Sandalwood Leading OnlineMedia

ಜೊತೆಯಲೆ ಇರಲೇ ಸಾಂಗ್ ರಿಲೀಸ್, ರೊಮ್ಯಾಂಟಿಕ್ ಡ್ರಾಮಾ ಮೂಲಕ ಹೀರೋ ಆಗಿ ಜಾಯ್

ಈ ಹಿಂದೆ ಜೆ.ಜೆ. ಮೂವೀಸ್ ಬ್ಯಾನರ್ ಮೂಲಕ ನಾನೊಂಥರಾ ಎಂಬ ಆಕ್ಷನ್ ಚಿತ್ರವನ್ನು ನಿರ್ಮಿಸಿದ್ದ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಅವರು ಇದೀಗ ತಮ್ಮ‌ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ಸದ್ಯ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಜಾಯ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಯುವ ನಿರ್ದೇಶಕ ಆರ್ಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಯಲೇ ಇರಲೇ ಎಂಬ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್ ಮಾಡುವ ಮೂಲಕ ಜಾಯ್ ನಟನೆಯ ನೂತನ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ಇದನ್ನೂ ಓದಿ ರಜನಿಕಾಂತ ಅಭಿನಯದ ಲಾಲ ಸಲಾಮ್ ಮೊದಲ ದಿನದ ಪ್ರದರ್ಶನಕ್ಕೆ ಪ್ರೇಕ್ಷಕರಿಲ್ಲ..

ಈ ಸಂದರ್ಭದಲ್ಲಿ ನಿರ್ದೇಶಕ ಆರ್ಯನ್ ಮಾತನಾಡುತ್ತ ಪ್ರೊಡಕ್ಷನ್ ನಂ.2 ಚಿತ್ರದ ಮೂಲಕ. ಜಾಯ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದೇವೆ. ಅವರು ಆಕ್ಷನ್, ಡ್ಯಾನ್ಸ್, ಆಕ್ಟಿಂಗ್ ಎಲ್ಲಾ ಕಲಿತು ಫಿಟ್ ನೆಸ್ ಮೇಂಟೇನ್ ಮಾಡಿಕೊಂಡು ಬಂದಿದ್ದಾರೆ. ಇದೊಂದು ರೊಮ್ಯಾಂಟಿಕ್ ಯೂತ್ಫುಲ್ ಡ್ರಾಮಾ ಸಬ್ಜೆಕ್ಟ್ ಆಗಿದ್ದು, ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಈ ರೊಮ್ಯಾಂಟಿಕ್ ಸಾಂಗನ್ನು ರಿಲೀಸ್ ಮಾಡುತ್ತಿದ್ದೇವೆ. ಗೌಸ್ ಪೀರ್ ಅವರು ಸಾಹಿತ್ಯ ಬರೆದಿರುವ ಈ ಹಾಡನ್ನು ರೋಣದ ಬಕ್ಕೇಶ್ ಅವರು ಅದ್ಭುತವಾಗಿ ಕಂಪೋಸ್ ಮಾಡಿಕೊಟ್ಟಿದ್ದಾರೆ. ಅಷ್ಟೇ ಚೆನ್ನಾಗಿ ಛಾಯಾಗ್ರಾಹಕ ಅಲನ್ ಭರತ್ ಅವರು ಹಾಡನ್ನು ಸೆರೆ ಹಿಡಿದುಕೊಟ್ಟಿದ್ದಾರೆ. ಹರಿಚರಣ್ ಅವರು ಚೆನ್ನೈನಿಂದ ಬಂದು ಹಾಡಿದ್ದಾರೆ. ನಾನು ಈ ಹಿಂದೆ ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಅಸೋಸೊಯೇಟ್ ಆಗಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮಾರ್ಚ್ ಎಂಡ್ ನಿಂದ ಚಿತ್ರದ ಟಾಕಿ ಪೋರ್ಷನ್ ಶುರು ಮಾಡಿ ಗೋವಾ ಸಿರ್ಸಿ, ಹೊನ್ನಾವರ, ಗೋಕರ್ಣ ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದೇವೆ. ಡಿಸೆಂಬರ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡೋ ಯೋಜನೆಯಿದೆ. ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಮದರ್ ಸೆಂಟಿಮೆಂಟ್, ಸಿಸ್ಟರ್ ಸೆಂಟಿಮೆಂಟ್, ಎಮೋಷನ್ ಸೇರಿದಂತೆ ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳೂ ಇರುತ್ತವೆ. ಚಿತ್ರದಲ್ಲಿ ನಾಯಕಿಯಾಗಿ ಸ್ನಿಗ್ಧಾ ಶೆಟ್ಟಿ ಅವರು ಅಭಿನಯಿಸುತ್ತಿದ್ದಾರೆ, ಅವರಿಗೂ ಇದು ಮೊದಲ ಚಿತ್ರ ಎಂದರು.

ಇದನ್ನೂ ಓದಿ ‘ಕಮರೊಟ್ಟು 2’ ಟ್ರೈಲರ್ ಬಿಡುಗಡೆ ಗೆಳೆಯನ ಸಿನಿಮಾಗೆ ಸಾತ್ ಕೊಟ್ಟ ಅಜಯ್ ರಾವ್.

ನಂತರ ನಿರ್ಮಾಪಕಿ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಮಾತನಾಡುತ್ತ ನಮ್ಮ ಮೊದಲ ಚಿತ್ರಕ್ಕೆ ನೀವೆಲ್ಲ ತುಂಬಾ ಸಪೋರ್ಟ್ ಮಾಡಿದ್ದೀರಿ. ಬೇರೆಯವರ ಮೇಲೆ ಬಂಡವಾಳ ಹಾಕುವ ಬದಲು ನಮ್ಮ ಮಗನ ಪ್ರತಿಭೆಯನ್ನು ಬೆಳಕಿಗೆ ತರಬೇಕೆಂದು ಈ ಸಿನಿಮಾ ಮಾಡುತ್ತಿದ್ದೇನೆ. ಈಗಿನ ಕಾಲದ ಯೂತ್ ಬೇಸ್ ಮಾಡಿಕೊಂಡು ನಿರ್ದೇಶಕರು ಉತ್ತಮವಾದ ಕಥೆಯನ್ನು ರಡಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ ವಿಜಯ ರಾಘವೇಂದ್ರ ಅಭಿನಯದ “ಜೋಗ್ 101” ಚಿತ್ರದ ಮೊದಲ ಹಾಡು ಬಿಡುಗಡೆ .

ನಾಯಕ ನಟ ಜಾಯ್ ಮಾತನಾಡಿ ಈ ಹಿಂದೆ ಸಪೋರ್ಟಿವ್ ಕ್ಯಾರೆಕ್ಟರ್ ಮಾಡಿದ್ದೆ. ನಂತರ ಮಾಡೆಲಿಂಗ್ ಕಡೆ ಗಮನ ಹರಿಸಿದೆ. ಈಗ ಸಿನಿಮಾಗೆ ಬೇಕಾದ ಎಲ್ಲಾ ರೀತಿಯ ಟ್ರೈನಿಂಗ್ ಮಾಡಿಕೊಂಡು ಮತ್ತೆ ತೆರೆಮೇಲೆ ಬರುತ್ತಿದ್ದೇನೆ. ಸಪೋರ್ಟ್ ಮಾಡಿ ಎಂದರು. ಸಾಹಿತಿ ಗೌಸ್ ಪೀರ್ ಮಾತನಾಡಿ ನಾವೆಲ್ಲ ಡಿಸ್ಕಸ್ ಮಾಡಿ ಒಂದೊಳ್ಳೆ ಸಬ್ಜೆಕ್ಟ್ ರೆಡಿ ಮಾಡಿಕೊಂಡಿದ್ದೇವೆ. ಟೀನೇಜರ್ ಕಥೆ. ಕಾಲೇಜಿನಲ್ಲಿ ಹುಡುಗ ಹುಡುಗಿ ಮಧ್ಯೆ ನಡೆಯೋ ಪ್ರೀತಿ, ಪ್ರೇಮದ ಕಥೆ. ಚಿತ್ರದಲ್ಲಿ ಎಲ್ಲಾ ಬಾಂಡಿಂಗ್ ಬಗ್ಗೆ ಹೇಳಲಾಗಿದೆ. ರೋಣದ ಬಕ್ಕೇಶ್ ಅವರು 5 ಹಾಡುಗಳನ್ನು ಮಾಡುತ್ತಿದ್ದಾರೆ. ಈ ಹಾಡು ಇಷ್ಟು ಚೆನ್ನಾಗಿ ಮೂಡಿಬರಲು ಗಾಯಕ ಹರಿಚರಣ್ ಅವರೇ ಕಾರಣ. ಈ ಸಾಂಗ್ ನಮ್ಮ ಸಿನಿಮಾಗೆ ಇನ್ ವಿಟೇಶನ್ ಇದ್ದಹಾಗೆ. ಅದನ್ನು ನೀವೆಲ್ಲ ಜನರಿಗೆ ತಲುಪಿಸಿ ಎಂದು ಮಾಧ್ಯಮದವರಲ್ಲಿ ಕೇಳಿಕೊಂಡರು.

Share this post:

Related Posts

To Subscribe to our News Letter.

Translate »