Left Ad
ಮಧ್ಯಾಹ್ನ 3ರ ತನಕ ರವೀಂದ್ರ ಕಲಾ ಕ್ಷೇತ್ರದಲ್ಲಿ ಕೆ ಶಿವರಾಮ್ ಅಂತಿಮ ದರ್ಶನ - Chittara news
# Tags

ಮಧ್ಯಾಹ್ನ 3ರ ತನಕ ರವೀಂದ್ರ ಕಲಾ ಕ್ಷೇತ್ರದಲ್ಲಿ ಕೆ ಶಿವರಾಮ್ ಅಂತಿಮ ದರ್ಶನ

ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ, ಹಿರಿಯ ನಟ ಕೆ ಶಿವರಾಮ್ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯ್ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಮ್ ಅವರಿಗೆ ಹೃದಯಾಘಾತವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿಧನರಾಗಿದ್ದಾರೆ. ರಾಜಕಾರಣಿಯೂ, ನಟರೂ ಆಗಿದ್ದರಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.

ಇದನ್ನೂ ಓದಿ “ದಿಲ್ ಖುಷ್” ಚಿತ್ರದ “ನೀನೇ ನೀನೇ” ಹಾಡು ಬಿಡುಗಡೆ

ಅಭಿಮಾನಿಗಳಿಗಾಗಿ ಇಂದು ಕೆ ಶಿವರಾಮ್ ಅವರ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆಯ ತನಕ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆ ಅಂತಿಮ ವಿಧಿವಿಧಾನದ ಮೂಲಕ ಕೆ ಶಿವರಾಮ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ ಧೀರ ಭಗತ್ ರಾಯ್ ಅಂಗಳದಿಂದ ತೇಲಿ ಬಂತು ಮನಮೋಹಕ ಹಾಡು

ಕೆ ಶಿವರಾಮ್ ಸಿನಿಮಾಗೆ ಬರುವುದಕ್ಕೂ ಮೊದಲೇ ಐಎಎಸ್​ ಅಧಿಕಾರಿಯಾಗಿದ್ದರು. ಆದರೆ 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯದಲ್ಲಿ ಸಕ್ರೀಯರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿಜಯಪುರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ನಟ, ರಾಜಕಾರಣಿ, ಐಎಎಸ್ ಅಧಿಕಾರಿಯೂ ಆಗಿದ್ದ ಕೆ.ಶಿವರಾಮ್​ ಇನ್ನೂ ನೆನಪು ಮಾತ್ರ.

Spread the love
Translate »
Right Ad