Sandalwood Leading OnlineMedia

ಕಮಲ್ ಹಾಸನ್ ನಿರ್ಮಾಣದ ಹೊಸ ಸಿನಿಮಾ ಅನೌನ್ಸ್ ; ಶಿವಕಾರ್ತಿಕೇಯನ್ ಗೆ ಜೋಡಿಯಾದ ಸಾಯಿಪಲ್ಲವಿ

ಸೂಪರ್ ಸ್ಟಾರ್ ಕಮಲ್ ಹಾಸನ್ ಸಾರಥ್ಯದ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್ (RKFI) ನಡಿ ಮೂಡಿಬಂದಿದ್ದ ವಿಕ್ರಮ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸೇರಿದೆ. ಇದು ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ನ 50 ಚಿತ್ರ. ಲೋಕೇಶ್ ಕನಗರಾಜ್ ನಿರ್ದೇಶನದ ಹಾಗೂ ಕಮಲ್ ನಟನೆಯ ವಿಕ್ರಮ್ ಅದ್ಧೂರಿ ಸಕ್ಸಸ್ ಕಂಡಿದೆ. ಈ ಸಕ್ಸಸ್ ಬಳಿಕ ಈ ನಿರ್ಮಾಣ ಸಂಸ್ಥೆಯಡಿ 51 ಚಿತ್ರ ಸೆಟ್ಟೇರಿದೆ. ಮೇಜರ್ ಚಿತ್ರ ನಿರ್ಮಿಸಿದ್ದ ರಾಜ್ ಕಮಲ್ ಫಿಲ್ಮ್ಸ್ ಹಾಗೂ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ (SPIP) ಮತ್ತೊಂದು ಜೊತೆಗೂಡಿ ಹೊಸ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ.

 `ಡೇರ್ ಡೆವಿಲ್ ಮುಸ್ತಫಾ’ ರಿಲೀಸ್ ಗೆ ಡೇಟ್ ಫಿಕ್ಸ್;  `ಡಾಕ್ಟರ್ ಬ್ರೋ’ trailerಗೆ  ಪ್ರೇಕ್ಷಕ ಫಿದಾ!

ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಯೇನ್ ನಟಿಸುತ್ತಿರುವ #SK21 ಚಿತ್ರದ ಸಮಾರಂಭ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಮಲ್ ಹಾಸನ್ ಈ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಶ್ರೀ ಆರ್ ಮಹೇಂದ್ರನ್, ಶ್ರೀ ಶಿವಕಾರ್ತಿಕೇಯನ್, ಎಂಎಸ್ ಸಾಯಿ ಪಲ್ಲವಿ, ಶ್ರೀ ರಾಜ್ ಕುಮಾರ್ ಪೆರಿಯಸಾಮಿ, ಶ್ರೀ ಜಿವಿ ಪ್ರಕಾಶ್, ಸಹ ನಿರ್ಮಾಪಕ ಶ್ರೀ ವಕೀಲ್ ಖಾನ್, ಶ್ರೀ ಲಾಡಾ ಗುರುಡೆನ್ ಸಿಂಗ್, ಜನರಲ್ ಮ್ಯಾನೇಜರ್ ಮತ್ತು ಹೆಡ್, ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್, ಇಂಡಿಯಾ ಮತ್ತು ಶ್ರೀ ನಾರಾಯಣನ್, CEO, RKFI  ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಶ್ಮಿಕಾಗೆ ಒಲಿದು ಬರಲಿದೆಯಾ ಆ ಒಂದು ಅದ್ಭುತ ಅವಕಾಶ?!

 

ರಾಜ್ ಕುಮಾರ್ ಪೆರಿಯಸಾಮಿ ಕಥೆ ಬರೆದು ನಿರ್ದೇಶಿಸಿದ್ದು, ಶಿವಕಾರ್ತಿಕೇಯನ್ ಅವರನ್ನು ಅವರ ಅಭಿಮಾನಿಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ದೊಡ್ಡ ಪರದೆಯ ಮೇಲೆ ತರುವ ಪ್ರಯತ್ನದಲ್ಲಿದ್ದಾರೆ. #SK21 ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸ್ತಿದ್ದು, ಕಾಶ್ಮೀರದಲ್ಲಿ ಎರಡು ತಿಂಗಳುಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಜಿ ವಿ ಪ್ರಕಾಶ್ ಸಂಗೀತ ನಿರ್ದೇಶನ, , ಸಿಎಚ್ ಸಾಯಿ ಛಾಯಾಗ್ರಹಣ, ಆರ್. ಕಲೈವನನ್ ಸಂಕಲನಕಾರ ಮತ್ತು ಸ್ಟೀಫನ್ ರಿಕ್ಟರ್ ಸಾಹಸ ನಿರ್ದೇಶಕ ಚಿತ್ರಕ್ಕಿದೆ. ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್‌ನ ಸಹ-ನಿರ್ಮಾಣದಲ್ಲಿದೆ ಕೈ ಜೋಡಿಸಿದೆ.

 

Share this post:

Related Posts

To Subscribe to our News Letter.

Translate »