ತಮಿಳು ಸ್ಟಾರ್ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ.
ಅಂದಹಾಗೆ ಈ ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ ಕರ್ನಾಟಕಕ್ಕೆ ಬಂದಿದ್ದರು. ಆಗ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಕನ್ನಡಿಗರ ಮುಂದೆ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ತನ್ನ ಜೀವನಲ್ಲಿ ವರನಟ ಡಾ.ರಾಜ್ ಕುಮಾರ್ ಎಷ್ಟು ಮುಖ್ಯ ಅನ್ನೋದನ್ನ ಸ್ವಾರಸ್ಯವಾಗಿ ಹೇಳಿದ್ದಾರೆ.
ನಾನು 21ನೇ ವಯಸ್ಸಿನಲ್ಲಿ ಇದ್ದಾಗ ರಾಜ್‌ಕುಮಾರ್ ಅವರು ನನ್ನ ನಟನೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ‘ಪುಷ್ಪಕ ವಿಮಾನ’ ಸಿನಿಮಾ ಮೊದಲ ದಿನದ ಶೂಟಿಂಗ್ ವೇಳೆ ಅವರು ಬಂದು ಬೆನ್ನು ತಟ್ಟಿದ್ದರು. ‘ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆಯವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ರಾಜ್‌ಕುಮಾರ್ ಅವರಿಂದ ಕಲಿತುಕೊಂಡಿದ್ದೆ.
ಅವರು ತಮ್ಮ ಗುಣವನ್ನು ತಮ್ಮ ಮಕ್ಕಳಿಗೂ ನೀಡಿದ್ದಾರೆ. ನಾನು ಪುನೀತ್ ಹಾಗೂ ಡಾ.ರಾಜ್ ಕುಮಾರ್ ಇಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಕೆಲ ವಿಚಾರಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಪುನೀತ್ ರಾಜ್ ಕುಮಾರ್ ಬದುಕಿದ್ದಿದ್ದರೆ, ನಾವಿಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದೆವು ಎಂದು ಹೇಳಿದ್ದಾರೆ.