ವಿನಯ್ ವಿದುನಂದನ್ ಅವರ ನಿರ್ದೇಶನದ, ಕುತೂಹಲಕರ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಕಪಾಲ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ಸುಮಾರು 70 ರಿಂದ 80 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು. ಅಭಿಮನ್ಯು ಪ್ರಜ್ವಲ್, ಪ್ರತೀಕ್ಷಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಅನಿವಾಸಿ ಕನ್ನಡಿಗರಾದ ಸೌಮ್ಯ ಕೆ. ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ ಹೊಸ ತಂಡವನ್ನು ಕಟ್ಟಿಕೊಂಡು ಮಾಡಿದ ಚಿತ್ರವಿದು. ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಎಲ್ಲರ ಶ್ರಮದಿಂದ ಚಿತ್ರ ಉತ್ತಮವಾಗಿ ಬಂದಿದ್ದು, ಇದೇ ಶುಕ್ರವಾರ ರಿಲೀಸ್ ಮಾಡುತ್ತಿದ್ದೇವೆ ಎಂದರು. ನಂತರ ಮಾತನಾಡಿದ ನಿರಗದೇಶಕ ವಿನಯ್ ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. 70 ವರ್ಷ, 10 ವರ್ಷದ ಹಿಂದೆ ನಡೆದ ಕಥೆಯೊಂದು ಈಗಿನ ಒಬ್ಬರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹಾರರ್ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಾರರ್ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು.
ಮತ್ತೊಬ್ಬ ನಟಿ ಯಮುನಾ ಶ್ರೀನಿಧಿ ಮಾತನಾಡುತ್ತ ನನ್ನದು ಒಂದು ವಿಭಿನ್ನವಾದ ತಾಯಿಯ ಪಾತ್ರ. ಈ ತಂಡದ ಶ್ರಮ ತುಂಬಾ ಇದೆ ಎಂದರು.ನಾಯಕಿ ಪ್ರತೀಕ್ಷಾ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. 3 ಕಾಲಘಟ್ಟದಲ್ಲಿ ನಡೆಯುವ ಕಥೆ, ಒಬ್ಬ ನಿರೂಪಕಿಯಾದ ನಾನು ಚಿತ್ರದಲ್ಲೂ ಸಹ ನಿರೂಪಕಿಯ ಪಾತ್ರ ಮಾಡಿದ್ದೇನೆ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತ ತುಂಬಾ ಚಿನ್ನಾಗಿ ಬಂದಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ನಿರ್ದೇಶಕ ಗಿರೀರಾಜ್ ಮಾತನಾಡಿ ಚಿತ್ರದ ಕಂಟೆಂಟ್ ಬಗ್ಗೆ ಮೆಚ್ಚಿಕೊಂಡರು.
ನಾಯಕ ಅಭಿಮನ್ಯು ಪ್ರಜ್ವಲ್ ಮಾತನಾಡಿ, ಇದು ಬರೀ ಹಾರರ್ ಕಥೆಯಲ್ಲ, ಒಂದು ಒಳ್ಳೆಯ ಲವ್ ಸ್ಟೋರಿ ಕೂಡ ಚಿತ್ರದಲ್ಲಿದೆ. ಸಂಪೂರ್ಣ ಮನರಂಜನೆ ನೀಡುವ ಚಿತ್ರ. ಪ್ರೇಕ್ಷಕರಿಗೆ ಕೊಟ್ಟ ಹಣಕ್ಲೆ ಮೊಸ ಆಗಲ್ಲ ನಾನು ಟಿವಿ ಛಾಯಾಗ್ರಹಕನ ಪಾತ್ರ ಮಾಡಿದ್ದು ಮೂರು ಅಂಶಗಳ ಮೇಲೆ ನಡೆಯೋ ಕಥೆಯಿದು ಅದು ಈಗಿನ ಕಾಲದ ಯುವಕನಿಗೆ ಹೇಗೆ ಪರಿಣಾಮ ಬೀರಿತೆಂಬುದನ್ನು ಹೇಳಿದ್ದಾರೆ ಎಂದರು.
ವಿಜಯ್ ಸಿನಿಮಾಸ್ ಪರವಾಗಿ ಬಂದಿದ್ದ ವಿಜಯ್ ಮಾತನಾಡಿ ಈ ಚಿತ್ರವನ್ನು ಭಾರತ ಅಲ್ಲದೆ ವಿದೇಶದಲ್ಲೂ ಸಹ ರಿಲೀಸ್ ಮಾಡುತ್ತಿದ್ದೇವೆ. ವಾರದ ನಂತರ ಯು ಎಸ್ ಸೇರಿದಂತೆ ವಿದೇಶದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು