ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದೆ. ಹೀಗಿರುವಾಗಲೇ ಇದೇ ಸಿನಿಮಾದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಈ ವರೆಗೂ ಈ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದೇ ಜೂನ್ 27ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ನಾಗ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸೈನ್ಸ್ ಫಿಕ್ಷನ್ ಕಲ್ಕಿ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಅಮಿತಾಬ್ ಬಚ್ಚನ್ ಅವರ ಹೊಸ ಲುಕ್ ಹೇಗಿರಲಿದೆ ಎಂಬುದನ್ನು ರಿವೀಲ್ ಮಾಡಿತ್ತು ಚಿತ್ರತಂಡ.
ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್ ನೀಡಿದೆ. ಉತ್ತಮ ನಾಳೆಗಾಗಿ ಎಲ್ಲಾ ಶಕ್ತಿಗಳು ಒಗ್ಗೂಡುತ್ತವೆ ಎಂಬ ಕ್ಯಾಪ್ಷನ್ ನೀಡಿದ ವೈಜೈಂತಿ ಮೂವೀಸ್, ಹೊಸ ಪೋಸ್ಟರ್ ಜತೆಗೆ ಬಿಡುಗಡೆ ದಿನವನ್ನು ರಿವೀಲ್ ಮಾಡಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ.