ಗಾಂಧಿನಗರದ ಥಿಯೇಟರ್ ಗಳಲ್ಲಿ ನರ್ತಕಿ ಹಾಗೂ ಸಂತೋಷ್ ಲಕ್ಕಿ ಥಿಯೇಟರ್ ಎಂದೇ ಹೇಳುತ್ತಾರೆ. ಅದರಲ್ಲೂ ಬಿಗ್ ಸ್ಟಾರ್ ಗಳ ಸಿನಿಮಾಗಳು ನರ್ತಕಿ ಅಥವಾ ಸಂತೋಷ್ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಾ ಇತ್ತು. ಆದರೆ ದರ್ಶನ್ ನಟನೆಯ ‘ಕಾಟೇರ’ ಎರಡರಲ್ಲೂ ರಿಲೀಸ್ ಆಗದೆ ‘ಅನುಪಮ’ ಥಿಯೇಟರ್ ನಲ್ಲಿ ರಿಲೀಸ್ ಆಗ್ತಾ ಇದೆ. ಅಭಿಮಾನಿಗಳೆಲ್ಲಾ ‘ನರ್ತಕಿ’ಯಲ್ಲಿ ‘ಕಾಟೇರ’ ನರ್ತಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ನಿರಾಸೆಯಾಗಿದೆ.
ಇದನ್ನೂ ಓದಿ ಬಿಬಿಕೆ10: ಕಾರ್ತಿಕ್ ತಾಯಿ ಬಂದಾಗ ಮಾತನಾಡಲೂ ಬಿಟ್ಟಿಲ್ಲ, ಅನ್ಯಾಯ ಎಂದ ಫ್ಯಾನ್ಸ್
ಕಳೆದ ವಾರ ಸಲಾರ್ ಹಾಗೂ ಡಂಕಿ ಸಿನಿಮಾಗಳು ಒಳ್ಳೆ ಕಾಂಪಿಟೇಷನ್ ಕೊಡುತ್ತಿವೆ. ಸದ್ಯ ನರ್ತಕಿ ಥಿಯೇಟರ್ ನಲ್ಲಿ ಸಲಾರ್ ಸಿನಿಮಾ ರನ್ ಆಗುತ್ತಿದೆ. ಹೀಗಾಗಿ ಕಾಟೇರ ಸಿನಿಮಾಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಕ್ಕೆ ಇರುವ ಕಾರಣವೇ ಬೇರೆ.
ಇದನ್ನೂ ಓದಿ 22 ವರ್ಷ ಕಿರಿಯ ಯುವತಿಯನ್ನು ಮದುವೆಯಾದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್
‘ಕಾಟೇರ’ ನರ್ತಕಿಯಲ್ಲಿ ರಿಲೀಸ್ ಆಗದೆ ಇರುವುದಕ್ಕೆ ಕಾರಣವೂ ಇದೆ. ಈ ಬಗ್ಗೆ ನರ್ತಕಿಯ ಮಾಲೀಕರು ಮಾತನಾಡಿದ್ದಾರೆ. ಒಂದು ತಿಂಗಳ ಮುಂಚೆ ಬಾಸ್ ಸಿನಿಮಾ ಇಲ್ಲಿಗೆ ಬಂದಿತ್ತು. ಆದರೆ, ಅಡ್ವಾನ್ಸ್ ಜಾಸ್ತಿ ಕೇಳಿದರು. ಇಲ್ಲಿ ಬಿಡುಗಡೆಯಾಗಿರುವ ದರ್ಶನ್ ಅವರ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಆದರೆ, ಈಗ ಏನಾಗಿದೆ ಎಂದರೇ, ಮೆಜೆಸ್ಟಿಕ್‌ನಲ್ಲಿ ಸಕತ್ ಕಾಂಪಿಟೇಷನ್ ಆಗಿದೆ. ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅಲ್ಲಿಗೆ ಸಿನಿಮಾ ಹೋಗುತ್ತವೆ. ನಮ್ಮ ಬಾಸ್ ಫಿಲಂಯಿಂದ ನಾವು ಜೀವನ ಮಾಡಿದ್ದೇವೆ. ಆದರೆ, ನಾವು ಸಿನಿಮಾಗೆ ಇಪ್ಪತ್ತು (20) ಲಕ್ಷ ಕೊಡೋಕೆ ರೆಡಿ ಇದ್ದೇವು. ಆದರೆ, ಅವರು 35 ಲಕ್ಷ ಕೊಟ್ಟಿದ್ದಾರೆ. ಅದಕ್ಕೆ ಸಿನಿಮಾ ಅಲ್ಲಿಗೆ ಹೋಗಿದೆ ಎಂದಿದ್ದಾರೆ.