ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅಲ್ಲಿನ ನಿರ್ಮಾಣದ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಿಂದ ಎಷ್ಟು ಸದ್ದು ಮಾಡುತ್ತಿದ್ದಾರೋ? ಅಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ. ಆಗಾಗ ತಮ್ಮ ಫೋಟೋಶೂಟ್‌ಗಳನ್ನು ಇನ್‌ಸ್ಟಾಗ್ರಾಂ ಶೇರ್ ಮಾಡಿ ಅಭಿಮಾನಿಗಳ ನಿದ್ದೆ ಕೆಡಿಸುತ್ತಿದ್ದಾರೆ.
ಹೆಚ್ಚಾಗಿ ಮಾಡರ್ನ್ ಔಟ್‌ಫಿಟ್‌ನಲ್ಲಿಯೇ ಫೋಟೋಶೂಟ್ ಮಾಡಿಸಿ ಶೇರ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ನೆಟ್ಟಿಗರು ಈ ಫೋಟೋಗಳನ್ನು ನೋಡಿ ಸಾಲು ಸಾಲು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲೂ ಪೋಸ್ ಕೊಟ್ಟು ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.
ಜ್ಯೋತಿ ರೈಗೆ ಫೋಟೊಶೂಟ್‌ಗಳಿಗೆ ಅಂತಾನೇ ಕೆಲವರು ಅಭಿಮಾನಿಗಳು ಇದ್ದಾರೆ. ಕನ್ನಡದ ನಟಿ ತೆಲುಗಿನಲ್ಲಿ ಜನಪ್ರಿಯರಾಗುತ್ತಿದ್ದಂತೆ ಅವರ ವರಸೆ ಕೂಡ ಬದಲಾಗಿದೆ. ಸದಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾ ಗಮನ ಸೆಳೆಯುತ್ತಾರೆ. ಸೀರಿಯಲ್‌ನಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಸಿನಿಮಾಗಳಲ್ಲಿ ಮಾರ್ಡನ್ ಅವತಾರದಲ್ಲಿ ಪ್ರತ್ಯಕ್ಷ ಆಗುತ್ತಾರೆ. ಸದ್ಯ ಅವರು ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ ಸದ್ಯ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಗಾಗ ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂದ್ಹಾಗೆ ಆ ಸಿನಿಮಾದ ಹೆಸರು ‘ಕಿಲ್ಲರ್’. ಈ ಸಿನಿಮಾದಲ್ಲಿ ಜ್ಯೋತಿ ರೈ ಬಿಂದಾಸ್ ಲುಕ್ ಕೊಟ್ಟಿದ್ದಾರೆ. ಈಗಾಗಲೇ ಶೇರ್ ಮಾಡಿರುವ ಕೆಲವು ಪೋಸ್ಟರ್‌ಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.