ನಾಳೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ದಿನ. ಈ ದಿನದ ನೆನಪಿಗಾಗಿ ದ ಮೋಸ್ಟ್ ಟ್ಯಾಲೆಂಟೆಡ್ ನಿರ್ದೇಶಕ ಆರ್.ಚಂದ್ರು ತಾನು ನಿರ್ದೇಶನ ಮಾಡಿರುವ ಕಬ್ಜ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೈದರಾಬಾದ್, ಚೆನ್ನೈ ಮತ್ತು ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಟ್ರೈಲರ್ ಸಮೇತ ಒಂದೊಂದು ಹಾಡನ್ನು ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲವನ್ನೇ ಮೂಡಿಸಿದ್ದಾರೆ. ಮೇಕಿಂಗ್ ಶೈಲಿಯನ್ನು ನೋಡಿದವರೆಲ್ಲರೂ ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ.ಕಬ್ಬ ಸಿನಿಮಾ ಅಂದಾಜು 100 ರಿಂದ 120 ಕೋಟಿ ವೆಚ್ಚದಲ್ಲಿ ತಯಾರಾಗಿದೆ ಎನ್ನಲಾಗಿದೆ. ರಿಲೀಸ್ಗೂ ಮುಂಚೆಯೇ ಸುಮಾರು 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಸುದ್ದಿ ಗಾಂನಗರದಲ್ಲಿ ಹರಿದಾಡುತ್ತಿದೆ. ಆದರೆ ಆರ್. ಚಂದ್ರುಗೆ ಇದು ತೃಪ್ತಿ ಇಲ್ಲ.
ಸುತ್ತೂರು ಮಠದಲ್ಲಿ `ತನುಜಾ’ ಜಪ!: ನಾಲ್ಕು ಸಾವಿರ ಮಕ್ಕಳಿಗೆ ಪ್ರೇರಣೆಯಾದ ಕಥೆ
ಕೆಜಿಎಫ್, ಆರ್ ಆರ್ ಆರ್, ಕಾಂತಾರ ಚಿತ್ರಗಳಂತೆ ವಲ್ಡರ್ï ವೈಡ್ ಬಿಡುಗಡೆಯಾಗಿ ಸಾವಿರ ಕೋಟಿ ಕ್ಲಬ್ ಸೇರುವ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರಗಳಂತೆ ಮಾರ್ಕೆಟಿಂಗ್ ಅನ್ನು ಪ್ಲಾನ್ ಮಾಡಿಕೊಂಡಿರುವ ನಿರ್ದೇಶಕರು ಅವುಗಳಿಗಿಂತ ಹೆಚ್ಚು ಲಾಭವನ್ನು ಗಳಿಸಲು ಪಣತೊಟ್ಟಂತಿದೆ. ಆದ್ದರಿಂದಲೇ ಕಥೆಯಲ್ಲಿ ರಿಯಲ್ ಸ್ಟಾರ್ ಉಪ್ಪಿ ಯೊಂದಿಗೆ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅವರ ಸಮ್ಮಿಲನ ಮಾಡಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಹೆಸರಾಂತ ನಟಿ ಶ್ರೇಯಾ ಸರಣ್ ಕರೆತಂದು ಕಥೆಯ ಮೆರಗನ್ನು ಹೆಚ್ಚಿಸಿಕೊಂಡಿದ್ದಾರೆ. ಮೊದಲಿನಿಂದಲೂ ಸಿನಿಮಾದಷ್ಟೇ ಮಾರ್ಕೆಟಿಂಗ್ ನಲ್ಲೂ ನೈಪುಣ್ಯತೆಯನ್ನು ಹೊಂದಿರುವ ರ್ಆ ಚಂದ್ರು, ಬಿಡುಗಡೆಗೋ ಮುಂಚೆ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ.
ಸುತ್ತೂರು ಮಠದಲ್ಲಿ `ತನುಜಾ’ ಜಪ!: ನಾಲ್ಕು ಸಾವಿರ ಮಕ್ಕಳಿಗೆ ಪ್ರೇರಣೆಯಾದ ಕಥೆ
ಸುಮಾರು 120 ಕೋಟಿಗಿಂತಲೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಚಿತ್ರ ಕಬ್ಜಾ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಸುಮಾರು 50 ದೇಶಗಳನ್ನು ಒಳಗೊಂಡಂತೆ 4000 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಮುಂಜಾನೆಯ ಪ್ರದರ್ಶನ ಕಾಣುತ್ತಿರುವ ಕಬ್ಜ ವನ್ನು ವೀಕ್ಷಿಸಲು ಈಗಾಗಲೇ ಆನ್ಲೈನ್ ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ ಕಬ್ಜ ಚಿತ್ರದ ಚುಮ್ ಚುಮ್ ಚಳಿ ಚಳಿ . ತಬ್ಕೊ ಚಳುವಳಿ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿತ್ತು.
ಟ್ರೇಲರ್ಗೆ ಅಜಯ್ ದೇವಗನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳಾದ, ಅಮಿತಾಭ್ ಬಚ್ಚನ್, ರಾಕೇಶ್ ರೋಶನ್, ಮನೋಜ್ ಬಾಜಪೇಯಿ, ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯï, ಮಧುರ್ ಭಂಡಾಕರರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಈ ಚಿತ್ರವನ್ನು ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್.ಚಂದ್ರು ನಿರ್ಮಿಸುತ್ತಿದ್ದು, ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್ಟ್ರೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು ನಿರ್ಮಾಣದಲ್ಲಿ ಕೈ ಜೋಡಿಸಿವೆ.