ಕೆ.ಜಿ.ಎಫ್-2 ಚಿತ್ರದಲ್ಲಿ ಕೆ.ಜಿ.ಎಫ್ ಭಾಗ ಒಂದರ ಮುಂದುವರಿದ ಭಾಗವಾಗಿದ್ದು, ಪ್ರತಿಯೊಂದು ಸೀನ್‌ಗಳೂ, ಸಮರ್ಥವಾಗಿ ಕಥೆ ಹೇಳುತ್ತಾ ಹೋಗುತ್ತವೆ. `ವರ್ಲ್ಡ್ ಈಸ್ ಮೈ ಟೆರಿಟರಿ’ ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಕಿಂಗ್ ಸ್ಟಾರ್ ಯಶ್ ಇಡೀ `ಕೆ.ಜಿ.ಎಫ್-2ನ ಮೇಲಿದ್ದ ನೀರೀಕ್ಷೆಯನ್ನು ತನ್ನ ಹೆಗಲಮೇಲೆ ಹೊತ್ತು ನಡೆದಿದ್ದಾರೆ. ಭಾಗ ಒಂದರ ಕೆಲವು ತುಣುಕುಗಳನ್ನು ತೋರಿಸುವ ಮೂಲಕ ಆರಂಭವಾಗುವ ಚಿತ್ರ, ಒಂದರ ನಂತರ ಒಂದರAತೆ ಇಂಟ್ರೆಸ್ಟಿ0ಗ್ ಕಂಟೆ0ಟ್‌ಗಳನ್ನು ತೋರಿಸುತ್ತಾ ಹೋಗುತ್ತದೆ. 4 ವರ್ಷಗಳ ಹಿಂದೆ ‘ಕೆಜಿಎಫ್‌ಚಾಪ್ಟರ್1’ ರಿಲೀಸ್ ಆಗಿತ್ತು. ಮುಂಬೈನಲ್ಲಿದ್ದ ರಾಕಿ ಭಾಯ್, ಗರುಡನನ್ನು ಕೊಲೆ ಮಾಡುವ ಸುಪಾರಿ ಪಡೆದು ನರಾಚಿ ಎಂಬ ಭೂಲೋಕದ ನರಕಕ್ಕೆ ಎಂಟ್ರಿ ಕೊಡುತ್ತಾನೆ. ಬಲಶಾಲಿಯೂ, ಚಾಣಾಕ್ಷನೂ ಆದ ರಾಕಿ, ಸಮಯ ನೋಡಿಕೊಂಡು ಗರುಡನನ್ನು ಸಾಯಿಸುತ್ತಾನೆ. ಅಲ್ಲಿಗೆ ಪಾರ್ಟ್ 1 ಕಥೆ ಮುಗಿದು, ಮುಂದೇನು ಎಂಬ ದೊಡ್ಡ ಕುತೂಹಲವನ್ನು ಪ್ರೇಕ್ಷಕರಲ್ಲಿ ಸೃಷ್ಟಿಸಿದ್ದರು ಪ್ರಶಾಂತ್ ನೀಲ್. ಇದೀಗ ಪಾರ್ಟ್ 2 ರಿಲೀಸ್ ಆಗಿದೆ. ಕಥೆ ಮುಂದುವರಿದಿದೆ… ಗರುಡನ ಸಾವಿನ ನಂತರ ಕೆ.ಜಿ.ಎಫ್‌ನಲ್ಲಿ ಏನೆಲ್ಲಾ ಆಗಲಿದೆ, ನರಾಚಿಯಲ್ಲಿ ರಾಕೀ ಭಾಯ್ ಏನೆಲ್ಲಾ ಮಾಡುತ್ತಾರೆ, ಇಡೀ ಸಾಮ್ರಾಜ್ಯವನ್ನು ಹೇಗೆ ತಮ್ಮ ವಶಕ್ಕೆ ಪಡೆಯುತ್ತಾರೆ ಎಂದು ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಅತ್ಯುತ್ತಮ ನರಶೇನ್ ಮೂಲಕ ತೋರಿಸಲಾಗಿದೆ. ಅಧೀರ ಪಾತ್ರಧಾರಿ ಸಂಜು ಬಾಬಾ ಅವರು ಭರ್ಜರಿ ಎಂಟ್ರಿಯ ಮೂಲಕ ಕಥೆಗೆ ಬೇರೆಯದೇ ಆಯಾಮ ಸಿಕ್ಕಿರುತ್ತದೆ. ಅಷ್ಟರಲ್ಲಿ ರಾಕೀ ಭಾಯ್ ಅವರ ರಾಕಿಂಗ್ ಮಾಫಿಯಾದ ವಿಚಾರ ಇಡೀ ದೇಶದಲ್ಲೇ ಸುದ್ದಿ ಯಾಗಿರುತ್ತದೆ.
ಕೆ.ಜಿ.ಎಫ್-2 ಚಿತ್ರದ ಬಗ್ಗೆ ಪದಗಳಲ್ಲಿ ಎಷ್ಟು ಹೇಳಿದರೂ ಅಷ್ಟೇ, ಯಾಕೆಂದರೆ ದೊಡ್ಡತೆರೆಯಲ್ಲಿ ಈ `ದೊಡ್ಡ’ ಸಾಹಸವನ್ನು ನೋಡಿದಾಗ ಆಗುವ ಅನುಭವ ಅಷ್ಟಿಷ್ಟಲ್ಲ. ರಾಕಿಂಗ್ ಸ್ಟಾರ್ ಯಶ್ ಅವರ ಡೈಲಾಗ್ ಡೆಲಿವೆರಿ, ಆಕ್ಷನ್, ಟೈಮಿಂಗ್ಸ್ , ಲುಕ್ಸ್ ಎಲ್ಲವೂ ಅದ್ಭುತ! ರಾಕಿಂಗ್ ಸ್ಟಾರ್ ಯಶ್ ಅವರನ್ನು ಅಭಿನಯವನ್ನು ತೆರೆಮೇಲೆ ನೋಡುವುದೇ ಅವರ ಅಭಿಮಾನಿಗಳಿಗೆ ಬುಲೆಟ್ ಸದ್ದಿನ ದೀಪಾವಳಿ! ಕೆ.ಜಿ.ಎಫ್-2ಚಿತ್ರದಲ್ಲಿ ಯಶ್ ಅಬಿನಯ ಅತ್ಯಂತ ಪಕ್ವತೆಯಿಂದ ಕೂಡಿದೆ.
ಕೆ.ಜಿ.ಎಫ್-2 ಚಿತ್ರದಲ್ಲಿ ರಾಕಿ ಭಾಯ್ ಅವರಿಗೆ ಸಕತ್ ಆಗಿ ಠಕ್ಕರ್ ಕೊಡುವುದು ಅಧೀರ! ಅಧೀರನ ಪಾತ್ರ ಮಾಡಿರುವ ಬಾಲಿವುಡ್ ನಟ ಸಂಜು ಬಾಬಾ ರಾಖಿಯ ತಾಕಿತ್ತಿಗೆ ತಕ್ಕುದಾದ ವಿಲನ್. ಕ್ಲೆöÊಮ್ಯಾಕ್ಸ್ ನಲ್ಲಿ ರಾಕೀ ಭಾಯ್ ಹಾಗು ಅಧೀರನ ನಡುವೆ ಉದ್ಭವಿಸುವ ಜ್ವಾಲಾಮುಖಿ ಯಾವ ಲೆವೆಲ್‌ಗೆ ಎದ್ದೇಳುತ್ತದೆ ಅನ್ನೋದನ್ನು ತರೆಯಮೇಲೆ ನೋಡುವುದೇ ಅದ್ಭುತ ಅನುಭವ
ಕೆ.ಜಿ.ಎಫ್-2 ಚಿತ್ರದಲ್ಲಿ ಒಂದೊAದು ಫ್ರೇಮ್ ಅನ್ನು ಕೂಡ ನಿರ್ದೇಶಕ ಪ್ರಶಾಂತ್ ನೀಲ್ ಸಾಕಷ್ಟು ಕುಸುರಿ ಕೆಲಸದ ಮೂಲಕ ತೋರಿಸಿದ್ದಾರೆ. ಭುವನ್ ಗೌಡ ಅವರ ಕ್ಯಾಮಾರಾ ಕೆಲಸ `ವಾಹ್’ ಅನ್ನುವಂತಿದೆ. ಇನ್ನುಳಿದಂತೆ ನಟರಾದ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಮಾಳವಿಕ, ನಾಗಾಭರಣ ಅವರು ಎಂದಿನ0ತೆ ತಮ್ಮದೇ ಆದ ಕೊಡುಗೆಯನ್ನು ಕೆ.ಜಿ.ಎಫ್-2ಗೆ ನೀಡಿದ್ದಾರೆ.
ಪ್ರಧಾನ ಮಂತ್ರಿಯಾಗಿ ರವೀನಾ ಟಂಡನ್ ಅವರು ಅತ್ಯದ್ಭುತವಾದ ಪಾತ್ರವನ್ನು ಮಾಡಿದ್ದು, ಅವರ ಸಿನಿಬದುಕಿನಲ್ಲೇ ಅವರಿಗೆ ಈ ಪಾತ್ರ ಬೆಂಚ್‌ಮಾರ್ಕ್ ಆಗಬಲ್ಲುದು. ಕೆ.ಜಿ.ಎಫ್-1ರಲ್ಲಿ ಅಭಿನಯಕ್ಕೆ ಅಷೊಂದು ಸ್ಕೋಪ್ ಇಲ್ಲದ ಪಾತ್ರದಲ್ಲಿ ನಟಿಸಿದ್ದ ನಟಿ ಶ್ರೀನಿಧಿ ಶೆಟ್ಟಿ, ಕೆ.ಜಿ.ಎಫ್-2ನಲ್ಲಿ ತಾನೊಬ್ಬಳು ಬೆಸ್ಟ್ ಆ್ಯಕ್ಟೆçಸ್ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಕೆ.ಜಿ.ಎಫ್-2 ಎಡಿಟಿಂಗ್ ಪ್ಯಾಟರ್ನ್, ಹಿನ್ನಲೆ ಸಂಗೀತ, ಕಲರ್ ಗ್ರೇಡಿಂಗ್…ಹೀಗೆ ಎಲ್ಲವೂ ನೋಡುಗನಿಗೆ ಒಂದು ಫ್ರೆಶ್ ಫೀಲ್ ನೀಡುವಲ್ಲಿ ಯಶಸ್ವಿಯಾಗಿದೆ. ಆರಂಭದಿ0ದ ಕೊನೆಯವರೆಗೂ ಒಂದು ಕ್ಷಣವೂ ಬೋರ್ ಆಗದಂತೆ ಚಿತ್ರಕಥೆ ಮಾಡಿಕೊಂಡಿದ್ದ ಚಿತ್ರತಂಡ, ರಿಲೀಸ್‌ಗೂ ಮುಂಚೆ ಪ್ರೇಕ್ಷಕನಲ್ಲಿ ತುಂಬಿದ ಭರವಸೆಯನ್ನು ಹುಸಿಗೊಳಿಸದೆ, ಪಾರ್ಟ್-3 ಗಾಗಿ ಕಾದು ಕುಳಿತುಕೊಳ್ಳುವಂತೆ ಮಾಡಿದೆ. ಒಟ್ಟಿನಲ್ಲಿ ಯಶ್ ಎಂಬ ಸಿನಿಮಾ ವಿಧ್ಯಾರ್ಥಿ ಮಾತ್ರ ಇಂತಹದೊ0ದು ಸಾಧನೆಯನ್ನು ಮಾಡಲು ಸಾಧ್ಯವೇನೋ? `ಈಗಾಗಲೇ ಸಾಕಷ್ಟು ಸಾಧಿಸಿಬಿಟ್ಟಿದ್ದೀವಿ’ ಎಂದು ತಮ್ಮ ಪ್ರತಿಭೆಗೆ ತಾವೇ ಚೌಕಟ್ಟು ಹಾಕಿಕೊಂಡಿರುವ ಸಾಕಷ್ಟು ನಟರಿಗೆ, ನಿರ್ದೇಶಕರಿಗೆ ಕೆ.ಜಿ.ಎಫ್-2 ದೊಡ್ಡ ಪಾಠವಾಗಬಲ್ಲುದು.