Sandalwood Leading OnlineMedia

ಹೀಗೊಂದು `ಕೈ ಜಾರಿದ ಪ್ರೀತಿ’!

ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಿರುವ ’ಕೈ ಜಾರಿದ ಪ್ರೀತಿ’ ಚಿತ್ರಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಚೈತ್ರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಎರಡನೇ ಬಾರಿ ಪುಷ್ಪಭದ್ರಾವತಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ’ನಾವೆಲ್ಲಾ ಭಾರತೀಯರು’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇವರ ಮಗಳು ಮಂಜುಶ್ರೀಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತಂಗಿ ಮಧುಶೆಟ್ಟಿ.ಕೆ.ಆರ್ ಉಪನಾಯಕಿ. ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣವನ್ನು ಮುಗಿಸಿ ಐದು ಹಾಡುಗಳನ್ನು ಬಾಕಿ ಉಳಿಸಿಕೊಂಡಿದೆ. ಸದರಿ ಗೀತೆಯನ್ನು ಮಲೆನಾಡು ಭಾಗದಲ್ಲಿ ಸೆರೆ ಹಿಡಿಯಲು ಏರ್ಪಾಟು ಮಾಡಿಕೊಂಡಿದ್ದಾರೆ.

 

      ಕಥಾನಾಯಕಿ ಜಿಲ್ಲಾಧಿಕಾರಿ ಹೆಂಡತಿ. ದುರದೃಷ್ಟವಶಾತ್ ಪತಿ ಅಪಘಾತದಿಂದ ಮರಣ ಹೊಂದಿರುತ್ತಾನೆ. ಚಿಕ್ಕ ಮಗುವಿನೊಂದಿಗೆ ಜೀವನ ನಡೆಸಲು ಕೆಲಸಕ್ಕೆ ಹೋಗುತ್ತಿರುತ್ತಾಳೆ. ಅಲ್ಲಿರುವ ಸ್ಥಳೀಯ ನಾಲ್ಕು ಪುಂಡರು ಇವಳ ಹಿಂದೆ ಬೀಳುತ್ತಾರೆ. ಅದರಲ್ಲಿ ಯುವ ಪುಂಡ ಅಂದರೆ ಕಥಾನಾಯಕ ಈಕೆಯ ಕಷ್ಟವನ್ನು ಕಂಡು ಮದುವೆ ಮಾಡಿಕೊಳ್ಳುತ್ತಾನೆ. ಇವನು ಎಷ್ಟು ಪ್ರೀತಿ ಮಾಡುತ್ತಿದ್ದರೂ ಅವಳಿಂದ ಸರಿಯಾದ ಸ್ಪಂದನೆ ಸಿಗುತ್ತಿರುವುದಿಲ್ಲ. ಒಮ್ಮೆ ನಡೆಯಬಾರದ ಘಟನೆ ನಡೆದುಹೋಗುತ್ತದೆ. ಇದರಿಂದ ವಿಚಲಿತನಾಗುವ ಆತ ಯಾರಿಗೆ ಬಾಳು ಕೊಡುತ್ತಾನೆ ಎನ್ನುವುದು ಕ್ಲೈಮಾಕ್ಸ್‌ದಲ್ಲಿ ಸುಂದರವಾಗಿ ಹೇಳಲಾಗಿದೆ.

       ಚೇತನ್‌ಕೃಷ್ಣ ಮತ್ತು ಸನತ್ ನಾಯಕರುಗಳು. ಎಸಿಪಿಯಾಗಿ ಹಿರಿಯ ನಟ ಸುಮನ್, ಖಳನಾಗಿ ಡ್ಯಾನಿಕುಟ್ಟಪ್ಪ, ಕೋಟೆಪ್ರಭಾಕರ್, ಭುವನ್‌ಗೌಡ ಉಳಿದಂತೆ ನಾಗೇಂದ್ರಅರಸ್, ನಾರಾಯಣಸ್ವಾಮಿ, ಬಾಬುಹಿರಣಯ್ಯ ಐಟಂ ಹಾಡಿಗೆ ಆಶಿತಾ ಹೆಜ್ಜೆ ಹಾಕಿದ್ದಾರೆ. ಆರು ಹಾಡುಗಳ ಪೈಕಿ ಒಂದನ್ನು ಸಂಗೀತ ಸಂಯೋಜಕ ಗಂಧರ್ವ ಬರೆದಿರುತ್ತಾರೆ. ಛಾಯಾಗ್ರಹಣ ಆರ್.ಗಿರಿ, ಸಾಹಸ ಥ್ರಿಲ್ಲರ್‌ಮಂಜು-ಕೌರವವೆಂಕಟೇಶ್, ನೃತ್ಯ ಗಿರಿ ಅಲ್ಲದೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಡಲಿದ್ದಾರೆ. ರಾಜೇಶ್‌ಕೃಷ್ಣನ್, ಅನುರಾಧಭಟ್, ಸಂತೋಷ್‌ವೆಂಕಿ, ಹೇಮಂತ್, ಚೈತ್ರಾ.ಹೆಚ್.ಜಿ ಮತ್ತು ಶ್ರೀರಾಮ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Share this post:

Translate »