Sandalwood Leading OnlineMedia

“ಜಸ್ಟಿಸ್” ಫೆ.14ರಂದು ತೆರೆಗೆ

 

ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರೋನಾ ಕಾರ್ತೀಕ್, ಆನಂತರದಲ್ಲಿ ದರ್ಪಣ, ಪರಿಶುದ್ದಂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದೀಗ ಅವರ ಸಾರಥ್ಯದ ಮತ್ತೊಂದು ಚಿತ್ರ ‘ಜಸ್ಟೀಸ್’ ತೆರೆಗೆ ಬರಲು ಸಿದ್ದವಾಗಿದ್ದು, ಫೆ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ನೆಲದ ಕಾನೂನು ಮತ್ತು ಅದರಲ್ಲಿರುವ ಲೂಪ್ ಹೋಲ್ಸ್, ಜತೆಗೆ ಕಾನೂನಿನ ಒಳಿತು ಕೆಡುಕುಗಳನ್ನು ಈ ಚಿತ್ರ ಹೇಳಲಿದೆ. ಕೆಲ ಸಂದರ್ಭಗಳಲ್ಲಿ ನಿಜವಾದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಹೇಗೆಲ್ಲಾ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಜಸ್ಟೀಸ್ ಚಿತ್ರದ ಮೂಲಕ ನಿರ್ದೇಶಕ ಅರೋನಾ ಕಾರ್ತೀಕ್ ವೆಂಕಟೇಶ್ ಅವರು ಹೇಳಹೊರಟಿದ್ದಾರೆ. ಸರ್ಕಾರ್ ಸಾಹಿಲ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಪೆರೋಲ್ ನಿಂದ ಹೊರಹೋದ ವ್ಯಕ್ತಿ ಪದೇ ಪದೇ ಅಪರಾಧಗಳನ್ನು ಮಾಡ್ತಿರ್ತಾನೆ,ಆತನ ಹಿನ್ನೆಲೆ ಏನು, ಆತ ಯಾವಾಗಲೂ ಹೀಗೇ ಇದ್ದನೇ? ಅವನ ಹಿಂದಿನ ಜೀವನ ಎಷ್ಟು ಕ್ರೂರವಾಗಿತ್ತು, ಮಹಿಳಾ ಸಬಲೀಕರಣ ಮತ್ತು ಮಹಿಳಾ ಭದ್ರತೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎನ್ನುವುದೇ ಈ ಚಿತ್ರದ ಕಥಾಹಂದರ. ಮುದಾಸಿರ್ ಅಹ್ಮದ್ , ಅಹ್ಮದ್ ಅಲಿ ಖಾನ್, ಮೊಹ್ಮದ್ ಜಾವಿದ್, ಹರೀಶ್ ವನಿತ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವ ಜತೆಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಕೂಡ ಅರೋನಾ ಕಾರ್ತೀಕ್ ಅವರೇ ನಿರ್ವಹಿಸಿದ್ದಾರೆ. ಮೂಸೂರು ಸ್ವಾಮಿ ಅವರ ಛಾಯಾಗ್ರಹಣ, ಭಾರ್ಗವ್ ಅವರ ಸಂಕಲನ ಹಾಗೂ ವಿ.ಎಫ್.ಎಕ್ಸ್., ಕಂಬಿ ರಾಜು, ಮೈಸೂರು ರಾಜು ಸ್ಟಾರ್ ನಾಗಿ ಅವರ ನೃತ್ಯ,ಸುಪ್ರೀಂ ಸುಬ್ಬು, ಮಾಗಡಿ ಮಾರುತಿ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಸಾಹಿಲ್ ಖಾನ್, ರಿಯಾ ಭಾಸ್ಕರ್, ಚೇತನ್ ಕೃಷ್ಣ, ರಿವ್ಯೂ ನವಾಜ್, ಗಣೇಶ್ ರಾವ್, ಸುರೇಶ್ ಬಾಬು, ಮೊಹ್ಮದ್ ರಾಯ್, ಟಿಕ್ ಟಾಕ್ ನಾಸರ್ ಅವರ ತಾರಾಗಣ ಈ ಚಿತ್ರಕ್ಕಿದೆ.

 

 

 

Share this post:

Translate »