ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಾಂಡವ್ ಹೇಳಿದಂತೆ ಮನೆಯ ಅರ್ಧ ಖರ್ಚನ್ನು ನಿಭಾಯಿಸಲು ಕೆಲಸಕ್ಕಾಗಿ ಕುಸುಮಾ ಮತ್ತು ಭಾಗ್ಯಾ ಇಬ್ಬರು ಹುಡುಕಿಕೊಂಡು ಹೊಗಿದ್ದಾರೆ. ಕುಸುಮಾ ಇಂಥ ಮಗನಿಗೆ ಜನ್ಮ ಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರೂ, ತನ್ನ ಸೊಸೆಯನ್ನು ಎಂಥ ಕಷ್ಟದಲ್ಲೂ ಬಿಟ್ಟುಕೊಟ್ಟಿಲ್ಲ.
ಒಂದು ಕಡೆ ಮನೆಯವರೆಲ್ಲಾ ಒಂದಾಗಿದ್ದರೇ, ಇತ್ತ ಸುನಂದಾ ಮಗಳ ಸಂಸಾರ ಸರಿ ಆಗಲಿಯೆಂದು ಅಳಿಯನ ಪರವಾಗಿ ನಿಂತಿದ್ದಾಳೆ.
ಕುಸುಮಾ ಮತ್ತು ಭಾಗ್ಯ ಮನೆ ನಿಭಾಯಿಸುವುದಕ್ಕೆ ಪಣ ತೊಟ್ಟು, ಇವರಿಬ್ಬರು ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಕೆಲಸದ ಇಂಟರ್‌ವ್ಯೂಗೆ ಹೋಗಿದ್ದಾರೆ. ಈ ಇಬ್ಬರು ಅತ್ತೆ ಸೊಸೆಯನ್ನು ಸಂದರ್ಶನಕ್ಕೆ ಕಳುಹಿಸಿರುವುದು ಮಾತ್ರ ಒಬ್ಬನೇ ಬ್ರೋಕರ್.
ಆತ ಕುಸುಮಾಳನ್ನು ಹೊಟೇಲ್ ಮ್ಯಾನೇಜರ್ ಹತ್ತಿರ ಕರೆದುಕೊಂಡು ಬಂದರೆ, ಆದರೆ ಕುಸುಮಾ ತಾನೇ ಮುಂದೆ ಹೊಗಿದ್ದಾಳೆ. ಇದನ್ನು ಕಂಡು ಬ್ರೋಕರ್ ಕಂಗಲಾಗಿ ಏನಮ್ಮ ನಾನು ತಾನೇ ಮುಂದೆ ಹೋಗಬೇಕಿರುವುದು ಎಂದು ಪ್ರಶ್ನೆ ಮಾಡಿದ. ಆದರೆ ಆವಾಗ ಅದಕ್ಕೆ ಕುಸುಮಾ ಕೊಟ್ಟ ಉತ್ತರ ಕೇಳಿ ಶಾಕ್ ಆದನು.
ಹೋಟೆಲ್‌ನಲ್ಲಿ ಮ್ಯಾನೇಜರ್ ಒತ್ತು ಶಾವಿಗೆ ಮಾಡುವವ ಕೈ ಕೊಟ್ಟಿದ್ದಾನೆಂದು ಮೊದಲೇ ಕೋಪದಲ್ಲಿ ಇದ್ದಾಗ, ಯಾರದ್ದೋ ಕೋಪವನ್ನು ಕುಸುಮಾ ಮೇಲೆ ಹಾಕುತ್ತಾನೆ. ಅದೇ ವೇಳೆ ಕುಸುಮಾ ಗರಂ ಆಗಿ, ಒತ್ತು ಶಾವಿಗೆ ತಾನೇ ಪಟಾಪಟ್ ಅಂತ ಮಾಡಿಕೊಡ್ತೀನಿ.
ನನ್ನ ಕೈ ರುಚಿಗೆ ಅಭಿಮಾನಿಗಳಿದ್ದಾರೆಂದು ಹೇಳುತ್ತಾಳೆ. ಕುಸುಮಾ ಆಡುವ ಎಲ್ಲಾ ಮಾತುಗಳು ಬಿಲ್ಡಪ್ ಥರವೇವಿದ್ದರಿಂದ, ಅದಕ್ಕೆ ಸಪೋರ್ಟ್ ಸಿಗಲಿಲ್ಲ. ಆದರೆ ಕೊನೆಗೂ ನಂಗೊಂದು ಚಾನ್ಸ್ ಕೊಡಿ ಅಂತ ಕೇಳಿ, ಒತ್ತು ಶಾವಿಗೆ ಮಾಡಿಕೊಟ್ಟಳು.
ಇನ್ನೊಂದು ಕಡೆ ಭಾಗ್ಯಾ ಫೈವ್ ಸ್ಟಾರ್ ಹೊಟೇಲ್‌ಗೆ ಅಡುಗೆ ಮಾಡಲು ಇಂಟರ್ವ್ಯೂಗೆ ಹೋಗಿದ್ದಾಗ, ಅಲ್ಲಿ ಎಲ್ಲಾ ಪ್ರಶ್ನೆಯೂ ಇಂಗ್ಲೀಷ್‌ನಲ್ಲಿ ಕೇಳಲಾಗಿತ್ತು. ಆದರೆ ಭಾಗ್ಯಾಗೆ ಇಂಗ್ಲಿಷ್ ಗೊತ್ತಿಲ್ಲದ್ದಿದ್ದರೂ, ಮಕ್ಕಳು ಹೇಳುತ್ತಿದ್ದ ಮಾತುಗಳನ್ನು ನೆನಪಿಟ್ಟುಕೊಂಡು ಮಾತನಾಡಿದಳು.
ಆಕೆಗೆ ಇಂಗ್ಲೀಷ್‌ನಲ್ಲಿಯೇ ಪ್ರಶ್ನೆ ಮಾಡಿದರೇ, ಇವಳು ಕನ್ನಡದಲ್ಲಿಯೇ ಉತ್ತರ ಕೊಟ್ಟಿದ್ದಾಳೆ. ಭಾಗ್ಯಾ ಇಂಟರ್‌ವ್ಯೂನಲ್ಲಿ ಸೊಸೆ ಇಂಗ್ಲೀಷ್ ಅರ್ಥವಾಗದೇ ಶಾಕ್ ಆಗಿಯೇ ಇದ್ದಳು.
ಅಡುಗೆ ಮಾಡುವುದರಲ್ಲಿ ಅತ್ತೆ ಸೊಸೆ ಇಬ್ಬರೂ ಎತ್ತಿದ ಕೈ ಆಗಿದ್ದರೂ, ಕುಸುಮಾ ಮೊದಲೇ ಘಾಟಿಯಾಗಿದ್ದು ಕೆಲಸವನ್ನು ತನಗೆ ತಾನೇ ಘೋಷಣೆ ಮಾಡಿಕೊಂಡು ಬಿಟ್ಟಳು. ಕುಸುಮಾಗೆ ಅದು ಯಾವಾಗ ಹೊಟೇಲ್ ಮಾಲೀಕ ಒತ್ತು ಶಾವಿಗೆ ರುಚಿ ಸೂಪರ್ ಅಂತ ಹೇಳಿದನೋ, ಆಗ ಆಕೆ ನಾನು ನಾಳೆಯಿಂದ ಕೆಲಸಕ್ಕೆ ಬರುತ್ತೀನೆಂದು ಹೇಳಿ ಅಧಿಕಾರವನ್ನು ಪಡೆದುಕೊಂಡಳು. ಹೇಗೋ ಕುಸುಮಾಗೆ ಕೆಲಸ ಸಿಕ್ಕಿಬಿಡ್ತು. ಆದರೆ ಭಾಗ್ಯಾಗೆ ಕೆಲಸ ಸಿಗುತ್ತಾ? ಇಂಟರ್‌ವ್ಯೂನಲ್ಲಿ ಪಾಸ್ ಆಗುತ್ತಾಳಾ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ವೀಕ್ಷಿಸಬಹುದು.