ಇತ್ತೀಚೆಗೆ ಬಹುನಿರೀಕ್ಷಿತ ಸಿನಿಮಾಗಳ ದೃಶ್ಯಗಳು ಆನ್ ಲೈನ್ ನಲ್ಲಿ ಬಿಡುಗಡೆಗೂ ಮುನ್ನವೇ ಸೋರಿಕೆಯಾಗುವ ಸಂಕಷ್ಟ ಸಾಮಾನ್ಯವಾಗಿದೆ.ಇದಕ್ಕೆ ಉತ್ತಮ ಉದಾಹರಣೆ ರಾಮ್ ಚರಣ್ ನಾಯಕರಾಗಿರುವ ಗೇಮ್ ಚೇಂಜರ್ ಸಿನಿಮಾ. ಈ ಸಿನಿಮಾದ ಸಾಹಸ ದೃಶ್ಯವೊಂದನ್ನು ಲೀಕ್ ಮಾಡಿದ್ದಕ್ಕೆ ಓರ್ವನನ್ನು ಬಂಧಿಸಲಾಗಿತ್ತು. ಕೊನೆಗೆ ದೃಶ್ಯ ಸೋರಿಕೆ ತಲೆನೋವಿನಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಚಿತ್ರೀಕರಣ ಸ‍್ಥಳವನ್ನೇ ಬದಲಾಯಿಸಬೇಕಾಯಿತು.
ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾಗೂ ಇದೇ ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ದರ್ಶನ್ ಅವರ ಸಾಹಸ ದೃಶ್ಯವೊಂದರ ಫೋಟೋ, ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರೋ ಚಿತ್ರೀಕರಣ ಸಮಯದಲ್ಲಿ ತೆಗೆದ ವಿಡಿಯೋವನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಿದೆ.
ಕಾಟೇರ ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಕಾಟೇರ ಹವಾ ಜೋರಾಗಿಯೇ ಇದೆ. ಇದರ ನಡುವೆ ಆನ್ ಲೈನ್ ಸೋರಿಕೆ ಚಿತ್ರತಂಡಕ್ಕೆ ಹೊಸ ತಲೆನೋವಾಗಿದೆ.
ಕಾಟೇರ ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಕಾಟೇರ ಹವಾ ಜೋರಾಗಿಯೇ ಇದೆ. ಇದರ ನಡುವೆ ಆನ್ ಲೈನ್ ಸೋರಿಕೆ ಚಿತ್ರತಂಡಕ್ಕೆ ಹೊಸ ತಲೆನೋವಾಗಿದೆ.