ಚಿತ್ರ : ಕಪಟಿ
ನಿರ್ದೇಶಕರು : ರವಿಕಿರಣ್, ಚೇತನ್.ಎಸ್.ಪಿ
ನಿರ್ಮಾಪಕರು : ದಯಾಳ್ ಪದ್ಮನಾಭನ್
ಸಂಗೀತ : ಜೋಹನ್
ತಾರಗಣ : ಸುಕೃತ ವಾಗ್ಗೆ, ದೇವ್ ದೇವಯ್ಯ, ನಾತ್ವಿಕ್ ಕೃಷ್ಣನ್, ಪವನ್ ವೇಣು ಗೋಪಾಲ್, ಶಂಕರ್ ನಾರಾಯಣ್, ಅಜಿತ್ ಕುಮಾರ್ ಹಾಗೂ
ನಂದಗೋಪಾಲ್ ಮುಂತಾದವರು
ರೇಟಿ0ಗ್ : 3/5
ಒಂದು ಮಾತಿದೆ `ಎಲ್ಲಿವರೆಗೆ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೋ, ಅಲ್ಲಿವರೆಗೆ ಟೋಪಿ ಹಾಕುವವರೂ ಇರುತ್ತಾರೆ’ ಎಂದು. ಈ ಮಾತಿನಂತೆ ಈಗ ನಾನಾ ರೀತಿಯಲ್ಲಿ `ಡಿಜಿಟಲ್ ಟೋಪಿ’ ಹಾಕುವ ಡೇಂಜರಸ್ ಪರಮ ಜ್ಞಾನಿಗಳು ನಮ್ಮ ಮಧ್ಯೆಯೇ ಇದ್ದಾರೆ! ಡಿಜಿಟಲ್ ಕ್ರಾಂತಿ ಅಡ್ಡದಾರಿ ಹಿಡಿಯುತ್ತಿರುವ ಈ ಸಂದರ್ಭದಲ್ಲಿ, ಕತ್ತಲ ಪ್ರಪಂಚದ ಕಾಣದ ಕೈಗಳನ್ನು ಕಟ್ಟಿಹಾಕುವವರು ಯಾರು? ಹಣದ ಆಸೆಗೆ ಬಿದ್ದು ಇನ್ನೊಬ್ಬರ ಬದುಕಿಗೇ ಕೊಳ್ಳಿ ಇಡುವವರಿಂದ ಬಚಾವ್ ಆಗೋದು ಹೇಗೆ? ನಮ್ಮೊಡನೇ ಇದ್ದು ತೆರೆಮರೆಯಲ್ಲಿ ನಮ್ಮ ನೋವನ್ನು ಎಂಜಾಯ್ ಮಾಡುವವರನ್ನು ಗುರುತಿಸುವುದು ಹೇಗೆ?.. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ `ಕಪಟಿ’ ಸಿನಿಮಾ. ಹೌದು, ಕಪಟಿ ಈ ಕಾಲದ ಅನಿವಾರ್ಯತೆ.
ಹಾಗಿದ್ದರೆ `ಕಪಟಿ’ಯಲ್ಲೇನಿದೆ? ಮಾನಸಿಕ ತಳಮಳ, ಆತಂಕ, ಸಂಬ0ಧ, ಹಣದ ಸುತ್ತ ಟ್ರಾಪ್‌ನಲ್ಲಿ ಸಿಕ್ಕಿಹಾಕಿಕೊಳ್ಳುವವರು ಯಾರು ಎಂಬ ಸನ್ನಿವೇಶಗಳನ್ನು ಕಥಗೆ ಪೂರಕವಾದ ನಿರೂಪಣ ಶೈಲಿಯಲ್ಲಿ ಸಮರ್ಥವಾಗಿ ಕಟ್ಟಿಕೊಡಲಾಗಿದೆ. ಲೈಟಿಂಗ್ ಸೌಂಡ್ ಎಫೆಕ್ಟ್, ಹಿನ್ನಲೆ ಸಂಗೀತ, ಅಭಿನಯ ಎಲ್ಲವೂ ಒಂದಕ್ಕೊ0ದು ಪೂರಕವಾಗಿದ್ದು, ಸೈಕಲಾಜಿಕಲ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಮಿಗಳಿಗೆ “ಕಪಟಿ” ಸಕತ್ ಇಷ್ಟವಾಗುತ್ತೆ.
ಡಿಸೈನರ್ ಆಗಿ ಹಣ&ಕೀರ್ತಿಯನ್ನ ಗಳಿಸಿದಂತಹ ಪ್ರಿಯ (ಸುಕೃತ ವಾಗ್ಲೆ) ತನ್ನ ತಮ್ಮ ಅಮಿತ್ ಅನಾರೋಗ್ಯ, ತಂದೆಯ ಕುಡಿತದ ಚಟದ ಜೊತೆಗೆ ತನ್ನ ಮಾನಸಿಕ ರೋಗದ ಜೊತೆ ಡಾಕ್ಟರ್ ಅಣತಿಯಂತೆ ಬದುಕುತ್ತಿರುತ್ತಾಳೆ. ಬದುಕುತ್ತಿರುತ್ತಾಳ ಅನ್ನುವುದಕ್ಕಿಂತ `ಇರುತ್ತಾಳೆ’ಅಷ್ಟೇ! ಇನ್ನು ಡಾರ್ಕ್ ವೆಟ್ ಮೂಲಕ ಹಣ ಸಂಪಾದನೆ ಮಾಡಲು ಸಂಚು ರೂಪಿಸುವ ಬೇಬಿ ಸುಮನ್ (ದೇವು ದೇವಯ್ಯ), ಜುಟ್ಟು (ಸಾತ್ವಿಕ್ ಕೃಷ್ಣನ್) ಪ್ರಿಯ ಫ್ಯಾಮಿಲೀ ಇಲ್ಲದ ಸಮಯದಲ್ಲಿ ಆಕೆಯ ಮನೆ ಹೊಕ್ಕು ಕ್ಯಾಮೆರಾ ಫಿಕ್ಸ್ ಮಾಡಿ, ಹೆದರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ `ಅದೊಂದು’ ಇನ್ಸಿಡೆಂಟ್ ಸುಮನ್&ಜುಟ್ಟುವಿನ ಕಥರ‍್ನಾಕ್ ಪ್ಲಾನ್‌ನ ದಿಕ್ಕನ್ನು ಬದಲಿಸಿ ಬಿಡುತ್ತದೆ. ಆ ಇನ್ಸಿಡೆಂಟ್ ಅನ್ನು ಸಿನಿಮಾ ನೋಡಿಯೇ ಅನುಭವಿಸಬೇಕು.
ಈಗೀನ `ಡಿಜಿಟಲ್ ಟೋಪಿ’ ಕಾಲದಲ್ಲಿ ನಿರ್ಮಾಪಕ ದಯಾಳ್ ಪದ್ಮನಾಭನ್ ಒಂದೊಳ್ಳೆ ಸಿನಿಮಾವನ್ನು ಕೊಟ್ಟಿದ್ದಾರೆ. ಇದು ಬರೀ ಸಿನಿಮಾವಾಗಿರದೇ `ಎಚ್ಚರಿಕೆ’ಯ ಗಂಟೆಯೂ ಆಗಿದೆ. ಇನ್ನು `ಡಬಲ್ ಇಂಜಿನ್’ ನಿರ್ದೇಶನ ಸಿಕ್ಕಾಪಟ್ಟೆ workout ಆಗಿದೆ. ರವಿಕಿರಣ್&ಚೇತನ್ ಈಗಿನ ಟೆಕ್ನಾಲಜಿಯ ಕಾರ್ಯವೈಖರಿ ಮೂಲಕ ಟ್ರಾಫಿಂಗ್, ಟಾರ್ಚರ್ ಹೇಗೆಲ್ಲಾ ನಡೆಯುತ್ತೆ ಎಂಬುದರ ಜೊತೆಗೆ ಮಾನಸಿಕ ಸ್ಥಿರತೆ, ಆತಂಕ, ಗೊಂದಲದ ಬದುಕು ಹೇಗೆಲ್ಲಾ ಸಾಗುತ್ತದೆ ಎಂಬುದನ್ನು tight screen play ಮೂಲಕ ಅಚ್ಚುಕಟ್ಟಾಗಿ ಹೇಳಿದ್ದಾರೆ. ಛಾಯಾಗ್ರಾಹಕ ಸತೀಶ್ ರಾಜೇಂದ್ರನ್ ಕೆಲಸ ಅದ್ಭುತವಾಗಿದೆ, ಅವರು ಇಟ್ಟಿರುವ angleಗಳು ಕಥೆ ಹೇಳುವಲ್ಲಿ ಸಫಲವಾಗಿವೆ. ಎಡಿಟರ್ ಸಂತೋಷ್‌ಗೆ ಇನ್ನಷ್ಟು ಫ್ರೀಡಂ ಕೊಡಬುದಿತ್ತೇನೋ. ಇಂತಹ ಚಿತ್ರದಲ್ಲಿ ಸೌಂಡ್ ಡಿಸೈನ್ ಪಾತ್ರ ದೊಡ್ಡದು ಆ ನಿಟ್ಟಿನಲ್ಲಿ ವಾಸುದೇವ್ ಕೆಲಸ ಸೂಪರ್. Smart Screen ತಂಡದ ಡಿಸೈನ್ ನಿಜಕ್ಕೂ ಸ್ಮಾರ್ಟ್ ಆಗಿದೆ.
ಪ್ರಿಯಳಾಗಿ ಸುಕೃತ ಪ್ರಿಯವಾಗುತ್ತಾರೆ. ನಿರ್ದೇಶಕರ ಆಯ್ಕೆ ನಿಜಕ್ಕೂ ಸುಕೃತವೇ. ಮಾತಿಗಿಂತ ಮೌನದಲ್ಲೇ ಸುಕೃತಾ ಹೆಚ್ಚು ಇಷ್ಟವಾಗುತ್ತಾರೆ. ಮಾನಸಿಕ ರೋಗಿಯಾಗಿ ಬ್ಯಾಲೆನ್ಸ್ಡ್ ಪರಫಾಮೆನ್ಸ್ ಸುಲಭದ್ದಲ್ಲ. ಚಿಕನ್ ಕೊಚ್ಚುವ ದೃಶ್ಯ ಅಲ್ಟಿಮೇಟ್. ಇನ್ನು ನಟ ದೇವ್ ದೇವಯ್ಯ ಸೀರೀಯಸ್ ಆಗಿ ಪಾತ್ರದಲ್ಲೇ ಜೀವಿಸಿದ್ದಾರೆ. ಮತ್ತೊಬ್ಬ ನಟ ಸಾತ್ವಿಕ್ ಕೃಷ್ಣನ್ ಜುಟ್ಟುವಾಗಿ ಸಿನಿಮಾದ ಆರಂಭದ ಕೆಲವು ದೃಶ್ಯಗಳಲ್ಲಿ ಜಸ್ಟ್ ಪಾಸ್ ಆಗಿ, ಚಿತ್ರ ಕೊನೆಯ ಹಂತಕ್ಕೆ ಬಂದಾಗ ಡಿಸ್ಟಿಂಗ್ಸ್ನಲ್ಲಿ ಪಾಸ್ ಆಗಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ನಾಜೂಕಾಗಿ ಪಾತ್ರ ನಿರ್ಮಹಿಸಿದ್ದಾರೆ. ಸೈಕಲಾಜಿಕಲ್, ಥ್ರಿಲ್ಲರ್ ಕಥಾಹಂದರದ ಸಿನಿಮಾ ಸಾಕಷ್ಟಿದೆ, ಆದರೆ ಡಾರ್ಕ್ ವೆಬ್ ಜಾನರ್‌ನ ಸೈಕಲಾಜಿಕಲ್, ಥ್ರಿಲ್ಲರ್ `ಕಪಟಿ’ ಒಂದು ವಿಭಿನ್ನ ಕಿಕ್ ನೀಡುತ್ತದೆ.