಸ್ಟ್ ಹಂಟಿ0ಗ್ ಎಂಬ ಕಾರಣ ಇಟ್ಟುಕೊಂಡು ಹೊರಡುತ್ತಾರೆ ಎಂಬಲ್ಲಿಗೆ ಕತೆ ಶುರು.ನಿಗೂಢ ತಾಣಗಳಿಗೆ ಆ ಸ್ಥಳದ ಪರಿಚಯ ಇಲ್ಲದವರು ಹೋದಾಗ ಭಯಮಿಶ್ರಿತ ಮತ್ತು ತಮಾಷೆಯ ಪ್ರಸಂಗಗಳು ಜರುಗುವುದು ನಿಶ್ಚಿತ. ಅದೇ ರೀತಿ ಇಲ್ಲೂ ಭಯದ ವಾತಾವರಣ ಇದೆ. ಪೇಚಿನ ಸಂಗತಿಗಳಿವೆ. ಕಷ್ಟವೇ ಹಾಸ್ಯಮಯವಾಗಿ ಕಾಣುವ ಸನ್ನಿವೇಶಗಳಿವೆ. ಆ ನಿಟ್ಟಿನಲ್ಲಿ ಇದೊಂದು ಕುತೂಹಲ ಉಳಿಸಿಕೊಂಡಿರುವ ಸಿನಿಮಾ. ಹಾರರ್-ಥ್ರಿಲ್ಲರ್ ಜಾನರ್‌ನ ಸಿನಿಮಾ.
Read more Matsyagandha Movie Review; ಕಡಲ ಒಡಲೊಳಗೊಂದು ಕಾಡುವ ಲಹರಿ
ಸಿನಿಮಾದ ವಸ್ತು ಅದ್ಭುತವಾಗಿದ್ದು, ಎಲ್ಲೂ ಬೋರ್ ಹೊಡೆಸೊಲ್ಲ. ಮನೋರಂಜನೆಯ ಜೊತೆಗೆ ಯುವ ಜನಾಂಗಕ್ಕೆ ಅತ್ಯುತ್ತಮ ಸಂದೇಶವನ್ನೂ ದಾಟಿಸುವ ಕೆಲಸವನ್ನು ಮಾಡಿದ್ದಾರೆ ನಿರ್ದೇಶಕರಾದ ವಸಂತ್ ವಿಷ್ಣು. ನಿರ್ದೇಶನದ ಜೊತೆಗೆ ನಾಯಕ ನಟರಾಗಿಯೂ ವಸಂತ್ ವಿಷ್ಣು ಸೈ ಅನ್ನಿಸಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ಬಹುತೇಕ ಹೊಸಬರು ನಟಿಸಿದ್ದು ಅವರಲ್ಲಿ ನಾಯಕಿ ನಟಿ ವಿದ್ಯಾಶ್ರೀ ಗೌಡ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ, ವೈಜನಾಥ ಬಿರಾದಾರ್, ಶರತ್ ಲೋಹಿತಾಶ್ವ, ನವೀನ್ ರಘು, ಹರೀಶ್, ತೇಜಸ್ವಿನಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎ.ಕೆ.ರಿಶಾಲ್ಸಾಯಿ ಸಂಗೀತ, ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಮತ್ತು ಅಮಿತ್ ಜವಾಲ್ಕರ್ ಸಂಕಲನ.. ಚಿತ್ರ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿ ಮೂಡಿಬಂದಿದೆ. ಹಾರರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇನ್ನಷ್ಟು ಥ್ರಿಲ್ ಕೊಡುತ್ತದೆ. ದೆವ್ವ ಭೂತ ಚಿತ್ರಗಳನ್ನು ನೋಡಬೇಕು ಎಂದು ಹಂಬಲಿಸುವವರಿಗೆ ಈ ಚಿತ್ರ ಇನ್ನಷ್ಟು ಭಯಭೀತಿಗೊಳಿಸುತ್ತದೆ. ಆದರೆ ದುರ್ಬಲ ಹೃದಯಿಗಳು ಹೋಗದೇ ಇರುವುದೇ ವಾಸಿ. ಚಿತ್ರ ನೋಡಿದವರು ಕನಿಷ್ಠ ಒಂದು ತಿಂಗಳು ನಿಗೂಢ ಪ್ರದೇಶಗಳಿಗೆ ಕಾಲಿಡುವುದಿಲ್ಲ ಅಷ್ಟರ ಮಟ್ಟಿಗೆ ಸಿನಿಮಾ ಪ್ರಭಾವ ಬೀರುತ್ತದೆ.
