Left Ad
ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ಮೂಲಕ ಶೀತಲ್ ಶೆಟ್ಟಿ ಕಮ್ ಬ್ಯಾಕ್ - Chittara news
# Tags

ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ಮೂಲಕ ಶೀತಲ್ ಶೆಟ್ಟಿ ಕಮ್ ಬ್ಯಾಕ್

ಶಿವರಾಜ್‌ ಕುಮಾರ್‌ ಅವರ ಪುತ್ರಿ ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ಶ್ರೀಮುತ್ತು ಸಿನಿ ಸರ್ವೀಸಸ್‌ನಡಿ ಮೂಡಿ ಬಂದಿರುವ “ಫೈರ್‌ ಫ್ಲೈ’ ಚಿತ್ರಕ್ಕೀಗ ನಿರೂಪಕಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್‌ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟನೆ ಬಿಟ್ಟು ನಿರ್ದೇಶನಕ್ಕಿಳಿದಿದ್ದ ಶೀತಲ್‌ ಇದೀಗ ಮತ್ತೂಮ್ಮೆ ನಟನೆಯತ್ತ ಕಂಬ್ಯಾಕ್‌ ಮಾಡಿದ್ದಾರೆ.

Kannada New Movie Fire Fly Sheetal Shetty
ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿರುವ ಶೀತಲ್‌ ಶೆಟ್ಟಿ, ವಂಶಿ ತಮ್ಮ ನಟರಿಂದ ಏನನ್ನು ಬಯಸುತ್ತಾರೆ ಎಂಬುದು ಗೊತ್ತಿದೆ. ಅದಕ್ಕೆ ತಕ್ಕ ಹಾಗೇ ನಟನೆಯನ್ನು ತೆಗೆಸಿದ್ದಾರೆ. ಅವರು ಚೊಚ್ಚಲ ನಿರ್ದೇಶಕರಂತೆ ಕಾಣುವುದಿಲ್ಲ.

ಅವರ ಕಥೆ ಮತ್ತು ಪಾತ್ರದ ನಿರೂಪಣೆಯಿಂದ ಹಿಡಿದು ಎಲ್ಲಾ ಕಲಾವಿದರನ್ನು ಸರಾಗವಾಗಿ ನಿಭಾಯಿಸುವವರೆಗೆ ಅವರು ಗಮನಿಸಬೇಕಾದ ಉತ್ತಮ ಪ್ರತಿಭೆ. ಚಿತ್ರೀಕರಣದ ಸಮಯದಲ್ಲಿ, ಅವರ ಪೂರ್ವ-ಯೋಜನೆ ಮತ್ತು ಯುವ ತಾಂತ್ರಿಕ ತಂಡವು ಅವರು ಪ್ರತಿಭಾವಂತ ಜನರ ಗುಂಪಾಗಿ ನನ್ನನ್ನು ನಂಬು ವಂತೆ ಮಾಡಿತು. ನಾನು ಇತ್ತೀಚೆಗೆ ಚಿತ್ರಕ್ಕೆ ಡಬ್ಬಿಂಗ್‌ ಮಾಡಿದ್ದೇನೆ. ಸಿನಿಮಾ ಸುಂದರವಾಗಿ ಬಂದಿದೆ ಎಂದಿದ್ದಾರೆ.

Spread the love
Translate »
Right Ad