Sandalwood Leading OnlineMedia

ಒಟಿಟಿಯಲ್ಲೂ ಕಮಾಲ್ ಮಾಡಿದ ಗಾಳಿಪಟ 2, 48ಗಂಟೆಯಲ್ಲೇ 10ಕೋಟಿ ಸ್ಟ್ರೀಮಿಂಗ್ ಮಿನಿಟ್

‘ಗೋಲ್ಡನ್ ಸ್ಟಾರ್ ಗಣೇಶ್’, ಯೋಗರಾಜ್ ಭಟ್ ಹಿಟ್ ಕಾಂಬಿನೇಶನ್ ಒಳಗೊಂಡ ‘ಗಾಳಿಪಟ-2’ ಸಿನಿಮಾ ತೆರೆಮೇಲೆ ಮೋಡಿ ಮಾಡಿತ್ತು. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಚಿತ್ರಕ್ಕೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆಕಂಡ ‘ಗಾಳಿಪಟ 2′ ಸಿನಿಮಾ ಹೊಸ ದಾಖಲೆ ಬರೆದಿತ್ತು. ಸ್ನೇಹ, ಪ್ರೇಮ, ವಿರಹ, ತ್ಯಾಗ ಒಳಗೊಂಡ ಸಿನಿಮಾ ಚಿತ್ರಮಂದಿರದ ಪ್ರೇಕ್ಷಕರ ಮನಗೆದ್ದಿತ್ತು.
 
 
ಇದೀಗ ದಸರಾ ಹಬ್ಬಕ್ಕೆ ಜೀ5 ಒಟಿಟಿಗೆ ಕಾಲಿಟ್ಟಿದ್ದ ಗಣಿ ಗ್ಯಾಂಗ್ ಕಡಿಮೆ ಅವಧಿಯಲ್ಲಿ ಇಲ್ಲೂ ಕೂಡ ದಾಖಲೆ ಬರೆದಿದೆ. ಹೌದು, ದಸರಾ ಹಬ್ಬಕ್ಕೆ ‘ಗಾಳಿಪಟ-2’ ಜೀ5 ಒಟಿಟಿಗೆ ಲಗ್ಗೆ ಇಟ್ಟಿತ್ತು. ಬಿಡುಗಡೆಯಾದ 48 ಗಂಟೆಯಲ್ಲಿ ಗಾಳಿಪಟ-2 ಸಿನಿಮಾ ದಾಖಲೆ ಬರೆದಿದೆ. ಕೇವಲ 48 ಗಂಟೆಯಲ್ಲಿ ಬರೋಬ್ಬರಿ 10ಕೋಟಿ ಸ್ಟ್ರೀಮಿಂಗ್ ಮಿನಿಟ್ ಕಂಡಿದೆ. ಈ ಮೂಲಕ ಗಣಿ ಅಂಡ್ ಭಟ್ರ ಕಾಂಬಿನೇಶನ್ ಒಟಿಟಿಯಲ್ಲೂ ಹೊಸ ದಾಖಲೆ ಬರೆದು ಕಮಾಲ್ ಮಾಡಿದೆ.
 
 
ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಹಿರಿಯ ನಟ ಅನಂತ್ ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರ ತಾರಾಬಳಗವಿದೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕಿದ್ದು, ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿದ್ದ ಗಾಳಿಪಟ 2 ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿ ಎರಡೂ ಕಡೆ ದಾಖಲೆ ಬರೆದಿದೆ.

Share this post:

Related Posts

To Subscribe to our News Letter.

Translate »