Left Ad
‘ಕಾಂತಾರ: ಚಾಪ್ಟರ್ 1’ ಅಬ್ಬರ – ಎರಡು ದಿನದಲ್ಲೇ ₹100 ಕೋಟಿ ಕಲೆಕ್ಷನ್! - Chittara news
# Tags

‘ಕಾಂತಾರ: ಚಾಪ್ಟರ್ 1’ ಅಬ್ಬರ – ಎರಡು ದಿನದಲ್ಲೇ ₹100 ಕೋಟಿ ಕಲೆಕ್ಷನ್!

ಎರಡು ದಿನದಲ್ಲೇ 100 ಕೋಟಿ ರೂ. ಗಳಿಕೆ – ಕನ್ನಡ ಸಿನಿಮಾ ಲೋಕದಲ್ಲಿ ಹೊಸ ದಾಖಲೆ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿಜಕ್ಕೂ ಸಿಡಿಲು ಬಿಟ್ಟಿದೆ. ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಿರುವ ಈ ಸಿನಿಮಾ, ಕನ್ನಡದ ಸಿನಿಮಾ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಈ ವರ್ಷದ 100 ಕೋಟಿ ಕ್ಲಬ್ ಸೇರಿರುವ ಎರಡನೇ ಕನ್ನಡ ಸಿನಿಮಾ ಇದೇ ಆಗಿದೆ.

ಅಕ್ಟೋಬರ್ 2ರಂದು ದಸರಾ ಪ್ರಯುಕ್ತ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ಮೊದಲ ದಿನವೇ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಸಿನಿಮಾ ಇನ್ನಷ್ಟು ವೇಗ ಪಡೆದು 43.65 ಕೋಟಿ ರೂ. ಗಳಿಕೆ ಸಾಧಿಸಿದೆ. ಒಟ್ಟಾರೆಯಾಗಿ ಕೇವಲ ಎರಡು ದಿನಗಳಲ್ಲಿ 105.5 ಕೋಟಿ ರೂಪಾಯಿ ಸಂಗ್ರಹಿಸಿದ ಸಿನಿಮಾ ಈಗ ದೇಶದಾದ್ಯಂತ ಚರ್ಚೆಯ ಕೇಂದ್ರವಾಗಿದೆ.

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ ಮುಂತಾದವರ ನಟನೆಗೆ ಪ್ರೇಕ್ಷಕರು ಭರ್ಜರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದ್ಭುತ ಕಥಾಹಂದರ, ನೈಸರ್ಗಿಕ ನಿರೂಪಣೆ ಮತ್ತು ತೀವ್ರ ಭಾವನಾತ್ಮಕ ಕ್ಷಣಗಳು ಸಿನಿಮಾ ಯಶಸ್ಸಿಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

‘ಕೆಜಿಎಫ್ 2’ ನಂತರ ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂ. ಗಳಿಸಿದ ಕನ್ನಡದ ಎರಡನೇ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಆಗಿದೆ. ಕನ್ನಡಿಗರ ಹೆಮ್ಮೆಯ ಈ ಚಿತ್ರ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ವಿಶ್ವಾಸ ವ್ಯಕ್ತವಾಗಿದೆ.

ಭಾಷಾವಾರು ಗಳಿಕೆ:
ಮೊದಲ ದಿನದ ಕಲೆಕ್ಷನ್‌ನಲ್ಲೇ ಕನ್ನಡದಲ್ಲಿ ₹20 ಕೋಟಿ, ತೆಲುಗಿನಲ್ಲಿ ₹13 ಕೋಟಿ, ಹಿಂದಿಯಲ್ಲಿ ₹18.5 ಕೋಟಿ, ತಮಿಳಿನಲ್ಲಿ ₹5.5 ಕೋಟಿ ಮತ್ತು ಮಲಯಾಳಂನಲ್ಲಿ ₹5.25 ಕೋಟಿ ರೂಪಾಯಿ ಗಳಿಕೆ ದಾಖಲಿಸಲಾಗಿದೆ. ಈ ವೇಗದ ಪ್ರಕಾರ ಸಿನಿಮಾ ಸುಲಭವಾಗಿ ₹300 ಕೋಟಿ ಕ್ಲಬ್ ಸೇರಲಿರುವ ನಿರೀಕ್ಷೆ ಇದೆ.

Spread the love
Translate »
Right Ad