Sandalwood Leading OnlineMedia

ಜನಮನ ಗೆದ್ದ’ಕಬ್ಜ’ ಟ್ರೇಲರ್​:  ಆರ್.ಚಂದ್ರು ಮ್ಯಾಜಿಕ್‌ಗೆ ಬಾಲಿವುಡ್ ಫಿದಾ

ಆರ್​. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದ ಟ್ರೇಲರ್​ ಶನಿವಾರವಷ್ಟೇ, ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಗಮನಸೆಳೆದ `ಹೈಡ್ ಅಂಡ್ ಸೀಕ್’  ಫಸ್ಟ್ ಲುಕ್

ಈ ಕುರಿತು ಬಾಲಿವುಡ್​ ನಟ-ನಟಿಯರು ಮತ್ತು ತಂತ್ರಜ್ನರಾದ ಅಜಯ್​ ದೇವಗನ್​, ರಾಕೇಶ್​ ರೋಶನ್​, ಮನೋಜ್​ ಬಾಜಪೇಯಿ, ಶ್ರೇಯಸ್​ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್​, ಮಧುರ್​ ಭಂಡಾರ್ಕರ್​, ಮೀರಾ ಚೋಪ್ರಾ, ಕುನಾಲ್​ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್​, ಮೇಕಿಂಗ್​ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಆಗ್ರಾದಲ್ಲಿ ಫ್ಯಾಶನ್ ಡಿಸೈನರ್ ನಮ್ರತಾ ಮಿಂಚು

‘ಕಬ್ಜಾ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

*ಗೋಪಿಚಂದ್ 31ನೇ ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ – ಸೆಟ್ಟೇರಿತು ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ*

ಈ ಚಿತ್ರವನ್ನು ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್​ನಡಿ ಆರ್​. ಚಂದ್ರು ನಿರ್ಮಿಸುತ್ತಿದ್ದು, ಆನಂದ್​ ಮೋಷನ್​ ಪಿಕ್ಚರ್ಸ್​, ಇನ್ವೀನಿಯೋ ಆರಿಜಿನ್​, ರುಚಿರಾ ಎಂಟರ್ಟೈನ್​ಮೆಂಟ್ಸ್​ ಅಂಡ್​ ಸಿನಿಮಾಸ್​ ಸಂಸ್ಥೆಗಳು ನಿರ್ಮಾಣದಲ್ಲಿ ಕೈ ಜೋಡಿಸಿವೆ. ಚಿತ್ರವು ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ಅಂಗವಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

Share this post:

Related Posts

To Subscribe to our News Letter.

Translate »