Left Ad
ಕನ್ನಡ ಚಿತ್ರಗಳ ಪರಿಸ್ಥಿತಿ! ಎಂಟರ ಗಂಟು ಬಿಡಿಸುವರ‍್ಯಾರು? - Chittara news
# Tags

ಕನ್ನಡ ಚಿತ್ರಗಳ ಪರಿಸ್ಥಿತಿ! ಎಂಟರ ಗಂಟು ಬಿಡಿಸುವರ‍್ಯಾರು?

ಈ ವಾರ ಕನ್ನಡದ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಯಾವ ಚಿತ್ರ ಹೌಸ್‍ಫುಲ್‍ ಆಗುತ್ತಿದೆ, ಹೆಚ್ಚು ಗಳಿಕೆ ಮಾಡುತ್ತಿದೆ ಎಂದರೆ ನಿರಾಸೆ ಸಹಜ. ವಿನಯ್‍ ರಾಜಕುಮಾರ್ ‍ಅಭಿನಯದ ‘ಅಂದೊಂದಿತ್ತು ಕಾಲ’ ಮತ್ತು ‘ರಿಪ್ಪನ್‍ ಸ್ವಾಮಿ’ ಚಿತ್ರಗಳಿಗೆ ಒಂದಿಷ್ಟು ಪ್ರೇಕ್ಷಕರು ಬರುತ್ತಿರುವುದು ಬಿಟ್ಟರೆ, ಮಿಕ್ಕ ಚಿತ್ರಗಳನ್ನು ಕೇಳುವವರೇ ಇಲ್ಲ.

ಅದರಲ್ಲೂ ರವಿಚಂದ್ರನ್‍ ಅಭಿನಯದ ‘ಗೌರಿಶಂಕರ’ ಎಂಬ ಚಿತ್ರದ ಮೊದಲ ಪ್ರದರ್ಶನಕ್ಕೆ ಜನ ಇರದೆ, ಪ್ರದರ್ಶನ ರದ್ದಾಗುವ ಪರಿಸ್ಥಿತಿ ಬಂತು. ಚಿತ್ರವು ಬೆಂಗಳೂರಿನ ಸಪ್ನ ಚಿತ್ರಮಂದಿರದಲ್ಲಿ ಬಿಡುಗಡೆಯಾಯ್ತು. ಆದರೆ, ಬೆಳಗಿನ ಪ್ರದರ್ಶನಕ್ಕೆ ಜನ ಬರದಿದ್ದರಿಂದ ಪ್ರದರ್ಶನ ರದ್ದು ಮಾಡಲಾಯ್ತು. ಅದಕ್ಕೆ ಪ್ರಚಾರದ ಕೊರತೆಯೂ ಒಂದು ಕಾರಣ. ರವಿಚಂದ್ರನ್‍ ಅವರ ಅಭಿಮಾನಿಗಳಿಗೂ ಸಹ ಚಿತ್ರ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತಿರಲಿಲ್ಲ. ಆ ಮಟ್ಟಿಗೆ ಚಿತ್ರ ಪ್ರಚಾರವಿಲ್ಲದೆ ಬಿಡುಗಡೆಯಾಗಿದೆ.

 

ಹಾಗಾದರೆ, ಸದ್ಯ ಯಾವ ಚಿತ್ರ ಹೆಚ್ಚು ಗಮನಸೆಳೆಯುತ್ತಿದೆ ಎಂದರೆ, ಮಲಯಾಳಂನ ‘ಹೃದಯಪೂರ್ವಂ’ ಮತ್ತು ‘ಲೋಕ’ ಚಿತ್ರಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ‘ಹೃದಯಪೂರ್ವಂ’ ಚಿತ್ರದಲ್ಲಿ ಮೋಹನ್‍ ಲಾಲ್‍ ನಟಿಸಿದ್ದಾರೆ. ‘ಲೋಕ ಚಾಪ್ಟರ್ 1: ಚಂದ್ರ’ ಚಿತ್ರದಲ್ಲಿ ಪ್ರಿಯದರ್ಶನ್‍ ಮಗಳು ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ.

ಈ ಎರಡೂ ಚಿತ್ರಗಳು ನಿರೀಕ್ಷಿತ ಚಿತ್ರಗಳೇನೂ ಅಲ್ಲ. ಬಿಡುಗಡೆಗೂ ಮುನ್ನ ದೊಡ್ಡ ಸದ್ದು ಮಾಡಿರಲಿಲ್ಲ. ಹೋಗಲಿ, ಚಿತ್ರತಂಡದವರು ಕೇರಳದಿಂದ ಇಲ್ಲಿಗೆ ಬಂದು ಚಿತ್ರದ ಪ್ರಚಾರವನ್ನೂ ಮಾಡಿರಲಿಲ್ಲ. ಹಾಗಿದ್ದರೂ, ಈ ಚಿತ್ರಗಳು ಮಿಕ್ಕೆಲ್ಲಾ ಚಿತ್ರಗಳಿಗೆ ಹೋಲಿಸಿದರೆ, ಹೆಚ್ಚು ಜನರನ್ನು ಸೆಳೆಯುತ್ತಿದೆ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಈ ಚಿತ್ರಗಳನ್ನು ನೋಡುತ್ತಿದ್ದಾರೆ.

 

 

 

Spread the love
Translate »
Right Ad