Left Ad
ನಾಯಕ ಶ್ರೀ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಶುಭಕೋರಿದ "ಜಸ್ಟ್ ಪಾಸ್" ಚಿತ್ರತಂಡ . - Chittara news
# Tags

ನಾಯಕ ಶ್ರೀ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಶುಭಕೋರಿದ “ಜಸ್ಟ್ ಪಾಸ್” ಚಿತ್ರತಂಡ .

 

ಕೆ.ಎಂ.ರಘು ನಿರ್ದೇಶನದ “ಜಸ್ಟ್ ಪಾಸ್” ಚಿತ್ರದ ನಾಯಕ ಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಾಯಕನ ಹುಟ್ಟುಹಬ್ಬಕ್ಕೆ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಶುಭಾಶಯ ತಿಳಿಸಿದೆ.ಈ ಹಿಂದೆ “ಇರುವುದೆಲ್ಲವ ಬಿಟ್ಟು” “ಗಜಾನನ ಅಂಡ್ ಗ್ಯಾಂಗ್ ” “ಹೊಂದಿಸಿ ಬರೆಯಿರಿ” ಚಿತ್ರಗಳಲ್ಲಿ ನಟಿಸಿರುವ ನಾಯಕ ಶ್ರೀ ಅವರಿಗೆ “ಜಸ್ಟ್ ಪಾಸ್” ನಾಲ್ಕನೇ ಚಿತ್ರ.

ಇನ್ನೂ ಓದಿ  ’ವೀರಪುತ್ರ’ನಾದ ಅಗ್ನಿಸಾಕ್ಷಿ ಸಿದ್ದಾರ್ಥ್…ಚಾಕಲೇಟ್ ಹೀರೋ ವಿಜಯ್ ಸೂರ್ಯ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಗಿಫ್ಟ್

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಶ್ರೀ ಅವರಿಗೆ ನಾಯಕಿಯಾಗಿ ಪ್ರಣತಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.

Spread the love
Translate »
Right Ad