Sandalwood Leading OnlineMedia

ಮನೋರಂಜನೆಯ ಮಹಾಪೂರವನ್ನು ಹರಿಸಲು ಬರುತ್ತಿದ್ದಾರೆ “ಜಸ್ಟ್ ಪಾಸ್” ಹುಡುಗರು .

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದನ್ನೂ ಒದಿ ಮನೋರಂಜನೆಯ ಮಹಾಪೂರವನ್ನು ಹರಿಸಲು ಬರುತ್ತಿದ್ದಾರೆ “ಜಸ್ಟ್ ಪಾಸ್” ಹುಡುಗರು .

ಇದನ್ನೂ ಒದಿಸಾಮಾನ್ಯವಾಗಿ ಹೆಚ್ಚು ಅಂಕಗಳನ್ನು ತೆಗೆದುಕೊಂಡವರಿಗೆ ಸಾಕಷ್ಟು ಕಾಲೇಜುಗಳಿರುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ “ಜಸ್ಟ್ ಪಾಸ್” ಆದವರಿಗೆ ಅಂತಲೇ ಒಂದು ಕಾಲೇಜು ಇದೆ. ಆ ಕಾಲೇಜಿನ ವಿದ್ಯಾರ್ಥಿಗಳ ತರಲೆ, ತಮಾಷೆಗಳನ್ನು ನಿರ್ದೇಶಕ ರಘು ಈ ಚಿತ್ರದಲ್ಲಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಗಂತೂ ಅಪ್ಪಟ್ಟ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ. ಬರೀ ಇಷ್ಟೇ ಅಲ್ಲ. ಉತ್ತಮ ಸಂದೇಶ ಸಹ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.

ಇದನ್ನೂ ಒದಿ ಸೌತ್ ಇಂಡಿಯಾ ಸೆಲೆಬ್ರಿಟಿಗಳಿಂದ ‘ಕೆಟಿಎಂ’ ಟ್ರೇಲರ್ ರಿಲೀಸ್.. ಫೆ.16ಕ್ಕೆ ತೆರೆಗೆ ಬರ್ತಿದೆ ದೀಕ್ಷಿತ್ ಸಿನಿಮಾ..

ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸುಜಯ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಕೆ.ಎಂ.ರಘು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಒದಿ  ನಿರೂಪ್ ಭಂಡಾರಿ  ಚಿತ್ರದ ಟೈಟಲ್ ಬಿಡುಗಡೆ *ಸತ್ಯ ಸನ್ ಆಫ್ ಹರಿಶ್ಚಂದ್ರ

ಶ್ರೀ, ಪ್ರಣತಿ, ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Share this post:

Related Posts

To Subscribe to our News Letter.

Translate »