ಕಂಗನಾ ರಣಾವತ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಕಂಗನಾ ಭಾಗಿಯಾಗಿದ್ದರು. ಕಂಗನಾ ಪ್ರಮಾಣ ವಚನ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ್ದಾರೆ. ಬಿಳಿ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ವಿಕ್ರಾಂತ್ ಮಾಸ್ಸೆ, ಮತ್ತು ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್ ಕ್ವೀನ್ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್ ಧರಿಸಿ ಕಂಗನಾ ಕಾಂತಿಯುತವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..ಸ್ವತಃ ವಿಡಿಯೊ ಹಂಚಿಕೊಂಡಿರುವ ಕಂಗನಾ ‘ಪ್ರಮಾಣ ದಿನದಂದು ನನ್ನ ನೋಟ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.ಇದನ್ನೂ ಓದಿ:ಪತ್ರಕರ್ತನಿಗಾಗಿ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್ ತಯಾರಿಸಲು ಹೊರಟ ಭಾಗ್ಯಾ ಯಶಸ್ವಿಯಾಗ್ತಾಳಾ?
ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.
ELEGANCE Personfied – MP Kangana Ranaut Making a Stylish Entrance 😍👑 #OathCeremony #ModiCabinet #KanganaRanaut pic.twitter.com/E3gyp3e7f7
— Rosy (@rose_k01) June 9, 2024