Sandalwood Leading OnlineMedia

ಹಾಡಿನಲ್ಲಿ ‘ಫಾರೆಸ್ಟ್’…ಓಡೋ ಓಡೋ‌‌ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು…

 

‘ಫಾರೆಸ್ಟ್’ ಸಿನಿಮಾದ ಮೊದಲ ಹಾಡು ರಿಲೀಸ್..ಓಡೋ ಓಡೋ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು

ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಸ್ನೇಹಿತರ ಜೊತೆಗೂಡಿನ ಕಾಡಿನ ಕತೆ ಹೇಳೋಕೆ ರೆಡಿ ಆಗಿದ್ದಾರೆ. ಶೇಕಡ 80 ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಅದಕ್ಕೇನೆ ಚಿತ್ರಕ್ಕೆ ಫಾರೆಸ್ಟ್ ಅಂತಲೇ ಹೆಸರಿಡಲಾಗಿದೆ. ಈ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಓಡೋ ಓಡೋ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದಾರೆ, ಖ್ಯಾತ ಗಾಯಕ ಕೈಲಾಸ್ ಖೇರ್ ಹಾಗೂ ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮ ವಿಶ್ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಫಸ್ಟ್Rank ರಾಜು, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

 Chittara Star Awards 2024; Megha Shetty walk the red carpet; exclusive images

ಈ ಹಿಂದೆ ‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್ , ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

 

 ಪ್ರಚಾರ ಅಖಾಡದಲ್ಲಿ ‘ಡಬಲ್ ಇಸ್ಮಾರ್ಟ್’.. ಮೊದಲ ಹಾಡು ರಿಲೀಸ್..ಭರ್ಜರಿ ಸ್ಟೆಪ್ ಹಾಕಿದ ರಾಮ್ ಪೋತಿನೇನಿ

‘ಫಾರೆಸ್ಟ್’ ಸಿನಿಮಾಕ್ಕೆ ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಫಾರೆಸ್ಟ್ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

 

 

Share this post:

Related Posts

To Subscribe to our News Letter.

Translate »