ನಟ, ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಪ್ರೀಕ್ವೆಲ್ ಸ್ಕ್ರಿಪ್ಟ್ ಅನ್ನು ಬಹುತೇಕ ಮುಗಿಸಿದ್ದಾರಂತೆ. ಕಾಂತಾರ ಚಿತ್ರಕ್ಕೆ ಮಾತುಗಳನ್ನೂ ಹೆಣೆದಿರುವ ಅವರು ಸ್ಕ್ರಿಪ್ಟ್ ಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದರ ಜೊತೆ ಜೊತೆಗೆ ಶೂಟಿಂಗ್ ಸ್ಥಳಗಳನ್ನೂ ಅವರು ಹುಡುಕುತ್ತಿದ್ದು, ಈ ಎಲ್ಲವನ್ನೂ ಮುಗಿಸಿಕೊಂಡು ಆಗಸ್ಟ್ ನಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಿದ್ದಾರೆ ಎನ್ನುವುದು ಅವರ ತಂಡದಿಂದ ಸಿಕ್ಕಿರುವ ಮಾಹಿತಿ.
ಇದನ್ನೂ ಓದಿ: ಸ್ಯಾಂಡಲ್ವುಡ್ನತ್ತ ಕಿಚ್ಚನ ಕುಟುಂಬದ ಕುಡಿ; ಸಂಚಿತ್ ಸಂಚಲನ!
ಕಾಂತಾರ ಸಿನಿಮಾದ ಮುಹೂರ್ತ ಕಳೆದ ಬಾರಿ ಯಾವ ದೇವಸ್ಥಾನದಲ್ಲಿ ಆಗಿತ್ತೋ, ಮತ್ತೆ ಅದೇ ದೇವಸ್ಥಾನದಲ್ಲೇ ಕಾಂತಾರ ಪ್ರಿಕ್ವೆಲ್ ಮುಹೂರ್ತ ಆಗಲಿದೆಯಂತೆ. ಆನೆಗುಡಿ ಗಣಪತಿ ದೇವಸ್ಥಾನದಲ್ಲೇ ಮುಹೂರ್ತ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರೀಕ್ವೆಲ್ಗೆ ಮಹೂರ್ತ ನಿಗದಿಯಾಗಿದೆ. ಕಾಂತಾರ ಮೊದಲ ಭಾಗ ಕೂಡ ಆಗಸ್ಟ್ ನಲ್ಲಿ ಮುಹೂರ್ತ ಕಂಡಿತ್ತು.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಕಲಾವಿದನಾಗಿ ಮತ್ತೊಬ್ಬ ವೈದ್ಯ ಡಾ.ಪಿ.ವಿ.ಆರ್ ಲೀಲಾ ಮೋಹನ್ ಆಗಮನ
ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’-2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.