Left Ad
ದೈವಿಕ ಕಥಾಹಂದರದ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ಧೂರಿ ಬಿಡುಗಡೆಗೆ ಸಜ್ಜು - Chittara news
# Tags

ದೈವಿಕ ಕಥಾಹಂದರದ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ಧೂರಿ ಬಿಡುಗಡೆಗೆ ಸಜ್ಜು

ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಇತ್ತೀಚೆಗಷ್ಟೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ, ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಬಹು ನಿರೀಕ್ಷಿತ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.

ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿರುವ ಕಾರಣ, ಶೀಘ್ರದಲ್ಲೇ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೊಂಬಾಳೆ ಫಿಲಮ್ಸ್ ಭಾರಿ ಬಜೆಟ್‌ನಲ್ಲಿ ಸಿನಿಮಾ ಸಜ್ಜು ಮಾಡುತ್ತಿದ್ದು, ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಸಿನಿಮಾ ಅನುಭವ ನೀಡಲು ವಿಶೇಷ ವೇದಿಕೆ ಸಿದ್ಧಪಡಿಸುತ್ತಿದೆ.

ಚಿತ್ರತಂಡವು ಐಮ್ಯಾಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರೇಕ್ಷಕರು ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ನೋಡಬಹುದಾಗಿದೆ. ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ ಮತ್ತು ಸೌಂಡ್‌ ಡಿಸೈನ್ ಬಳಸಿರುವುದರಿಂದ, **“ಇದುವರೆಗೆ ನೋಡಿರದ ಅನುಭವ”**ವನ್ನು ಸಿನಿಮಾ ನೀಡಲಿದೆ ಎಂದು ಹೊಂಬಾಳೆ ಭರವಸೆ ನೀಡಿದೆ.

ಕಾಂತಾರ: ಚಾಪ್ಟರ್ 1’ ಸಿನಿಮಾ 2022ಬ್ಲಾಕ್‌ಬಸ್ಟರ್ **‘ಕಾಂತಾರ’**ಗೆ ಮುನ್ನಾದಿ ಕಥೆಯನ್ನು ಹೇಳಲಿದೆ. ಇದರಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಕನ್ನಡಿಗನಾದರೂ ಬಾಲಿವುಡ್‌ನಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿರುವ ಗುಲ್ಷನ್ ದೇವಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಹಲವಾರು ಹಾಲಿವುಡ್ ತಜ್ಞರು ಪ್ರಾಜೆಕ್ಟ್‌ಗೆ ಕೈಜೋಡಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ದೈವಿಕ ಮೂಲಗಳ ಮೇಲೆ ಆಧಾರಿತ ಕಥೆಯನ್ನು ಆಕರ್ಷಕವಾಗಿ ಚಿತ್ರಿಸಿರುವುದರಿಂದ, ಪ್ರೇಕ್ಷಕರು ‘ಕಾಂತಾರ’ಮತ್ತೊಂದು ಅದ್ಭುತ ಅನುಭವಕ್ಕೆ ತಯಾರಾಗಿದ್ದಾರೆ.

Spread the love
Translate »
Right Ad