Sandalwood Leading OnlineMedia

‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದಲ್ಲಿ ವಿಲನ್ ಆಗಿ ಕಮಲ್ ಹಾಸನ್?

ನಿರ್ದೇಶಕ ಪ್ರಶಾಂತ್ ನೀಲ್ ಅವರು, ಜ್ಯೂನಿಯರ್ ಎನ್ ಟಿ ಆರ್ ಜೊತೆಗೆ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು, ಚಿತ್ರದಲ್ಲಿ ಬಹುಮುಖ ಪ್ರತಿಭೆ ಕಮಲ್ ಹಾಸನ್ ಅವರು ಎಂಟ್ರಿ ಕೊಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಜ್ಯೂನಿಯರ್ ಎನ್’ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿರುವ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರದ ಹೆಸರನ್ನು ಎನ್‌ಟಿಆರ್ 31 ಎಂದು ಇಡಲಾಗಿದೆ. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. 2023ರ ಏಪ್ರಿಲ್ ನಲ್ಲಿ ಚಿತ್ರ ಸೆಟ್ ಏರಲಿದ್ದು, 2024ರ ಸಂಕ್ರಾಂತಿ ಹಬ್ಬದ ವೇಳೆಗೆ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಪ್ರಬಲ ನಾಯಕನ ಅಗತ್ಯವಿದ್ದು, ಕಮಲ್ ಹಾಸನ್ ಆ ಪಾತ್ರಕ್ಕೆ ಅತ್ಯುತ್ತಮ ನಾಯಕ ಎಂದು ಪ್ರಶಾಂತ್ ನೀಲ್ ಚಿಂತನೆ ನಡೆಸಿದ್ದಾರೆ.

ಈಗಾಗಲೇ ಕಮಲ್ ಹಾಸನ್ ಅವರನ್ನು ಪ್ರಶಾಂತ್ ನೀಲ್ ಸಂಪರ್ಕಿಸಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.


ಈ ನಡುವೆ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕಮಲ್ ಹಾನ್ ಅವರು, ಲೋಕೇಶ್ ಕನಗರಾಜ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ವಿಕ್ರಮ್ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ನಟಿಸಿರುವ ಈ ಚಿತ್ರವು ಜೂನ್ 3 ರಂದು ಬಿಡುಗಡೆಯಾಗಲಿದೆ. ಇನ್ನು ಪ್ರಶಾಂತ್ ನೀಲ್ ಅವರು ಪ್ರಭಾಸ್ ನಟಿಸುತ್ತಿರುವ ಸಲಾರ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

.

 

Share this post:

Related Posts

To Subscribe to our News Letter.

Translate »