Sandalwood Leading OnlineMedia

ಮಧ್ಯರಾತ್ರಿ ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ..!

ಸ್ಯಾಂಡಲ್ವುಡ್ನ ನಟ ಚೇತನ್ ಚಂದ್ರ ಕನಕಪುರದ ಬಳಿ ಇರುವ ದೇವಸ್ಥಾನವೊಂದಕ್ಕೆ ಹೋಗಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಗ್ಗಲಿಪುರದಲ್ಲಿ ಹೋಗುವಾಗ ಯುವಕನೊಬ್ಬ ವೀಲ್ಹಿಂಗ್ ಮಾಡಿಕೊಂಡು ಬಂದು ನಟನನ್ನು ಸತಾಯಿಸಿದ್ದಾನೆ. ನಂತರ ಅಡ್ಡಗಟ್ಟಿ ನಿಂತು ಕಾರಿಗೆ ಹಾನಿ ಮಾಡಿದ್ದಲ್ಲದೇ ಚೇತನ್ ಮೇಲೆ ಕಬ್ಬಿಣದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.

Kannada Actor Chetan Chandra assaulted by strangers on road near Kaggalipura

 

ಈ ವೇಳೆ ಕಾರಿಂದ ಇಳಿದು ಪ್ರತಿಕ್ರಿಯೆಗೆ ನಟ ಮುಂದಾಗಿದ್ದಾರೆ. ಆಗ ಯುವಕನ ಜೊತೆಗಿದ್ದ ಯುವತಿ ಅವನಿಗೆ ಏನು ಮಾಡಬೇಡಿ, ಅವನು ಮದ್ಯಪಾನ ಮಾಡಿದ್ದಾನೆ ಎಂದಿದ್ದಾಳೆ.

ಪುಂಡರ ದಾಳಿಯಿಂದ ಚೇತನ್ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು ಹೆಚ್ಚು ರಕ್ತಸ್ರಾವವಾಗಿದೆ. ಸದ್ಯ ನಟನನ್ನು ಕಗ್ಗಲಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ನಟ ದೂರು ನೀಡಿದ್ದಾರೆ.

ನಟ ಚೇತನ್ ಕನಕಪುರದಿಂದ ವಾಪಸ್ ಬರುತ್ತಿದ್ದಾಗ 1 ಕಿ.ಮೀ ನಿಂದ ಯುವಕನೊಬ್ಬ ಸತಾಯಿಸಿಕೊಂಡು ಬಂದಿದ್ದಾನೆ. ಆ ಯುವಕನ ಪತ್ನಿ ಕಗ್ಗಲಿಪುರದ ಬೇಕರಿಯೊಂದರ ಬಳಿ ಕಾಯುತ್ತಿದ್ದಳು. ಹೆಂಡತಿ ಇದ್ದ ಸ್ಥಳದಲ್ಲೇ ಕಾರು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಚೇತನ್ ಕಾರಿಂದ ಇಳಿದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಯುವಕನ ಪತ್ನಿ ಹಾಗೂ ಇನ್ನಿತರರು ನಟನ ಸುತ್ತ ಗುಂಪುಗಟ್ಟಿದ್ದಾರೆ.

 

 

ಪತ್ನಿಯ ಊರು ಕೂಡ ಅದೇ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ನಂತರ ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ನಟ ಚೇತನ್ ಚಂದ್ರ ಅವರ ಕಾರಿಗೂ ಹಾನಿಯಾಗಿದ್ದು, ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಚೇತನ್ ಚಂದ್ರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅವರ ಸ್ಥಿತಿ ನೋಡಿ ಆತಂಕ ಪಡುವಂತಾಗಿದೆ.

 

 

Share this post:

Related Posts

To Subscribe to our News Letter.

Translate »