Sandalwood Leading OnlineMedia

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.  

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.  

ರಕ್ಷಿತ್ ಶೆಟ್ಟಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾನೆ ಸ್ಪೆಷಲ್. ಯಾಕಂದರೆ ರಕ್ಷಿತ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಹೌದು, 777 ಚಾರ್ಲಿ ಸಿನಿಮಾ ಮೂಲಕ ರಕ್ಷಿತ್ ದೇಶದಾದ್ಯಂತ ಸದ್ದು ಮಾಡುತ್ತಿದ್ದಾರೆ. ರಕ್ಷಿತ್ ಸದ್ಯ 777 ಚಾರ್ಲಿ ಸಿನಿಮಾದ ಪ್ರೋಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಈಗಾಗಲೇ ಅನೇಕ ಕಡೆ ಚಾರ್ಲಿಯ ಮೊದಲ ಪ್ರಿಮಿಯರ್ ಶೋ ಕೂಡ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಕಣ್ಣೀರಾಕುತ್ತಿದ್ದಾರೆ.

ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ರಕ್ಷಿತ್ ಇದೀಗ 777 ಚಾರ್ಲಿ(777 charlie) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಜ್ಜಾಗಿದ್ದಾರೆ. ರಕ್ಷಿತ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಮೇಕಿಂಗ್, ಟೀಸರ್, ಟ್ರೈಲರ್ ವಿಡಿಯೋ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದೆ.

ಅಂದಹಾಗೆ 777 ಚಾರ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ದೇಶದ ಅನೇಕ ಭಾಗಗಳಲ್ಲಿ ಆಗಿದೆ. ಸದ್ಯ ಸಿನಿಮಾತಂಡ ದೆಹಲಿಯಲ್ಲಾದ ಪ್ರೀಮಿಯರ್ ಶೋಗೆ ಬಂದ ಅಭಿಮಾನಿಗಳು ಮತ್ತು ಅವರ ಪ್ರತಿಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅವರು ಅಪ್ಪಟ ಮಂಗಳೂರಿನ ಪ್ರತಿಭೆ. ಇಂಜಿನಿಯರ್ ಆಗಿ ಎರಡು ವರ್ಷ ಖಾಸಗಿ ಕಂಪನೆಯಲ್ಲಿ ಕೆಲಸ ಮಾಡಿದ್ದರು. ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದೆ ಚಿತ್ರರಂಗದಲ್ಲಿ ನೆಲೆ ನಿಲ್ಲೋದು, ಗಾಂಧಿನಗರದಲ್ಲಿ ಕಟೌಟ್ ಬೀಳೋದು ಸಣ್ಣ ವಿಚಾರ ಅಲ್ಲವೇ ಅಲ್ಲ!ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸನ್ನಷ್ಟೇ ಹೊತ್ತುಕೊಂಡು ಬೆಂಗಳೂರು ಸೇರಿದ ರಕ್ಷಿತ್ ಇಂದು ತನ್ನ ಕನಸನ್ನು ನನಸಾಗಿದ್ದಷ್ಟೇ ಅಲ್ಲದೆ ಭವಿಷ್ಯದ ಅನೇಕ ಸಿನಿಮಾ ಕರ್ತೃಗಳಿಗೆ ಸ್ಪೂರ್ತಿಯಾಗಿದ್ದಾರೆ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ರಿಲೀಸ್ ಆದಮೇಲೆ ರಕ್ಷಿತ್‌ ಯುವಜನತೆಯ ಫೇವರಿಟ್ ಆದರು. ಆಮೇಲೆ ‘ಉಳಿದವರು ಕಂಡಂತೆ’ ಸಿನಿಮಾ ರಕ್ಷಿತ್‌ ಶೆಟ್ಟಿಗೆ ಹೊಸ ಇಮೇಜ್ ನೀಡಿತು. ಅಲ್ಲಿಂದ ಈ ‘ಸಿಂಪಲ್ ಸ್ಟಾರ್’ ಮೇಲೆ ಜನರ ಇಟ್ಟ ನಿರೀಕ್ಷೆ ದುಪ್ಪಟ್ಟಾಯಿತು, ಅವರನ್ನು ನೋಡುವ ದೃಷ್ಟಿಕೋನ ಕೂಡ ಬದಲಾಯಿತು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಕೂಡ ಹಿಟ್ ಆಯ್ತು. 2016ರಲ್ಲಿ ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾ ಮಾಡಿದ ಮೋಡಿ ಎಲ್ಲರಿಗೂ ಗೊತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಚಿತ್ರೀಕರಣದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಈ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ರಿಚರ್ಡ್ ಆಂಟೋನಿ ಸಿನಿಮಾ ಕೂಡ ರಕ್ಷಿತ್ ಕೈಯಲ್ಲಿದೆ. ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಇನ್ನು ಕಿರಿಕ್ ಪಾರ್ಟಿ ಸೀಕ್ವೆಲ್, ಪುಣ್ಯಕೋಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Share this post:

Translate »