Sandalwood Leading OnlineMedia

ಅಪಘಾತದಲ್ಲಿ ಸಾವಿಗೀಡಾದ ಕಿರುತೆರೆ ನಟಿ ಪವಿತ್ರ ಜಯರಾಂ

ಕನ್ನಡ ಮತ್ತು ತೆಲುಗು ಸೀರಿಯಲ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಪವಿತ್ರಾ ಜಯರಾಮ್‌ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರು ಮೂಲತಃ ಮಂಡ್ಯದ ಹನಕೆರೆಯವರು

 

ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ನಟಿ ಪವಿತ್ರಾ ಜಯರಾಮ್‌ (35) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತ್ರಿನಯಿನಿ ಸೀರಿಯಲ್‌ ಮೂಲಕವೇ ಗುರುತಿಸಿಕೊಂಡಿದ್ದ ಪವಿತ್ರಾ, ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ  ಮೆಹಬೂಬ ನಗರದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೆಲುಗಿನ ತ್ರಿನಯಿನಿ ಸೀರಿಯಲ್‌ನಿಂದಲೇ ಹೆಚ್ಚು ಜನಪ್ರಿಯತೆ ಪಡೆದಿದ್ದ ಪವಿತ್ರಾ, ಮೂಲತಃ ಕರ್ನಾಟಕದವರು. ಮಂಡ್ಯ ತಾಲೂಕಿನ ಹನಕೆರೆಯವರು.

 

Actress Pavithra Jayaram died in the accident may alive if the ambulance arrived at the right time

ಹುಟ್ಟೂರಿಗೆ ಆಗಮಿಸುತ್ತಿದ್ದಾಗ ಘಟನೆ

ಆಂಧ್ರದ ಕಾರು ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಹೈದರಾಬಾದ್‌ನಿಂದ ವನಪರ್ತಿಗೆ ಬರುತ್ತಿದ್ದ ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪವಿತ್ರಾ ಜಯರಾಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯದ ಹನಕೆರೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

 

ಕನ್ನಡದಲ್ಲಿ ಸೀರಿಯಲ್‌ಗಳಲ್ಲಿ ನಟನೆ

ಪವಿತ್ರಾ ಜಯರಾಮ್‌ ತೆಲುಗಿನಿ ತ್ರಿನಯನಿ ಸೀರಿಯಲ್‌ ನಟಿಸುತ್ತಿದ್ದರು. ಈ ಧಾರಾವಾಹಿ ಕನ್ನಡಕ್ಕೆ ಡಬ್‌ ಆಗಿ ಜೀ ಕನ್ನಡದಲ್ಲೂ ಪ್ರಸಾರ ಕಂಡಿತ್ತು. ಈ ಸೀರಿಯಲ್‌ಗೂ ಮುನ್ನ ಕನ್ನಡದ ಕೆಲವು ಧಾರಾವಾಹಿಗಳಲ್ಲೂ ಪವಿತ್ರ ಬಣ್ಣ ಹಚ್ಚಿದ್ದರು. ಜೋಕಾಲಿ, ರೋಬೋ ಫ್ಯಾಮಿಲಿ, ರಾಧಾ ರಮಣ, ನೀಲಿ ಸೀರಿಯಲ್‌ನಲ್ಲೂ ನಟಿಸಿದ್ದರು. ಇದೀಗ ದುರಂತ ಅಪಘಾತದಲ್ಲಿ ನಟಿ ಕಣ್ಮುಚ್ಚಿದ್ದಾರೆ

 

Actress Pavithra Jayaram died in the accident may alive if the ambulance arrived at the right time

 

ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಸಂಭವಿಸಿದ್ದ ಹಿನ್ನೆಲೆಯಲ್ಲಿ ಕಾರ್‌ನಲ್ಲಿದ್ದ ಪವಿತ್ರಾ ಜಯರಾಮ್‌ ಸ್ಥಳದಲ್ಲಿಯೇ ನಿಧನರಾಗಿದ್ದಾರೆ.  ಈ ನಡುವೆ ಈ ಅಪಘಾತದ ಸುದ್ದಿ ತಿಳಿದ ಸೀರಿಯಲ್‌ ಟೀಮ್‌ ಕಂಬನಿ ಮಿಡಿಯುತ್ತಿದ್ದರೆ, ಅವರ ಅಪಾರ ಅಭಿಮಾನಿ ಬಳಗ ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಫೋಟೋ ಶೇರ್‌ ಮಾಡಿ ಸಂತಾಪ ಸೂಚಿಸುತ್ತಿದೆ.

Share this post:

Related Posts

To Subscribe to our News Letter.

Translate »