“ಕಬ್ಜ ಚಿತ್ರದಲ್ಲಿ ನಾವು ಮೂವರೇ ಹೀರೋ ಅಲ್ಲ. ಈ ಸಿನಿಮಾದಲ್ಲಿ ನಟರನ್ನು ಹೊರತುಪಡಿಸಿ ಟೆಕ್ನಿಶಿಯನ್ಸ್ ಕೂಡಾ ಹೀರೋಗಳೇ’’ಎಂದು ಉಪೇಂದ್ರ ಸಂದರ್ಶನವೊ0ದರಲ್ಲಿ ಹೇಳಿಕೊಂಡಿದ್ದರು. `ಕಬ್ಜ’ ನೋಡಿದ ಪ್ರತಿಯೊಬ್ಬನಿಗೂ ಇದು ಅಕ್ಷರಶಃ ಸತ್ಯ ಎನಿಸುತ್ತದೆ. ಚಿತ್ರದ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಪ್ರೀತಿಯಿಂದ ಚಿತ್ರದಲ್ಲಿ ತೊಡಗಿಸಿಕೊಂಡದ್ದು ಎದ್ದು ಕಾಣುತ್ತದೆ. ಮದುಮತಿ (ಶ್ರೀಯಾ ಶರಣ್) ರಾಜಮನೆತನಕ್ಕೆ ಸೇರಿದ ಯುವತಿ, ಅರಕೇಶ್ವರ (ಉಪೇಂದ್ರ) ಬಡ ಫ್ರೀಡಂ ಫೈಟರ್ ಒಬ್ಬನ ಮಗ. ಇವರಿಬ್ಬರ ನಡುವಿನ ಒಲವಿನ ಗೆಲುವಿನ ಮೇಲೆ ಚಿತ್ರ ಸಾಗುತ್ತದೆ. ಪ್ರೇಕ್ಷಕನ ಎಲ್ಲಾ ನಿರೀಕ್ಷೆಗಳನ್ನು ಮೀರಿ ಚಿತ್ರಕಥೆ ಸಾಗುತ್ತದೆ. ನಿರ್ದೇಶಕ ಆರ್.ಚಂದ್ರು ಕಥೆಯನ್ನು ಡಿಫೆರೆಂಟ್ ಆ್ಯಂಗಲ್‌ನಲ್ಲಿ ಹೇಳಿದ್ದು, ಮಹೇಶ್ ರೆಡ್ಡಿ ಎಡಿಂಟಿಗ್ ಟೇಬಲ್‌ನಲ್ಲಿ ಚಂದ್ರು ಅಂದುಕೊAಡಿದ್ದ ಚಿತ್ರ ಕಥೆಯನ್ನು ಇನ್ನಷ್ಟು ಶಾರ್ಪ್ ಮಾಡಿದ್ದಾರೆ. ಎಪ್ಪತ್ತು-ಎಂಭತ್ತರ ದಶಕದ ಅಂಡರ್‌ವರ್ಲ್ಡ್ ದಿನಗಳನ್ನು ಮತ್ತು ಅಲ್ಲಿನ ವಿಭಿನ್ನ ಮನಸ್ಥಿತಿಯ ಪಾತ್ರಗನ್ನು ಪ್ರಸೆಂಟ್ ಮಾಡಿರುವ ರೀತೀಯೇ ಭಿನ್ನವಾಗಿದೆ. ಅಧಿಕಾರಕ್ಕಾಗಿ ಅಂದಿನ ಪೊಲಿಟಿಕ್ಸ್ ಮತ್ತು ಅಂಡರ್‌ವರ್ಲ್ಡ್ ಹೇಗೆ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿದ್ದವು ಎಂಬುದನ್ನು ನೋಡುತ್ತಿದ್ದರೆ.. ಅಚ್ಚರಿಯಾಗುತ್ತದೆ.

ಪವರ್‌ಸ್ಟಾರ್ ಬರ್ತ್ಡೇಗೆ ಪವರ್‌ಪ್ಯಾಕಡ್ ಕಬ್ಜ! : ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ಕಬ್ಜ ಮೇನಿಯಾ
ನಿರ್ದೇಶಕ ಆರ್.ಚಂದ್ರು ತುಳು ಭಾಷೆಯಲ್ಲಿ ಒಂದು ಗಾದೆ ಇದೆ `ರಿಸ್ಕ್ ದೆತ್ತೊಂಡ ರಸ್ಕ್ ತಿನೋಲಿ’ (ರಿಸ್ಕ್ ತೆಗೊಂಡ್ರೆ ರಸ್ಕ್ ತಿನ್ನಬಹುದು) ಎಂಬತೆ ಸಾಕಷ್ಟು ರಿಸ್ಕ್ ತೆಗೆದುಕೊಂಡಿರೋದು ಪ್ರತೀ ಹೆಜ್ಜೆಯಲ್ಲೂ ಗೊತ್ತಾಗುತ್ತೆ. ಮುಲಾಜಿಲ್ಲದೆ ದುಡ್ಡು ಸುರಿಯುವುದರ ಜೊತೆಗೆ ಕನ್ನಡದಲ್ಲಿ ಹಿಂದೆ0ದೂ ಕಾಣದಂತಹ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವ ಟಾಸ್ಕ್ನಲ್ಲಿ ಗೆದ್ದಿದ್ದಾರೆ. ರವಿ ಬಸ್ರೂರು ಎಂಬ ಮಾಂತ್ರಿಕನಲ್ಲಿ ಇನ್ನೆಷ್ಟು ಅಚ್ಚರಿಗಳಿವೆಯೋ.. ಒಪನಿಂಗ್‌ನಿAದ ಎಂಡ್ ವರೆಗೂ.. ಸಿನಿಮಾ ಮುಗಿದ ಮೇಲೂ ಬಸ್ರೂರು ಕೆಲಸದ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಸೆಟ್‌ಗಳ ವಿಚಾರದಲ್ಲಿ ಕರುನಾಡ ಅಸೆಟ್ ಆಗಿರುವ ಶಿವಕುಮಾರ್ ಅದೆಷ್ಟು ರಾತ್ರಿಗಳನ್ನು ಸೆಟ್‌ಗಾಗಿ ಸವಿಸಿದರೋ.. ಚಂದ್ರು ಅವರ ಕನಸನ್ನು ಇನ್ನಷ್ಟು ಚಂದಗಾಣಿಸಿದ್ದಾರೆ. ಇನ್ನು, ಛಾಯಾಗ್ರಾಹಕ ಎ.ಜೆ.ಶೆಟ್ಟಿ ಅವರ ಅವರ ಕ್ಯಾಮರಾ ಕುಸುರಿ ಗಮನ ಸೆಳೆಯುತ್ತದೆ. ಪ್ರತಿ ದೃಶ್ಯಗಳನ್ನು ಹೆಚ್ಚು ಜಾಗ್ರತೆಯಿಂದ ಪೊಣಿಸಿದ್ದಾರೆ. ಕೆಲವು ದೃಶ್ಯಗಳು ಮೈ ನವಿರೇಳಿಸುತ್ತದೆ. ಛಾಯಾಗ್ರಹಣದ ಮೋಡಿಯನ್ನು ಸಿನಿಮಾ ಕಣ್ತುಂಬಿಕೊAಡೇ ಆನಂದಿಸಬೇಕಷ್ಟೆ. ಚಿತ್ರೀಕರಿಸಿರುವ ಕೆಲವೊಂದು ಶಾಟ್‌ಗಳು ಅವರನ್ನು ಎತ್ತರಕ್ಕೇರಿಸಿದೆ. ಇನ್ನು, ಚಿತ್ರದ ಪಸ್ತಾçಲಂಕಾರ ಚಿತ್ರದ ದೊಡ್ಡ ಹೈಲೆಟ್. ಪಸ್ತಾçಲಂಕಾರ ಮಾಡಿದ ರಶ್ಮೀ ಅನೂಪ್ ರಾವ್ ಸೇರಿದಂತೆ ಎಲ್ಲರಿಗೂ ಅಭಿನಂದನೇ ಸಲ್ಲಿಸಲೇಬೇಕು.

ಸುತ್ತೂರು ಮಠದಲ್ಲಿ `ತನುಜಾ’ ಜಪ!: ನಾಲ್ಕು ಸಾವಿರ ಮಕ್ಕಳಿಗೆ ಪ್ರೇರಣೆಯಾದ ಕಥೆ
ಚಿತ್ರದಲ್ಲಿ ಭಾರ್ಗವ ಭಕ್ಷಿ (ಸುದೀಪ್) ಬಹುಮುಖ್ಯ ಪಾತ್ರವಾಗಿದ್ದು, ಸುದೀಪ್ ತೆರೆಯ ಮೇಲೆ ತುಂಬಾ ಹೊತ್ತು ಇಲ್ಲದೇ ಹೋದರೂ, ಚಿತ್ರದ ಆರಂಭದಿAದ ಕೊನೆಯವರೆಗೂ ಸುದೀಪ್ ವಾಯ್ಸ್ನಲ್ಲಿ ನರೇಶನ್ ಮಾಡಿಸಿದ್ದು ನಿರ್ದೇಶಕರು ತೆಗೆದುಕೊಂಡ ಪರ್‌ಫೆಕ್ಟ್ ನಿರ್ಧಾರ. `ತಲೆಗಳು ಉರುಳುತ್ತವೆ’ ಎಂಬುದನ್ನು ನೀವು ಓದಿರಬಹದು ಅಥವಾ ಕೇಳಿರಬಹುದು. ಆದರೆ, `ಕಬ್ಜ’ದಲ್ಲಿ ನೋಡಬಹುದು. ಲೀಟರ್ ಗಟ್ಟಲೆ ರಕ್ತ ಹರಿಸಿ ಅದರ ಮೇಲೆ ಸಾಮ್ರಾಜ್ಯ ಕಟ್ಟುವ ಕಟುಕನೊಳಗೊಬ್ಬ ಅಪ್ಪಟ ಪ್ರೇಮಿಯನ್ನು ಕಾಣಬಹುದು. ಕಾನೂನು ನಂಬಿದವನಿಗೆ ಕಾನೂನೇ ಏಟು ಕೊಟ್ಟಾಗ ಜ್ವಲಾಮುಖಿಯಾಗುವ ಪರಿಯನ್ನು ಕಂಡು ಅಚ್ಚರಿ ಪಡಬಹದು. ಪರ್‌ಫಾಮೆನ್ಸ್ ವಿಚಾರಕ್ಕೆ ಬರುವುದಾದರೆ. ಕತ್ತಲೆ ಸಾಮ್ರಾಜ್ಯದ ಸುಲ್ತಾನನಾಗಿ ಉಪೇಂದ್ರ ಅರ್ಭಟಿಸುತ್ತಾ, ಮೆಚ್ಯೂರ್ಡ್ ಆಗಿ ನಟಿಸಿದ್ದಾರೆ. ಸುದೀಪ್ ಎಂದಿನ0ತೆ ತಮ್ಮ ಗಂಭೀರ ಲುಕ್‌ನಿಂದಲೇ ಚಂದ್ರು ಅವರ ಲಕ್ ಬದಲಿಸಿದ್ದಾರೆ. ಇನ್ನು, ಶ್ರೀಯಾ ಶರಣ್ ಕೇವಲ ಗ್ಲಾಮರ್‌ಗಾಗಿ ಸಿನಿಮಾದಲ್ಲಿರದೆ, ಒಂದು ಚಾಲೆಂಜಿ0ಗ್ ಪಾತ್ರವನ್ನು ಅನಾಯಾಸವಾಗಿ ಮಾಡಿದ್ದಾರೆ. ಉಳಿದಂತೆ, ಮುರಳಿ ಶರ್ಮ, ಬಿ.ಸುರೇಶ್, ಸುನಿಲ್ ಪುರಾಣಿಕ್ ಸೇರಿದಂತೆ ಎಲ್ಲಾ ನಟರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ಬರುವ ಶಿವರಾಜ್‌ಕುಮಾರ್ ಪ್ರೇಕ್ಷಕನ ಹಲವು ಸಂದೇಹಗಳಿಗೆ ತೆರೆ ಎಳೆಯುತ್ತಾರೆ.

`ರಾಜಯೋಗ’ದ ಮೂಲಕ ಧರ್ಮಣ್ಣನಿಗೊಲಿದ ಸುಯೋಗ!
ಚಿತ್ರ ನೋಡಿದಾಗ ಚಂದ್ರು ಅವರ ಅವರ ಶ್ರಮ ಕಾಣುತ್ತದೆ. ಅವರು ಪ್ರತಿ ದೃಶ್ಯವನ್ನು ಹೆಚ್ಚು ಶ್ರಮ ವಹಿಸಿ ಕೆತ್ತಿದಂತೆ ಕಾಣುತ್ತದೆ. ಚಂದ್ರು ಅವರ ಹಿಂದಿನ ಚಿತ್ರಕ್ಕಿಂತ ಈ ಚಿತ್ರದ ನಿರೂಪಣೆ ಶೈಲಿಯೇ ಬೇರೆ ಇದೆ. ಹಾಗಾಗಿ ಕನ್ನಡದ ಪಾಲಿಗೆ ಈ ಚಿತ್ರ ಭಿನ್ನ ಎಂದೇ ಹೇಳಬಹುದು. ಚಿತ್ರದಲ್ಲಿರುವ ಸಾಹಸಗಳು ಮೈ ನವಿರೇಳಿಸುತ್ತದೆ. ಸಾಮಾನ್ಯವಾಗಿ ಐಟಂ ಸಾಂಗ್‌ಗಳನ್ನು ಸುಖಾಸುಮ್ಮನೆ ತುರುಕಲಾಗುತ್ತದೆ. `ಕಬ್ಜ’ದಲ್ಲೂ ಒಂದು ವಿಶೇಷ ಹಾಡನ್ನು ಇಡಲಾಗಿದೆ. ಆದರೆ, ಇಲ್ಲಿ ಈ ಐಟಂ ಸಾಂಗ್‌ಗೂ ಪ್ರಾಮುಖ್ಯತೆ ಇದೆ. ಹಾಡು ನೋಡುಗರಿಗೆ ಹಬ್ಬ ಎನಿಸುತ್ತದೆ. ಚಿತ್ರದಲ್ಲಿ ತರಾವರಿ ವಿಲನ್‌ಗಳು ಕಾಣಿಸಿಕೊಳ್ಳುತ್ತಾರೆ. ಅವರೆಲ್ಲರಿಗೂ ಭಿನ್ನ ಭಿನ್ನ ಆಕರ್ಷಕ ಹೆಸರಿಟ್ಟಿದ್ದಾರೆ ಚಂದ್ರು. `ಕಬ್ಜ’ ಕ್ಲೈಮ್ಯಾಕ್ಸ್ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಈ ಚಿತ್ರದ ಕ್ಲೆöÊಮಾಕ್ಸ್ ಮೊತ್ತೊಂದರ ಆರಂಭಕ್ಕೆ ನಾಂದಿ ಹಾಡಿಡುತ್ತದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರು ಕಡಿಮೆ ಸಮಯ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ, ಚಾಪ್ಟರ್ 2ನಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆ ಎಂಬುದನ್ನು ಪ್ರೇಕ್ಷಕ ಊಹಿಸಬಹುದು. ಕೆಲ ಪಾತ್ರಗಳ ಬಗ್ಗೆ ನಿರ್ದೇಶಕರು ಗುಟ್ಟು ಕಾಯ್ದುಕೊಂಡಿದ್ದಾರೆ. `ಕಬ್ಜ- 2’ನಲ್ಲಿ ಈ ಪಾತ್ರಗಳ ಗುಟ್ಟು ರಟ್ಟಾಗಲಿದೆ. ಒಟ್ಟಿನಲ್ಲಿ ಇಡೀ ಸಿನಿಮಾ ನೋಡಿದಾಗ ಕನ್ನಡಿಗನಿಗೆ ಚಂದ್ರು ಅವರ ಸಿನಿಮಾ ಪ್ರೀತಿ ಬಗ್ಗೆ ಹೆಮ್ಮೆ ಮೂಡುವುದುದಂತೂ ಖಂಡಿತಾ.
-by B.NAVEEN KRISHNA.PUTTUR
