Left Ad
ಪ್ರೇತ ಅದ್ದೂರಿ ಆಡಿಯೋ ಲಾಂಚ್ ಇವೆಂಟ್...'ಕಲಾಕರ್'ಗೆ ಸಾಥ್ ಕೊಟ್ರು ಸಚಿವ ಬೈರತಿ ಸುರೇಶ್ - Chittara news
# Tags

ಪ್ರೇತ ಅದ್ದೂರಿ ಆಡಿಯೋ ಲಾಂಚ್ ಇವೆಂಟ್…’ಕಲಾಕರ್’ಗೆ ಸಾಥ್ ಕೊಟ್ರು ಸಚಿವ ಬೈರತಿ ಸುರೇಶ್

ಪ್ರೇತ ಸಿನಿಮಾ ಮೂಲಕ ಕಲಾಕರ್ ಹರೀಶ್ ರಾಜ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಗೊತ್ತೇ ಇದೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಆಡಿಯೋ ಲಾಂಚ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಜೆಸಿ ನಗರದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಸಚಿವರಾದ ಬೈರತಿ ಸುರೇಶ್ ತಮ್ಮದೇ ಕ್ಷೇತ್ರದ ಕಲಾವಿದರಾದ ಹರೀಶ್ ರಾಜ್ ನಟನೆಯ ಪ್ರೇತ ಸಿನಿಮಾದ ಆಡಿಯೋ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಈ ವೇಳೆ ಕಾಂತಾರದ ಚೆಲುವೆ ಸಪ್ತಮಿ ಗೌಡ ವಿಶೇಷ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.

ಇದನ್ನೂ ಓದಿ  ಕಮಲ್ ‘ಇಂಡಿಯನ್-2’ಗೆ ಕಿಚ್ಚ ಸಾಥ್….ನಾಳೆ ರಿಲೀಸ್ ಆಗ್ತಿದೆ ಫಸ್ಟ್ ಗ್ಲಿಂಪ್ಸ್

ಪ್ರೇತ ಸಿನಿಮಾದ ದೂರದ ಊರಿಗೆ ಎಂಬ ಹಾಡು HRP ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಭಾವುಕ ಗೀತೆಗೆ ನವೀನ್ ಸಜ್ಜು ಧ್ವನಿಯಾಗಿದ್ದು, ಪ್ರವೀಣ್ ಶ್ರೀನಿವಾಸ್ ಮೂರ್ತಿ ಟ್ಯೂನ್ ಹಾಕಿದ್ದಾರೆ. ಹರೀಶ್ ರಾಜ್ ಹಾಗೂ ಅಹಿರಾ ಶೆಟ್ಟಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಈ ಗಾನಬಜಾನ ಕೇಳುಗರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ  ಪೋಸ್ಟ್ ಪ್ರೊಡಕ್ಷನ್ ನಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’ ಬ್ಯುಸಿ..ಯಾವಾಗ ಬರಲಿದೆ ಅಭಿಷೇಕ್-ಅನೀಶ್ ಕಾಂಬೋದ ಸಿನಿಮಾ..?

ಅಭಿನಯದ ಜೊತೆಗೆ ಡೈರೆಕ್ಷನ್​ನಲ್ಲಿಯೂ ಅನುಭವ ಹೊಂದಿರುವ ಹರೀಶ್ ರಾಜ್ ಅವರ ‘ಹರೀಶ್ ರಾಜ್ ಪ್ರೊಡಕ್ಷನ್’ನ ಐದನೇ ಕೊಡುಗೆ ಪ್ರೇತ. ಈ ಪ್ರೊಡಕ್ಷನ್ ಮೂಲಕ ಈಗಾಗಲೇ ‌ನಾಲ್ಕು ಸಿನಿಮಾಗಳು ನಿರ್ಮಾಣವಾಗಿದ್ದು, ಇದೀಗ ‘ಪ್ರೇತ’ ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ಅವರೇ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಪ್ರೇತ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿಬರುತ್ತಿದೆ. ವಿರಾಜಪೇಟೆ ಮತ್ತು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ  “ಕೊರಗಜ್ಜ” ಸಿನಿಮಾ: ಸೆಟ್ ಗೆ ನುಗ್ಗಿಹಾನಿಗೊಳಿಸಿದ್ದ,ಪೋಲೀಸ್ ಕಸ್ಟಡಿಯಲ್ಲಿದ್ದ ದೈವ ನರ್ತಕರೆನ್ನುವವರನ್ನು ಬಂಧಿಸದೆ ಬಿಟ್ಟುಬಿಡಲು ನಿರ್ದೇಶಕರ ಮನವಿ

ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್​ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.ಶೀರ್ಷಿಕೆಯೇ ಹೇಳುವಂತೆ ‘ಪ್ರೇತ’ ಒಂದು ಹಾರರ್​ ಕಥೆಯುಳ್ಳ ಸಿನಿಮಾ. ಹರೀಶ್ ರಾಜ್​ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಹರೀಶ್ ರಾಜ್​ ಜೊತೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ, ಬಿ.ಎಂ. ವೆಂಕಟೇಶ್, ಅಮಿತ್ ಅವರು ಪಾತ್ರವರ್ಗದಲ್ಲಿ ಇದ್ದಾರೆ. ಕಿರಣ್ ಆರ್. ಹೆಮ್ಮಿಗೆ ಸಂಭಾಷಣೆ ಬರೆದಿದ್ದಾರೆ. ಶಿವಶಂಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ. ಜೀವನ್ ಪ್ರಕಾಶ್ ಅವರು ಸಂಕಲನ, ಮಂಜು ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಗೀತೆಗಳಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.

Spread the love
Translate »
Right Ad