ನಟಿ ನಿವೇದಿತಾ ಜೈನ್ ಕನ್ನಡ ಸಿನಿರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟಿಯರಲ್ಲಿ ಒಬ್ಬರು. ರಾಘವೇಂದ್ರ ರಾಜ್ಕುಮಾರ್ ನಾಯಕತ್ವದ ‘ಶಿವರಂಜನಿ’ ಚಿತ್ರದ ಮೂಲಕ ನಟಿಯಾಗಿ ಕಾಲಿಟ್ಟ ನಿವೇದಿತಾ ಜೈನ್, ನಟ ಶಿವರಾಜ್ಕುಮಾರ್ ನಾಯಕತ್ವದ ‘ಶಿವಸೈನ್ಯ’ ಚಿತ್ರಕ್ಕೂ ನಾಯಕಿಯಾಗಿದ್ದರು. ತಮ್ಮ ವೃತ್ತಿಜೀವನದ ಮೊದಲ ಎರಡೂ ಚಿತ್ರಗಳಲ್ಲಿ ಡಾ ರಾಜ್ಕುಮಾರ್ ಫ್ಯಾಮಿಲಿಯ ಪ್ರೊಡಕ್ಷನ್ನಲ್ಲಿ ಕೆಲಸ ಮಾಡಿದ್ದರು ನಟಿ ನಿವೇದಿತಾ ಜೈನ್.
ನಟಿ ನಿವೇದಿತಾ ಜೈನ್ ನಟನೆಯ ‘ಅಮೃತವರ್ಷಿಣಿ’ ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಆದರೆ, ಸುಹಾಸಿನಿ-ಶರತ್ಬಾಬು ಹಾಗು ರಮೇಶ್ ಅರವಿಂದ್ ನಟನೆಯ ಆ ಚಿತ್ರದಲ್ಲಿ ನಿವೇದಿತಾ ಜೈನ್ ಕೇವಲ ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದರು.
ಹೀಗಾಗಿ ಆ ಚಿತ್ರದ ಸಕ್ಸಸ್ ಕ್ರೆಡಿಟ್ ನಿವೇದಿತಾಗೆ ಸಿಗಲಿಲ್ಲ. ಬಳಿಕ, ಪ್ರೇಮರಾಗ ಹಾಡು ಗೆಳತಿ, ಸೂತ್ರಧಾರ, ನೀ ಮುಡಿದಾ ಮಲ್ಲಿಗೆ, ಬಾಳಿದ ಮನೆ, ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದರು.
1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಗಾಗಿ ತಯಾರಿ ಮಾಡುತ್ತಿದ್ದ ನಿವೇದಿತಾ ಜೈನ್, 17 ಮೇ 1998ರಂದು ತಮ್ಮದೇ ಮನೆಯ ಟೆರೆಸ್ಸಿನ ಮೇಲೆ ಕ್ಯಾಟ್ವಾಕ್ ಮಾಡುವಾಗ 35 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಕೋಮಾಗೆ ಜಾರಿ ಆಸ್ಪತ್ರೆ ಸೇರಿಕೊಂಡರು. ಬಳಿಕ, ಚಿಕಿತ್ಸೆ ಫಲಕಾರಿಯಾಗದೇ 10 ಜೂನ್ 1998ರಲ್ಲಿ ಇಹಲೋಕ ತ್ಯಜಿಸಿದರು.
ಕೇವಲ 19 ವರ್ಷಕ್ಕೆ ನಟಿ ನಿವೇದಿತಾ ಜೈನ್ ಅಸು ನೀಗಿದರು. ಆದರೆ ನಿವೇದಿತಾ ಜೈನ್ ಸಾವಿನ ಬಗ್ಗೆ ನಾನಾ ಊಹಾಪೋಹಗಳು ಹಬ್ಬಿದ್ದವು. ಆ ಬಗ್ಗೆ ಇದೀಗ ಅವರ ಸಾವಿನ ಬಗ್ಗೆ ಅವರ ತಾಯಿ ಪ್ರಿಯಾ ಜೈನ್ ಮಾತನಾಡಿದ್ದಾರೆ.
ʻಮೂಕಾಂಬಿಕಾ ದೇವಸ್ಥಾನಕ್ಕೆ ನಾವು ಹೋಗುತ್ತಿರುವಾಗ ಅವರೇ ನಮ್ಮನ್ನು ಕರೆದರು. ಆಗ ನನ್ನ ಮಗಳನ್ನು ನೋಡಿ ಆಕೆಗೆ ಅಲ್ಪ ಆಯಸ್ಸು ಎಂದು ಹೇಳಿದರು. ನಮ್ಮ ಮನೆ ಬಗ್ಗೆನೂ ಸರಿಯಾಗಿ ಹೇಳಿದರು. ಇಲ್ಲಿ ಅಡುಗೆ ಮನೆಯಿದೆ. ಇಲ್ಲಿ ಹಾಲ್ ಇದೆ. ದೇವರ ಮೂಲೆ ಇದೆ ಅಂತೆಲ್ಲ ಹೇಳಿದರು. ಆ ಮನೆ ನಿವೇದಿತಾ ಜೈನ್ ಅನ್ನು ಆಹುತಿ ತೆಗೆದುಕೊಳ್ಳುತ್ತದೆ ಎಂದಿದ್ದರು. ಅವಳ ಹಣೆ ಏಟು ಬೀಳುತ್ತೆ.
ತಕ್ಷಣವೇ ನೀವು ಮನೆಯನ್ನು ಬದಲಾಯಿಸಿ ಎಂದು ಹೇಳಿದ್ದರು. ಸುರೇಶ್ ಗೌಡರು ಅಂತಿದ್ದರು. ಅವರು ಮನೆಯನ್ನು ಹುಡುಕುವುದಕ್ಕೆ ಶುರು ಮಾಡಿದ್ದರು. ಆದರೆ, ದುರಾದೃಷ್ಟವಶಾತ್ ನಮಗೆ ಮನೆ ಸಿಕ್ಕಿರಲಿಲ್ಲ. ಅವರು ಏನು ಹೇಳಿದ್ದರೋ ಹಾಗೇ ನಡೀತು. ನಿವೇದಿತಾ ಜೈನ್ ನಮ್ಮದೇ ಒಂದು ಕರ್ಮಾ ಅಂತಿರುತ್ತೆ. ನನಗೆ ಅಷ್ಟು ಬೇಗ ಏನೂ ಆಗುವುದಿಲ್ಲ ಅಂತ ಹೇಳುತ್ತಿದ್ದಳು. ಅವಳು ಯಾವಾಗಲೂ ಪಾಸಿಟಿವ್ ಆಗಿದ್ದಳುʼ ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.