Sandalwood Leading OnlineMedia

*ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ….ಏಜೆಂಟ್ ಹೇಗಿರಬೇಕು ಗೊತ್ತಾ?*

ಟಾಲಿವುಡ್ ನಟ ಕಲ್ಯಾಣ್ ರಾಮ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅವರ ಜನ್ಮದಿನದ ಉಡುಗೊರೆಯಾಗಿ ಡೆವಿಲ್ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್ ರಾಮ್ ಈ ಬಾರಿಯೂ ವಿಶಿಷ್ಟ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ. ಅದರ ಮುಂದುವರೆದ ಭಾಗವೇ ಡೆವಿಲ್.ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಡೆವಿಲ್ ಗ್ಲಿಂಪ್ಸ್ ಭಾರೀ ಸದ್ದು ಮಾಡುತ್ತಿದೆ. 1 ನಿಮಿಷ 2 ಸೆಕೆಂಡ್ ಇರುವ ಝಲಕ್ ನಲ್ಲಿ ಡೆವಿಲ್ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಏಜೆಂಟ್ ಕಥೆ ಅನ್ನೋ ಗೊತ್ತಾಗುತ್ತಿದೆ. ಗೂಢಚಾರಿ ಹೇಗೆ ಇರಬೇಕು ಅನ್ನೋದನ್ನು ವಿವರಿಸುತ್ತಾ ಎಂಟ್ರಿ ಕೊಡುವ ಕಲ್ಯಾಣ್ ರಾಮ್ ಲುಕ್ ಗೆಟಪ್ ಗಮನಸೆಳೆಯುತ್ತದೆ‌. ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತ  ಅದ್ಭುತವಾಗಿ ಮೂಡಿಬಂದಿದೆ. ಕಲ್ಯಾಣ್ ರಾಮ್ ಗೆ ಜೋಡಿಯಾಗಿ ಸಂಯುಕ್ತ ಮೆನನ್ ನಟಿಸಿದ್ದಾರೆ.

ಇನ್ನೂ ಓದಿ :  *ತಮಿಳು ಚಿತ್ರ ನಟ  ದಳಪತಿ ವಿಜಯ್  ಸಿನಿಮಾಗೆ ಗುಡ್ ಬೈ  ಹೇಳಲಿದ್ದಾರೆ! ರಾಜಕೀಯ ಎಂಟ್ರಿಗೆ ಸಿದ್ದತೇನಾ?*

ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ  ನಿರ್ಮಿಸುತ್ತಿದ್ದಾರೆ.  ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಚಿತ್ರಕ್ಕೆ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ಮೂಡಿಬರಲಿದೆ.

Share this post:

Related Posts

To Subscribe to our News Letter.

Translate »