Sandalwood Leading OnlineMedia

Kantara Movie Review: ದಟ್ಟ ಕಾನನದೊಳಗೆ ದಿಟ್ಟವಾಗಿ ಎದ್ದು ನಿಲ್ಲುವ ಈ ನೆಲದ ಅಸ್ಮಿತೆ

 

ಶೆಟ್ರ ಗ್ಯಾಂಗ್ನಿ0 ಮತ್ತೊಂದು `ಅಚ್ಚರಿ ಅನಾವರಣವಾಗಿದೆ. ಅಚ್ಚರಿಯ ಹೆಸರು `ಕಾಂತಾರ’. ಸಿನಿಮಾದ ಮೂಲಕ ಕರಾವಳಿಯ  ರಿಷಬ್ ಶೆಟ್ಟಿ ಅಲ್ಲಿನ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲವನ್ನೂ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಹಿಂದೆ ರಿಕ್ಕಿ, .ಹಿ.ಪ್ರಾ.ಶಾಲೆ ಚಿತ್ರಗಳಲ್ಲಿ ಶೆಟ್ರು ಅಪರೋಪದ ಕಥೆಯನ್ನು ಹೇಳಿದ್ದರೆ, ಈಗ `ಕಾಂತಾರದಲ್ಲಿ ದಂತಕತೆಯೊ0ದನ್ನು ಹೇಳಿದ್ದಾರೆ. `ಕಾಂತಾರ’, ಟೈಟಲ್ಲೇ ಹೇಳುವಂತೆ ಇದೊಂದು ನಿಗೂಢವಾದ ಅರಣ್ಯದೊಳಗಿನ ಕಥೆ ಮತ್ತು ಅಲ್ಲಿನ ವ್ಯಥೆ ಕೂಡ. ಒಂದು ಕಡೆ ಕಾಡನ್ನೇ ನಂಬಿಕೊ0 ಮಂದಿ, ಇನ್ನೊಂದು ಕಡೆ ಕಾಡನ್ನು ಮಾನವನಿಂದ ರಕ್ಷಿಸಲು ಹೊರಡುವ ಅರಣ್ಯಾಧಿಕಾರಿ, ಮತ್ತೊಂದು ಕಡೆ ಕಾಡಿನ ಜನರನ್ನು ಮತ್ತು ಅರಣ್ಯಾಧಿಕಾರಿಯನ್ನು ತನ್ನ ದುರಾಸೆಗೆ ಬಲಿಕೊಡುವ ನಾಡಿನ ದೊರೆ. ಇವರಲ್ಲರೆ ಮಧ್ಯೆ ಊರನ್ನು ಕಾಪಾಡಲು ತನ್ನ ಪ್ರಾಣವನ್ನೇ ಒತ್ತೆ ಇಡಲು ಹೊರಡುವ ನಾಯಕಹೀಗೆ ಒಂದಷ್ಟು ಗಟ್ಟಿ ಪಾತ್ರಗಳ ಮೂಲಕ ರಿಷಭ್ ತಾನೂ ಹೇಳ ಬೇಕಾದ ದಂತ ಕಥೆಯನ್ನು ನಾಜೂಕಾಗಿ ನೋಡುಗನಿಗೆ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. `ಕಾಂತಾರದಲ್ಲಿ ಅರಣ್ಯ ಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ ಇಂತಹ ಅಂಶಗಳನ್ನು, ಕರಾವಳಿ ಸಂಸ್ಕೃತಿಯ ಬ್ಯಾಕ್ಡ್ರಾಪ್ನಲ್ಲಿ, ಆಸಕ್ತಿದಾಯಕ ಚಿತ್ರಕಥೆಯ ಮೂಲಕ ಹೇಳಿರುವುದೇ ಚಿತ್ರದ ಹೈಲೆಟ್. ದೃಶ್ಯ ಮಾಧ್ಯಮ ಗರಿಷ್ಟ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಭೂತಪೂರ್ವವಾಗಿ ತೋರಿಸುತ್ತಲೇ, ಕರಾವಳಿ ಜನರ ಧಾರ್ಮಿಕ ನಂಬಿಕೆಗಳು, ನಂಬಿಕೆಗಳಲ್ಲಿ ಮಿಳಿತವಾಗಿರುವ ಮುಗ್ಧ ಜನರ ಭಾವನೆಗಳನ್ನು ಅಚ್ಚುಕಟ್ಟಾಗಿ ತೆರೆಯಮೇಲೆ ಕಟ್ಟಿಕೊಂಡುವಲ್ಲಿ ಇಡೀ ಚಿತ್ರತಂಡ ಗೆದ್ದಿದ್ದೆಕರಾವಳಿಯ ದೈವಕ್ಕೂ ಮತ್ತು ಅರಣ್ಯ(ಕಾಂತಾರ)ಕ್ಕೂ ಇರುವ ಸಂಬ0ಧವನ್ನು ಹೀಗೂ ಚಿತ್ರಕಥೆ ಮಾಡಬಹುದು ಎಂದು ನಿರೂಪಿಸಿರುವ ರಿಷಭ್ ಸಿನಿಮಾ ಪ್ರೇಮದ ಬಗ್ಗೆ ನಿಜಕ್ಕೂ ಹೆಮ್ಮೆ ಅನ್ನಿಸುತ್ತದೆ.

 

ನಿರೀಕ್ಷೆ ಹುಟ್ಟಿಸಿದ ಸುಮಿತ್ ಅಭಿನಯದ ‘ಗದಾಯುದ್ಧ’ ಚಿತ್ರದ ಥೀಮ್ ವಿಡಿಯೋ

 

 ನಿರ್ದೇಶಕ ರಿಷಬ್ ತಮ್ಮ ಕಳೆದೆರೆಡೂ ಚಿತ್ರಕ್ಕಿಂತಲೂ ಹೆಚ್ಚು ಬಾರಿ ಮೇಕಿಂಗ್ ಹೆಚ್ಚು ಒತ್ತು ಕೊಟ್ಟು, ಇಡೀ ಚಿತ್ರವನ್ನು `ನಮ್ಮ ಕನ್ನಡದ ಹೆಮ್ಮೆಯ ಚಿತ್ರಎಂಬ ಭಾವನೆಯಲ್ಲಿ ನೋಡುವಂತೆ ಮಾಡಿದ್ದಾರೆ. ರಿಷಭ್ ಅವರ ಶ್ರೇಷ್ಠ ಮೇಕಿಂಗ್ ಹಿಂದಿರುವ `ಹೊಂಬಾಳೆ ಫಿಲ್ಸ್ಅನ್ನು ಶ್ಲಾಘಿಸಲೇ ಬೇಕು. ಏಕೆಂದರೆ, ಬಹುಶಃ ರಿಷಭ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಹೆಗಲು ಕೊಡದೇ ಇದ್ದರೆ ಕನ್ನಡಿಗರಿಗೆ `ಕಾಂತಾರ ಮಟ್ಟಿನ ದೃಶ್ಯ ವೈಭವ ತಪ್ಪಿಹೋಗುತ್ತಿತ್ತುಯಾವ ದೃಶ್ಯದಲ್ಲೂ ಮೇಕಿಂಗ್ ಕಥೆಯ ಆಶಯವನ್ನು ಮೀರದಂತೆ ರಿಷಭ್ ಎಚ್ಚರ ವಹಿಸಿದ್ದಾರೆ. ನಾಯಕನವನ್ನು ಆರಂಭದಲ್ಲಿ ದ್ವೇಷಿಸುವ ನಾಯಕಿ, ನಂತರದಲ್ಲಿ ಪ್ರೀತಿಯಲ್ಲಿ `ಏಳುವನಡುವಿನ ಪ್ರೊಸೆಸ್ ಅನ್ನು ಅತ್ಯಂತ ಸಹಜತೆಯಿಂದ ಕಟ್ಟಿಕೊಡಲಾಗಿದೆ. ಇನ್ನು ಜಾತಿ ಪದ್ಧತಿ ಬಗ್ಗೆಯೂ `ಕಾಂತಾರಬೆಳಕು ಚೆಲ್ಲುತ್ತಾದರೂ, ಎಲ್ಲೂ ಬೋಧನೆ ಮಾಡುವ ಕೆಲಸಕ್ಕೆ ಅಪ್ಪಿ ತಪ್ಪಿಯೂ `ಕೈಹಾಕುವುದಿಲ್ಲ.

 

ಮರ್ಡರ್ ಮಿಸ್ಟ್ರಿಯ ` 3.0′

 

ಎಂದಿನ0ತೆ ರಿಷಬ್ ಸಿನಿಮಾಗಳಲ್ಲಿ ಇರುವ ಸಿಚುವೆಶನಲ್ ಕಾಮಿಡಿ ಚಿತ್ರವನ್ನು ಹೆಚ್ಚು ಆಪ್ತವಾಗಿಸುತ್ತದೆ. ನೈಜ ಪಾತ್ರಗಳು ಹುಟ್ಟಿಸುವ ಹಾಸ್ಯ ಸನ್ನಿವೇಶಗಳು ಕರಾವಳಿ ಮಂದಿಗೆ ಉಳಿದವರಿಗಿಂತ ಹೆಚ್ಚು ಆಪ್ತವಾಗಬಹುದುಚಿತ್ರದ ಫಸ್ಟ್ಹಾಫ್ ಮುಗಿದದ್ದೇ ಗೊತ್ತಾಗದೆ ಹೋದರೆ, ಸೆಂಕೆ0ಡ್ಹಾಫ್ನಲ್ಲಿ ನೋಡುಗ `ಕಾಂತಾರಎಂಬ ಲೋಕದಲ್ಲಿ ಮಾಯವಾಗಿ ಬಿಡುತ್ತಾನೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಕಟ್ಟಿಕೊಟ್ಟ ಫ್ರೇಮ್ಗಳು ರಿಷಭ್ ಆಶಯವನ್ನು ಪೂರ್ಣಗೊಳಿಸಿದರೆ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕರಾವಳಿಯಲ್ಲೇ ಹುಟ್ಟಿ ಬೆಳೆದವರಾ.. ಎಂಬ ಸಂದೇಹ ಮೂಡಿಸುತ್ತಾರೆ. ಅಷ್ಟರ ಮಟ್ಟಿಗೆ ದೈವ ಕೋಲದ ವಾದ್ಯಗಳನ್ನು ಅನಾಯಾಸವಾಗಿ ಬಳಸುವಲ್ಲಿ ಗೆದ್ದಿದ್ದಾರೆ. ಚಿತ್ರದ ಸಾಹಸ ದೃಶ್ಯಗಳು ಸೂಪರ್, ಅದರಲ್ಲೂ climax fight ತೆರೆಯಮೇಲೆ ನೋಡುವುದೇ ಒಂದು ಸಂಭ್ರಮ.

 

 

`ಶ್ರೀಮಂತ’ ಮೂಲಕ ಕನ್ನಡಕ್ಕೆ ಸೋನುಸೂದ್

 

 ನಟನಾಗಿ `ಗರುಡ ಗಮನ ರಿಷಭ ವಾಹನಚಿತ್ರದ ಹರಿ ಪಾತ್ರದಲ್ಲಿ ನಟನಾಗಿ ಅಚ್ಚರಿ ಮೂಡಿಸಿದ್ದ ರಿಷಬ್ ಶೆಟ್ಟಿ, ಇಲ್ಲಿ ತಾನೊಬ್ಬ ಸಮರ್ಥ ನಟ ಎಂಬುವುದನ್ನು ಮತ್ತೆ ನಿರೂಪಿಸಿದ್ದಾರೆ. `ಗರುಡ ಗಮನ ರಿಷಭ ವಾಹನಚಿತ್ರದಲ್ಲಿ ರಾಜ್.ಬಿ.ಶೆಟ್ಟಿ ಅವರನ್ನು ಶಿವನಾಗಿ ಆಂಗ್ರಿಯoಗ್ಮ್ಯಾನ್ ಲುಕ್ನಲ್ಲಿ ನೋಡಿದ್ದ ರಿಷಭ್ `ಕಾಂತಾರ ಮೂಲಕ `ಶಿವನನ್ನು ಆವಾಹಿನಿಸಿಕೊಂಡಿದ್ದಾರೆಕಾಡಿನ ಕುಡಿಯ ಅಪರೂಪದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ರಿಷಭ್, ಚಿತ್ರದ ಕೊನೆಯಲ್ಲಿ ಹಂತದಲ್ಲಿ `ದೈವವಾಗುವ ಪರಿಯನ್ನು ತೆರೆಯಮೇಲೆ ನೋಡಿಯೇ ತೀರಬೇಕು. ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಇನ್ನಷ್ಟು ಲೀಲಾಜಾಲವಾಗಿ ಅಭಿನಯಿಸುವ ಅವಕಾಶವಿತ್ತು.  `ಕಿಶೋರ್ ಎಂದಿನ0ತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆಎಂದು ಸುಮ್ಮನಾಗುವಂತಿಲ್ಲ, ಏಕೆಂದರೆ ಕಿಶೋರ್ ಪಾತ್ರಕ್ಕೆ ನ್ಯಾಯ ಒದಗಿಸುವುದರ ಜೊತೆಗೆ `ದೈವಕ್ಕೂ ನ್ಯಾಯ ಒದಗಿಸಿದ್ದಾರೆ! ಅಚ್ಯುತ್ ಕುಮಾರ್ ಅವರದ್ದು ಅಸಮಾನ್ಯ ನಟನೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಅವರ ಪಾತ್ರದ transformation ಮೊದಲೇ ಅರವಿಗೆ ಬರುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಇನ್ನು, ಅಮ್ಮನಾಗಿ ಮಾನಸಿ ಸುಧೀರ್ ಅವರ ಮೇಕಪ್ ಅಲ್ಲಲ್ಲಿ ಕೈಕೊಟ್ಟದ್ದು ಬಿಟ್ಟರೆ, ನಟಿಯಾಗಿ ಇಷ್ಟವಾಗುತ್ತಾರೆ. ಪಂಚಿoಗ್ ಡೈಲಾಗ್ ಹೇಳುತ್ತಾ `ಬಲ್ಲೆ’(ಪೊದೆ)ಯನ್ನೇ `ಓಯೋಮಾಡಿಕೊಳ್ಳುವ ಪ್ರಕಾಶ್ ತುಮ್ಮಿನಾಡು `ತುಂಬುವರಪ್ರತಿನಿಧಿಯಾಗಿದ್ದಾರೆ! ದೀಪಕ್.ರೈ.ಪಾಣಾಜೆ ಮತ್ತು ಪ್ರಮೋದ್ ಶೆಟ್ಟಿ ಪಾಲಿಗೆ ಬಂದ ಪಾತ್ರವನ್ನು ಪಂಚಾಮೃತವಾಗಿಸಿದ್ದಾರೆ. ಇನ್ನು `ಗುರುವಪಾತ್ರಧಾರಿ ಶಿವನ ಅರ್ಭಟದ ಮುಂದೆಯೂ ಗುಂಗು ಹುಟ್ಟಿಸುತ್ತಾರೆ. ಸರ್ಕಾರಿ ಶಾಲೆಯ ಪ್ರವೀಣ ನಟನೆಗಿಂತ ನಿರ್ದೇಶನ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಅರ್ಥವಾಗುತ್ತದೆ. ಇನ್ನು, ಸಿಕ್ಕ ಚಿಕ್ಕ ಪಾತ್ರದಲ್ಲಿ ಶೈನ್ ಶೆಟ್ಟಿ ಶೈನಿಸಿದ್ದಾರೆ.

 

‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

 

ಒಟ್ಟಿನಲ್ಲಿ, ಪ್ರೇಮಪ್ರಣಯ, ಆಸೆದುರಾಸೆ, ಸುಖದುಖಃ, ಹುಟ್ಟುಸಾವು, ಕಥೆದಂತಕಥೆಹೀಗೇ ಎಲ್ಲವನ್ನೂ ಹೇಳುವ ಚಿತ್ರ ಕೊನೆಯಲ್ಲಿ `ಮನುಜ ಮಥ, ವಿಶ್ವ ಪಥಎಂಬುವುದನ್ನು ಗಟ್ಟಿ ಧ್ವನಿಯಲ್ಲಿ ಹೇಳುವುದರ ಮೂಲಕ ಸಾರ್ಥಕತೆಯನ್ನು ಪಡೆಯುತ್ತದೆಕೊನೆಯದಾಗಿ, `ದೈವವನ್ನು ತರೆಯ ಮೇಲೆ ಯಥವತ್ತಾಗಿ ತೋರಿಸಿರುವ ರಿಷಭ್, ಚಿತ್ರ ತಯಾರಿಯ ಸಂದರ್ಭದಲ್ಲಿ ಎಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡರೋ, ಬಿಡುಗಡೆಯ ನಂತರವೂ ಅದನ್ನು ಮುಂದುವರೆಸುವುದು ಹೆಚ್ಚು ಸೂಕ್ತವೇನೋ.

 

ಬಿ.ನವೀನ್ಕೃಷ್ಣ ಪುತ್ತೂರು

Share this post:

Related Posts

To Subscribe to our News Letter.

Translate »