ಹೈದರಾಬಾದ್: ಜಪಾನ್ ನಲ್ಲಿ ನಡೆದ ಭೂಕಂಪದಿಂದ ಜ್ಯೂ.ಎನ್ ಟಿಆರ್ ಕೂದಲೆಳೆಯಲ್ಲಿ ಪಾರಾಗಿದ್ದು, ಸೇಫ್ ಆಗಿ ತವರಿಗೆ ಮರಳಿದ್ದಾರೆ.
ಕ್ರಿಸ್ ಮಸ್ ಸಂದರ್ಭದಲ್ಲಿ ಜ್ಯೂ.ಎನ್ ಟಿಆರ್ ಕುಟುಂಬ ಸಮೇತ ಜಪಾನ್ ಗೆ ಪ್ರವಾಸ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಭೂಕಂಪ ನಡೆದಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.
ಕ್ರಿಸ್ ಮಸ್ ಸಂದರ್ಭದಲ್ಲಿ ಜ್ಯೂ.ಎನ್ ಟಿಆರ್ ಕುಟುಂಬ ಸಮೇತ ಜಪಾನ್ ಗೆ ಪ್ರವಾಸ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಭೂಕಂಪ ನಡೆದಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.
ಆದರೆ ತವರಿಗೆ ಮರಳಿರುವ ಜ್ಯೂ.ಎನ್ ಟಿಆರ್ ಸೋಷಿಯಲ್ ಮೀಡಿಯಾ ಪೇಜ್ ಎಕ್ಸ್ ನಲ್ಲಿ ತಾವು ಸೇಫ್ ಆಗಿರುವುದಾಗಿ ಸಂದೆಶ ಬರೆದುಕೊಂಡಿದ್ದಾರೆ. ಜೊತೆಗೆ ಅಲ್ಲಿನ ಜನರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ. ‘ನಾನು ಸೇಫ್ ಆಗಿ ಮನೆಗೆ ಮರಳಿದ್ದೇನೆ. ಆದರೆ ಭೂಕಂಪಕ್ಕೀಡಾದ ಜಪಾನ್ ಜನತೆಗೂ ಯಾವುದೇ ತೊಂದರೆಯಾಗದಿರಲೆಂದು ಪ್ರಾರ್ಥಿಸುತ್ತೇನೆ. ಕಳೆದ ಒಂದು ವಾರ ಅಲ್ಲಿಯೇ ಕಳೆದಿದ್ದೆ. ಅಲ್ಲಿ ಭೂಕಂಪದಿಂದ ತೊಂದರೆಗೀಡಾದವರ ಬಗ್ಗೆ ದುಃಖವಿದೆ. ಬೇಗನೇ ಎಲ್ಲರೂ ಚೇತರಿಸಿಕೊಳ‍್ಳಲಿ ಎಂದು ಹಾರೈಸುತ್ತೇನೆ’ ಎಂದು ಜ್ಯೂ.ಎನ್ ಟಿಆರ್ ಹೇಳಿದ್ದಾರೆ.