Sandalwood Leading OnlineMedia

ಅರ್ಧ ಶೀರ್ಷಿಕೆಯ ಮೂಲಕ ಗಮನಸೆಳೆದ `K.A’

ಈಗಾಗಲೇ ಒಂದು ಹೊಸ ರೀತಿಯ ಸದಭಿರುಚಿಯ ಚಿತ್ರ ಧರಣಿ ಮಂಡಲ ಮಧ್ಯದೊಳಗೆ  ಚಿತ್ರ ತಂಡ ಈಗ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡುವ‌ ಮೂಲಕ    “K A” ಎಂಬ ಅರ್ಧ ಶೀರ್ಷಿಕೆಯನ್ನು ಅನಾವರಣ ಗೊಳಿಸಿ ಪ್ರಾರಂಭದಲ್ಲೇ  ಕುತೂಹಲವನ್ನು ಕಾಯ್ದಿರಿಸಿದ್ದಾರೆ.  ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಕಾರ್ಯ ನೆಡೆದಿದೆ. ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ  ಸಂತೋಷ್ ಈಗ ಸ್ವತಂತ್ರ ನಿರ್ದೇಶಕನಾಗಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. 

 

 

 ವಿಭಿನ್ನ ರೀತಿಯ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ‘ಥಗ್ಸ್ ಆಫ್ ರಾಮಘಡ’ ಸಿನಿಮಾ – ಚಿತ್ರತಂಡಕ್ಕೆ ಸಿಗಲಿದೆ ಡಾಲಿ ಧನಂಜಯ ಸಾಥ್

 

ನಾಯಕ ನಟರಾಗಿ ಯಶ್ ಶೆಟ್ಟಿ ಹಾಗೂ ಸಿದ್ದು ಮೂಲಿಮನಿ ಬಣ್ಣ ಹಚ್ಚಿದ್ದಾರೆ  ಯಶ್ ಶೆಟ್ಟಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.ಹಾಗೆಯೇ ಸಿದ್ದು ಮೂಲಿಮನಿ ಕೂಡ ತಮ್ಮ ಅಭಿನಯ ಚತುರತೆಯನ್ನು ಪ್ರೇಕ್ಷಕರ ಮುಂದಿಟ್ಟು ತಾನೊಬ್ಬ ಒಳ್ಳೆಯ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ.  ತಾಂತ್ರಿಕವಾಗಿ *”ಧರಣಿ ಮಂಡಲ ಮಧ್ಯದೊಳಗೆ”* ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಕೈ ಜೋಡಿಸಿದ್ದಾರೆ.

 

 

 ಸೆಟ್ಟೇರಿತು ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

 

ಛಾಯಾಗ್ರಾಹಕ ನಾಗಿ ಕೀರ್ತನ್ ಪೂಜಾರಿ,  ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಷ್ ಹಾಗೂ ಕಾರ್ತೀಕ್‌ ಚಿನ್ನೋಜಿ ರಾವ್ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ, ಗೀತ ರಚನೆ ಗೌಸ್ ಪೀರ್,ಸಂಕಲನಕಾರನಾಗಿ ಉಜ್ವಲ್ ಚಂದ್ರ, ಸಾಹಸ ನಿರ್ದೇಶಕನಾಗಿ ಚಂದ್ರು ಬಂಡೆ, ಪ್ರಶಾಂತ್ ಚಿತ್ರದ ಕಲೆಯ ಭಾಗದ ಜವಾಬ್ದಾರಿ ಹೊತ್ತಿದ್ದಾರೆ, ಸಂಭಾಷಣೆಗೆ  ಅಭಿನಂದನ್ ದೇಶ್ ಪ್ರಿಯ, ಪ್ರಶಾಂತ್, ಶಿವಕುಮಾರ್, ಕಡ್ಡಿಪುಡಿ ಕಾಂತರಾಜ್ ಜೊತೆಯಾಗಿದ್ದಾರೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು ಮುಂದಿನ ದಿನಗಳಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಮತ್ತಷ್ಟು  ಮಾಹಿತಿ ನೀಡಲಿದೆ.

 

 

 

 

 

Share this post:

Related Posts

To Subscribe to our News Letter.

Translate »