ರಾಯನ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅವನ ಆಟ, ತುಂಟಾಟ, ತರ್ಲೆ ಎಲ್ಲವನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಹೀಗಾಗಿಯೇ ರಾಯನ್ ಅಂದ್ರೆ ಎಲ್ಲರಿಗೂ ಮುದ್ದು. ಈಗ ಬೇರೆ ಶಾಲೆಗೆ ಸೇರಿಕೊಂಡಿದ್ದಾನೆ. ಅಲ್ಲೂ ಇಷ್ಟೇ ತುಂಟಾಟ ಮಾಡುತ್ತಾನಾ ಎಂದರೆ ಅವರ ಅಮ್ಮ ಮೇಘನಾ ರಾಜ್ ನೋ.. ನೋ.. ಅಂತಾ ಇದಾರೆ. ಹಾಗಾದ್ರೆ ರಾಯನ್ ಶಾಲೆಯಲ್ಲಿ ಹೇಗಿರ್ತಾನೆ ಗೊತ್ತಾ..? ಆ ಬಗ್ಗೆ ಮೇಘನಾ ರಾಜ್ ಹೇಳಿದ್ದು ಹೀಗೆ.
ʻರಾಯನ್ ಮೊದಲು ಸ್ಕೂಲ್‌ಗೆ ಸೇರಿಸಿದ ದಿನ ಎಂದೂ ಮರೆಯುವುದಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಪೋಷಕರು ಮಕ್ಕಳ ಜೊತೆ ಸ್ಕೂಲ್‌ನಲ್ಲಿ ಕೂರಬಹುದು ಎಂದಿದ್ದರು. ಏಕೆಂದರೆ ನಾವು ಇದ್ದೀವಿ ಅನ್ನೋ ಧೈರ್ಯ ಮಕ್ಕಳಿಗೆ ಬರುತ್ತೆ ಅಂತ. ಸರಿ ಅಂತ ಹೇಳಿ ನಾನು ಹೋಗಿ ಕುಳಿತುಕೊಂಡೆ..ಎಷ್ಟು ನೀಟ್ ಆಗಿ ಅವನು ವರ್ತಿಸಿದ. ನಾವು ಎಂದೂ ಮನೆಯಲ್ಲಿ ಚಕ್ಲಬಕ್ಲು ಹಾಕೊಂಡು ಕೂತಿರಲಿಲ್ಲ ಆದರೆ ಟೀಚರ್ ಹೇಳಿದ ತಕ್ಷಣ ರಾಯನ್ ಮಾಡಿದ. ಮಕ್ಕಳು ಎಷ್ಟು ಬೇಗ ಹೊಂದಿಕೊಳ್ಳುತ್ತಾರೆ ಅನ್ನೋದು ಆಗ ಅರ್ಥವಾಯ್ತು. ಏಕೆಂದರೆ ಅವನೇ ಏನೋ ಆಕ್ಟಿವಿಟಿ ಹುಡುಕಿಕೊಂಡ ಮಾಡಲು ಶುರು ಮಾಡಿದ. ಸ್ಕೂಲ್‌ನಲ್ಲಿ ಅವನನ್ನು ನೋಡಿ..ಅಯ್ಯೋ ಇಷ್ಟು ಬೇಗ ಬೆಳೆದು ಬಿಡುತ್ತಾರಾ ಮಕ್ಕಳು ಅನಿಸಲು ಶುರುವಾಯ್ತು. ಸ್ಕೂಲ್‌ಗೆ ಹೋಗಲು ಮೊದಲು ಅಳುತ್ತಿದ್ದ ಆದರೆ ಈಗ ಬಾಯ್ ಅಮ್ಮ ಅಂತ ಖುಷಿಯಿಂದ ಹೋಗುತ್ತಾನೆ.
ಪ್ರತಿ ದಿನ ಟಿಫನ್ ಬಾಕ್ಸ್‌ಗೆ ಇಡ್ಲಿ ಬೇಕು ಎಂದು ಹಠ ಮಾಡುತ್ತಾನೆ. ಸ್ಕೂಲ್‌ನಲ್ಲಿ ಟೀಚರ್ ಅಂದುಕೊಳ್ಳಬೇಕು, ಇವರ ಮನೆಯಲ್ಲಿ ಏನೂ ಅಡುಗೆ ಮಾಡಲ್ಲ ಅಂತ ಆದರೆ ಏನ್ ಮಾಡೋದು ರಾಯನ್‌ಗೆ ಪ್ರತಿ ಸಲವೂ ಇಡ್ಲಿ ಬೇಕು ಎಂದು ಕೇಳುತ್ತಾನೆ. ಇಡೀ ಬಾಕ್ಸ್‌ನ ಸ್ಕೂಲ್‌ನಲ್ಲಿ ಕಾಲಿ ಮಾಡುವುದಿಲ್ಲ. ಅರ್ಧ ಸ್ಕೂಲ್‌ನಲ್ಲಿ ತಿಂದು ಉಳಿದ ಅರ್ಧವನ್ನು ಕಾರಲ್ಲಿ ತಿನಿಸು ಅಮ್ಮ ಅಂತ ಹಠ ಮಾಡುತ್ತಾನೆ. ಕಾರಿನಲ್ಲಿ ಬರುವಾಗ ತಿನಿಸಿಕೊಂಡು ಮಾತನಾಡಿಸಿಕೊಂಡು ಬರುತ್ತೀನಿʼ ಎಂದಿದ್ದಾರೆ.