Sandalwood Leading OnlineMedia

‘ಜಸ್ಟ್ ಪಾಸ್’ ಆಗಲು ಹೊರಟ ನಟ ಶ್ರೀ ಗೆ ಸಿಕ್ಕಳು ಹೀರೋಯಿನ್ – ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ ಸಿನಿಮಾ

ತರ್ಲೆ ವಿಲೇಜ್, ‘ಪರಸಂಗ, ‘ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸ ಸಬ್ಜೆಕ್ಟ್ ಹೊತ್ತು ಬಂದಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಜಸ್ಟ್ ಪಾಸ್ ಎಂದು ಶೀರ್ಷಿಕೆ ಇಡಲಾಗಿದೆ.

 

 `Vijayanand’ Movie Review : A story worth telling, a movie worth watching

 ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಇರುವುದೆಲ್ಲವ ಬಿಟ್ಟು, ಗಜಾನನ ಗ್ಯಾಂಗ್ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ ಜಸ್ಟ್ ಪಾಸ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

 

 

“ಯೂಟರ್ನ್ -2 ‘: ಪಿಜ್ಜಾ ಹುಡುಗನ ಹಾರರ್ ಟ್ರೈಲರ್ ! 

ಕೆ.ಎಂ ರಘು. ನಿರ್ದೇಶನದ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿತ್ತು. ಮೊಲದ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಇದೇ ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದೆ.  ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ಜಸ್ಟ್ ಪಾಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

 

Share this post:

Translate »