ಪ್ರಭಾಸ್ ನಟನೆಯ ‘ಕಲ್ಕಿ 2989 AD’ ಸಿನಿಮಾ ಬಿಡುಗಡೆಗೆ 4 ದಿನ ಬಾಕಿಯಿದೆ. ಈಗಾಗಲೇ ಹಲವೆಡೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಕೂಡ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ದೊಡ್ಡಮಟ್ಟದ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರ್ತಿದೆ. ಕನ್ನಡ ಶೋಗಳ ಸಂಖ್ಯೆ ಕಮ್ಮಿಯಿದ್ದು ತೆಲುಗು, ಹಿಂದಿ ವರ್ಷನ್‌ಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಇನ್ನು ಬೆಳ್ಳಂಬೆಳಗ್ಗೆ 5 ಗಂಟೆಗೆ ಸಾಕಷ್ಟು ಕಡೆಗಳಲ್ಲಿ ಮೊದಲ ಪ್ರದರ್ಶನ ಆರಂಭವಾಗಿದೆ. ದೊಡ್ಡ ಸಿನಿಮಾ, ಕ್ರೇಜ್ ಇದೆ ಎನ್ನುವ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿದೆ.
READ MORE ; ಟೀಸರ್ ಮೂಲಕವೇ ಗಟ್ಟಿ ಕಥೆಯ ಸಂಕೇತ ನೀಡಿದ `ಸಾಂಕೇತ್’ ಚಿತ್ರ ; Sanketh – Teaser Review
ಅತ್ತ ಆಂಧ್ರ, ತೆಲಂಗಾಣದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ರಾಜಶೇಖರ್ ನಟನೆಯ ‘ಕಲ್ಕಿ’ ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಸಾಕಷ್ಟು ಜನ ಬುಕ್‌ಮೈ ಶೋದಲ್ಲಿ ಟಿಕೆಟ್ ಬುಕ್ ಮಾಡಿ ಶಾಕ್ ಆಗಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2989 AD’ ಬದಲು ರಾಜಶೇಖರ್ ‘ಕಲ್ಕಿ’ ಟಿಕೆಟ್ ಬುಕ್ ಆಗ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ ‘ಕಲ್ಕಿ 2989 AD’ ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಜೆಟ್ 500 ಕೋಟಿ ದಾಟಿರುವ ಅಂದಾಜಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಎನಿಸಿಕೊಂಡಿದೆ. ಆದರೆ ಚಿತ್ರದ ಸ್ಯಾಂಪಲ್ಸ್ ತಕ್ಕ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿಲ್ಲ. ಆದರೂ ಹಾಲಿವುಡ್ ರೇಂಜ್ ಮೇಕಿಂಗ್‌ನಿಂದ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು 4 ದಿನ ಮೊದ್ಲೆ ಬೆಂಗಳೂರಿನ ಕೆಲವೆಡೆ ಬೆಳಗ್ಗೆ 5 ಗಂಟೆ ಶೋಗಳು ಸೋಲ್ಡ್‌ಔಟ್ ಆಗಿದೆ.
ಟಿಕೆಟ್ ದರವನ್ನು 400 ರೂಪಾಯಿ, 500 ರೂಪಾಯಿ, 700 ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೂ ಪ್ರಭಾಸ್ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇಲ್ಲಿ ನಿಜಕ್ಕೂ ಯೋಚಿಸಬೇಕಾದ ಸಂಗತಿಯೆ0ದರೆ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅಲ್‌ಮೋಸ್ಟ್ ಟೀಕೆಟ್ ದರ ಒಂದೇ ಥರ ಥರ ಇದೆ. ಆದರೆ ಚೆನೈನಲ್ಲಿ ಕೇವಲ 200 ರುಪಾಯಿ ಒಳಗಡೆ `ಕಲ್ಕಿ’ಯನ್ನು 3ಡಿ ವರ್ಷನ್‌ನಲ್ಲಿ ನೋಡಬಹುದು! ಇನ್ನು ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ತೆಲುಗು ವರ್ಷನ್‌ಗೆ 400 ರಿಂದ 700ರ ವರೆಗೆ ಟೀಕಟ್ ದರ ನಿಗದಿಯಾಗಿದ್ದರೆ, ಇದೇ ತೆಲುವ ವರ್ಷನ್ ಚೆನ್ನೈ ನಲ್ಲಿ 200 ರುಪಾಯಿ ಒಳಗಿದೆ. ‘ಬಾಹುಬಲಿ’ ಸರಣಿ ಬಳಿಕ ಪ್ರಭಾಸ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ‘ಸಲಾರ್’ ಇದ್ದಿದ್ದರಲ್ಲಿ ಗೆಲುವಿನ ದಡ ಸೇರಿತ್ತು. ಹಾಗಾಗಿ ಸಹಜವಾಗಿಯೇ ‘ಕಲ್ಕಿ 2989 AD’ ಮೇಲೆ ಭಾರೀ ಒತ್ತಡ ಇದೆ.