Left Ad
ನಿಶ್ಚಿತಾರ್ಥ ಮಾಡಿಕೊಂಡ ನಟಿ ನಯನಾ ನಾಗರಾಜ್: ಲೈವ್ ನಲ್ಲಿ ಅಂದು ಹೇಳಿದ್ದು ನಿಜವಾಯ್ತು - Chittara news
# Tags

ನಿಶ್ಚಿತಾರ್ಥ ಮಾಡಿಕೊಂಡ ನಟಿ ನಯನಾ ನಾಗರಾಜ್: ಲೈವ್ ನಲ್ಲಿ ಅಂದು ಹೇಳಿದ್ದು ನಿಜವಾಯ್ತು

ಬೆಂಗಳೂರು: ಗಿಣಿರಾಮ ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದನ ನಟಿ, ಗಾಯಕಿ ನಯನಾ ನಾಗರಾಜ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸರಳವಾಗಿ ಮನೆಯಲ್ಲಿಯೇ ನಿಶ್ಚಿತಾರ್ಥ ನಡೆದಿದೆ.ನಯನಾ ನಾಗರಾಜ್ ಮತ್ತು ಸುಹಾಸ್ ಶಿವಣ್ಣ ನಿಶ್ಚಿತಾರ್ಥ ಮನೆಯಲ್ಲಿಯೇ ಸರಳವಾಗಿ ನೆರವೇರಿದ್ದು, ಈ ವಿವಾಹ ನಿಶ್ಚಿತಾರ್ಥದ ಫೋಟೋ, ವಿಡಿಯೋಗಳನ್ನು ನಯನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇದೀಗ ಮನೆಯಲ್ಲಿಯೇ ಸರಳವಾಗಿ ಹೂ ಮುಡಿಸಿ ಉಂಗುರ ಬದಲಾಯಿಸುವ ಶಾಸ್ತ್ರ ನೆರವೇರಿದೆ. ಹೆಚ್ಚು ಅದ್ಧೂರಿ, ಆಡಂಭರವಿಲ್ಲದೇ ಕಾರ್ಯಕ್ರಮ ಮುಗಿದಿದೆ. ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ನಟಿಯರು ಅದ್ಧೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಳ್ಳುತ್ತಾರೆ. ಆದರೆ ನಯನಾ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರವಾಹಿಯಲ್ಲಿ ನಯನಾ ನಾಯಕಿ ಮಹತಿ ಪಾತ್ರ ಮಾಡುತ್ತಿದ್ದರು. ಆ ಧಾರವಾಹಿ ಮುಕ್ತಾಯವಾದ ಬಳಿಕ ಲೈವ್ ಬಂದಿದ್ದ ನಯನಾ ತಮ್ಮ ಹುಡುಗನ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ಇದೀಗ ಅದು ನಿಜವಾಗಿದೆ.
Spread the love
Translate »
Right Ad